Site icon Samastha News

Lawyer Jagadish: ಬಿಗ್’ಬಾಸ್ ಅನ್ನೇ ಖರೀದಿಸುತ್ತೇನೆ ಎನ್ನುತ್ತಿರುವ ಲಾಯರ್ ಜಗದೀಶ್ ಆಸ್ತಿ ಎಷ್ಟಿದೆ?

Lawyer Jagadish

Lawyer Jagadish

ಲಾಯರ್ ಜಗದೀಶ್ ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣದ ಮೂಲಕ‌ ಬಹಳ ಪ್ರಸಿದ್ಧರು. ಟೋಲ್’ನ ವಿಡಿಯೋ ಹಾಕಿ ಜನಪ್ರಿಯತೆ ಗಿಟ್ಟಿಸಿಕೊಂಡು ಪ್ರಚಾರದ ರುಚಿ ಕಂಡೊದ್ದ ಜಗದೀಶ್ ಆ ನಂತರ ಅದನ್ನೇ ಮುಂದುವರೆಸಿದ್ದರು. ಪೊಲೀಸರ ಬಗ್ಗೆ, ರಾಜಕಾರಣಿಗಳ ಬಗ್ಗೆ ಟೀಕೆಗಳನ್ನು, ನಿಂದನೆಗಳನ್ನು ಮಾಡುತ್ತಲಿದ್ದ ಜಗದೀಶ್, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಸಹ ಸಾಕಷ್ಟು ಹೆಸರು ಮಾಡಿದರು. ಇದೀಗ ಬಿಗ್’ಬಾಸ್ ಗೆ ಹೋಗಿರುವ ಜಗದೀಶ್ ಅಲ್ಲಿಯೂ ತಮ್ಮ ಅಬ್ಬರ ಹೆಚ್ಚು ಮಾಡಿದ್ದಾರೆ. ಬಿಗ್’ಬಾಸ್ ಗೆ ಬೆದರಿಕೆ ಹಾಕಿರುವುದು ಮಾತ್ರವೇ ಅಲ್ಲದೆ, ಬಿಗ್’ಬಾಸ್ ಅನ್ನೇ ಖರೀದಿ ಮಾಡುತ್ತೀನಿ ಎಂದಿದ್ದಾರೆ. ಅಂದಹಾಗೆ ಜಗದೀಶ್ ಅಷ್ಟೋಂದು ಶ್ರೀಮಂತರೆ?

‘ಬಿಗ್’ಬಾಸ್ ಖರೀದಿ ಮಾಡಿಬಿಡುತ್ತೇನೆ. ಬಿಗ್’ಬಾಸ್ ಬಾಗಿಲು ಒಡೆಸುತ್ತೇನೆ, ಬಿಗ್ ಬಾಸ್ ಮನೆಗೆ ಯಾರೂ ಕಾಲು ಇಡದ ಹಾಗೆ ಮಾಡುತ್ತೀನಿ, ಬಿಗ್’ಬಾಸ್ ಮನೆ ಒಳಗೆ ಹೆಲಿಕಾಪ್ಟರ್ ಇಳಿಸುತ್ತೀನಿ ಎಂದೆಲ್ಲ ಭಾರಿ ಡೈಲಾಗ್ ಗಳನ್ನು ಜಗದೀಶ್ ಹೊಡೆದಿದ್ದಾರೆ. ನಿಜಕ್ಕೂ ಈ ಮನುಷ್ಯನಿಗೆ ಅಷ್ಟು ತಾಕತ್ತು ಇದೆಯಾ? ಅಥವಾ ಎಲ್ಲ ಲೊಳಲೊಟ್ಟೆಯಾ?

ಜಗದೀಶ್, ಹಿಂದೊಮ್ಮೆ ತಾವೇ ಘೋಷಿಸಿಕೊಂಡಂತೆ ಅವರು ಆಗರ್ಭ ಶ್ರೀಮಂತರು. ಅವರ ಬಳಿ ಭಾರಿ ದೊಡ್ಡ ಮನೆ ಇದೆ, ಅದನ್ನು ಅವರ ತಂದೆ ಕಟ್ಟಿಸಿಕೊಟ್ಟಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಕೆಲವು ಕಡೆ ಜಮೀನು ಇದೆಯಂತೆ. ಜಗದೀಶ್ ಬಳಿ ಒಂದು ಕಾರು ಒಂದು ಬೈಕ್ ಇದೆ. ತಂದೆ ಮಾಡಿಟ್ಟಿರುವ ಮನೆಯನ್ನೂ ಸೇರಿಸಿದರೆ ಜಗದೀಶ್ ಬಳಿ ಸುಮಾರು 50 ರಿಂದ 60 ಕೋಟಿ ಆಸ್ತಿ ಇರಬಹುದು ಎನ್ನಲಾಗುತ್ತಿದೆ. ಇನ್ನು ಅವರ ವಕೀಲಿ ವೃತ್ತಿ ಸಾಧಾರಣವಾಗಿ ನಡೆಯುತ್ತಿದೆಯಂತೆ.

Bigg Boss: ಗೆಳೆಯನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರಾ ಪ್ರಶಾಂತ್ ಸಂಬರ್ಗಿ?

ವಕೀಲರಾಗಿ ತಾವು ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದೆಲ್ಲ ಹಾರಾಡುವ ಜಗದೀಶ್ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಗದೀಶ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರನ್ನು ಬಂಧಿಸಲಾಗಿತ್ತು. ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ. ಬಂಧನದ ಬಳಿಕ ಜಗದೀಶ್ ಸಾಮಾಜಿಕ ಜಾಪತಾಣದಿಂದ ಕೆಲ ಸಮಯ ಕಾಣೆ ಆಗಿದ್ದರು. ಆ ನಂತರ ಹಠಾತ್ತನೆ ಮರಳಿ ಬಂದರು, ಅದರ ಬೆನ್ನಲ್ಲೆ ಈಗ ಬಿಗ್ ಬಾಸ್ ಮನೆ ಸೇರಿದ್ದಾರೆ.

Exit mobile version