Site icon Samastha News

Weekly Horoscope: ಆಗಸ್ಟ್ ತಿಂಗಳ ಮೊದಲ ವಾರ ಹೇಗಿರಲಿದೆ ನಿಮ್ಮ ಭವಿಷ್ಯ?

weekly Horoscope

Weekly Horoscope

ಆಗಸ್ಟ್‌ ತಿಂಗಳ ಮೊದಲ ಪರಿಪೂರ್ಣ ವಾರ ಆಗಸ್ಟ್ 05 ದಿಂದ ಪ್ರಾರಂಭವಾಗಿ ಆಗಸ್ಟ್ 11 ರವರೆಗೆ ಇರಲಿದೆ. ಈ ವಾರದಲ್ಲಿ ಕೆಲವು ಗ್ರಹಗಳ ಚಲನೆ ಇದ್ದು ಇದು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಎಲ್ಲ ರಾಶಿಗಳು ಈ ಗ್ರಹಗಳ ಚಲನೆಯಿಂದ ಒಂದಲ್ಲ ಒಂದು ರೀತಿ ಪರಿಣಾಮಕ್ಕೆ ಒಳಗಾಗಲಿವೆ. ಹಾಗಿದ್ದರೆ ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಮೇಷ ರಾಶಿಯವರಿಗೆ ಶುಭ ಫಲ ಹೆಚ್ಚಾಗಿ ಇರಲಿದೆ. ನಿಮ್ಮ ಮಾತಿನಿಂದ ಕೆಲವರಿಗೆ ನೋವಾಗುವುದು. ಮಾತಿನಿಂದ ನಷ್ಟವೂ ಆಗಲಿದೆ. ಹಣ ಬರುತ್ತಿದೆ ಅದನ್ನು ಉಳಿತಾಯ ಮಾಡಿ. ವಾಹನ ಯೋಗ ಇದೆ. ಕೆಲವು ಖರ್ಚುಗಳು ಸಹ ಇವೆ. ಇತರರನ್ನು ತುಚ್ಛವಾಗಿ ಕಾಣಬೇಡಿ, ಎಲ್ಲರಿಗೂ ಗೌರವ ನೀಡಿ. ಮಾಡಿದ ಕೆಲಸಕ್ಕೆ ಫಲ ಸಿಗಲಿದೆ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಮಿಶ್ರಫಲವಿದೆ. ಪ್ರೇಮಿಗಳಲ್ಲಿ, ಪತಿ-ಪತ್ನಿಯಲ್ಲಿ ಜಗಳ ನಡೆಯಲಿದೆ. ಗೊಂದಲದ ಮನಸ್ಥಿತಿ ಮುಂದುವರೆಯುವುದು, ನೌಕರಿಯಲ್ಲಿ ಒತ್ತಡ ಹೆಚ್ಚಾಗುತ್ತದೆ. ಅದರ ನಿವಾರಣೆ ಮಾಡಿಕೊಳ್ಳುವ ಕಡೆ ಗಮನಕೊಡಿ. ಕೆಲಸ ಮಾಡಿ ಫಲ ನಿರೀಕ್ಷಿಸಬೇಡಿ. ಲಾಭ ತನ್ನಂತಾನೆ ಬರುವುದು. ನಿಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಿ, ರೈತರಿಗೆ ಸಹ ಲಾಭ ನಿಧಾನವಾಗಲಿದೆ.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರ ಒಳ್ಳೆಯ ದಿನಗಳಿಲ್ಲ. ಹತ್ತಿರದ ಸಂಬಂಧಿ ಜೊತೆಗೆ ಜಗಳ, ಅಣ್ಣ-ತಮ್ಮಂದಿರ ಸಹಕಾರ ಸಿಗುವುದಿಲ್ಲ. ಅನಾರೋಗ್ಯ ಕಾಡಲಿದೆ. ಸೋಮಾರಿತನ ಸೇರಿಕೊಳ್ಳಲಿದೆ. ಉದ್ಯೋಗ ನಷ್ಟದ ಸಾಧ್ಯತೆ ಇದೆ. ಇದರ ಜೊತೆಗೆ ಅನವಶ್ಯಕ ಖರ್ಚುಗಳು ಹೆಚ್ಚಾಗಲಿದೆ. ಕೆಲವು ನಿಂದನೆಗಳನ್ನು ಸಹ ಕೇಳಬೇಕಾದೀತು. ಪತಿ-ಪತ್ನಿಯ ಮೇಲೆ ಕೋಪ ಮಾಡಿಕೊಳ್ಳುವಿರಿ. ತೀರ ನಿಷ್ಠುರ ಆಗಲಿದ್ದೀರಿ.

ಕಟಕ ರಾಶಿ
ಕಟಕ ರಾಶಿಯವರಿಗೆ ಈ ವಾರ ಒಳಿತಾಗಲಿದೆ. ಬಹಳ ದಿನಗಳಿಂದ ಇದ್ದ ಸಮಸ್ಯೆ ಪರಿಹಾರ ಆಗಲಿದೆ. ಜಮೀನು ನಿಮಗೆ ಸಿಗಲಿದೆ. ಅನಾರೋಗ್ಯ ಕಾಡಲಿದೆ, ಹಣದ ನಷ್ಟವೂ ಆಗಲಿದೆ. ಕುಟುಂಬದಲ್ಲಿ ಸಣ್ಣ ಜಗಳಗಳು ಆಗಲಿವೆ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳು ನಿಮ್ಮ ಹೆಗಲಿಗೆ ಬಿಳಲಿವೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳು ಇವು. ಪತಿ-ಪತ್ನಿಯಲ್ಲಿ ಪ್ರೀತಿ ಹೆಚ್ಚಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ವಾರ ಮಿಶ್ರ ಫಲವಿದೆ. ಸಮಸ್ಯೆಗೆ ಸಿಲುಕಿಕೊಂಡರೂ ಹೆಚ್ಚು ನಷ್ಟ ಆಗದು. ಸಮಸ್ಯೆಗಳು ಬಂದರೂ ನಿವಾರಣೆ ಆಗಲಿವೆ. ಆದಾಯ ಇಳಿಮುಖ ಆಗುವುದಿಲ್ಲ. ಹಿರಿಯರ ಮಾತು ಕೇಳುವಿರಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಲಿದ್ದೀರಿ. ಯಾವ ವಿಷಯದ ಬಗ್ಗೆಯೂ ಆತುರದ ನಿರ್ಧಾರ ಬೇಡ. ಹೊಸ ವ್ಯಾಪಾರಗಳಿಗೆ ಕೈಹಾಕುವ ಮನಸ್ಸಾಗುವುದು.

ಕನ್ಯಾ ರಾಶಿ

ಕನ್ಯಾರಾಶಿಗೆ ಒಳ್ಳೆಯ ವಾರ ಇದು. ಮನೆ ಸದಸ್ಯರ ಮೇಲೆ ಖರ್ಚು ಮಾಡುವಿರಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವಿರಿ. ಉಳಿತಾಯ ಮಾಡಿರುವ ಹಣದ ಸದುಪಯೋಗ ಆಗಲಿದೆ. ಸಾಲದ ಹೊರೆ ಹೊತ್ತುಕೊಳ್ಳಬೇಡಿ. ಇರುವ ಕೆಲಸ ಬಿಡುವ ಯೋಚನೆ ಮುಂದೂಡಿ, ಕಟ್ಟಡ ನಿರ್ಮಾಣ ಕಾರ್ಯ ನಿಧಾನವಾಗಲಿದೆ, ಆತಂಕ ಬೇಡ. ಖರ್ಚುಗಳು ಹೆಚ್ಚಾಗಲಿವೆ ಎಚ್ಚರವಿರಲಿ.

ತುಲಾ ರಾಶಿ

ಮಾಡುವ ಕೆಲಸದಲ್ಲಿ ಸ್ವಲ್ಪ ಮಟ್ಟಿನ‌ ಹಿನ್ನಡೆ ಕಾಣಲಿದ್ದೀರಿ. ಇಷ್ಟವಾಗುವ ಕೆಲಸವನ್ನು ಮಾಡದೇ ಹೋಗುವಿರಿ. ಹೊಸ ಕೆಲಸ ಹಿಡಿದರೂ ಆಸಕ್ತಿ ಪೂರ್ಣವಾಗಿ ಇರದು.
ಪತಿ/ಪತ್ನಿಯ ಆರೋಗ್ಯ ಸುಧಾರಿಸುವುದು ನೆಮ್ಮದಿ ತರಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ. ಉದ್ಯಮಿಗಳಿಗೆ ಹಣಕಾಸಿನ ಲಾಭ ಆಗಲಿದೆ. ದೇವರ ಆರಾಧನೆ ಮರೆಯಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಶುಭ. ಗುರು ಬಲವಿದೆ. ಸಂಸಾರದಲ್ಲಿ ಸುಖ ಇರಲಿದೆ. ಮಾನಸಿಕ ನೆಮ್ಮದಿ ದೊರಕಲಿದೆ. ಎಲ್ಲ ಕಾರ್ಯಗಳಲ್ಲಿ ಧೈರ್ಯ ಇರಲಿದೆ. ನಿಮ್ಮ ಒಳ್ಳೆಯ ತನವನ್ನು ಜನ ಗುರುತಿಸುವರು, ನಾಯಕತ್ವ ಗುಣಕ್ಕೆ ತಕ್ಕ ಸ್ಥಾನ ಸಿಗಲಿದೆ. ಅಧಿಕಾರ ದೊರೆತಾಗ ಒಳ್ಳೆಯ ಕೆಲಸ ಮಾಡಿರಿ. ನೌಕರಿ ಮಾಡುವ ಸ್ಥಳದಲ್ಲಿ ಗೌರವ, ಸ್ಥಾನ ಹೆಚ್ಚಲಿದೆ, ಹಣದ ಆಗಮನ ಆಗಲಿದೆ.

ಧನು ರಾಶಿ

ಧನು ರಾಶಿಯವರಿಗೆ ಸಮಯ ಇನ್ನೂ ಸರಿಹೋಗಿಲ್ಲ. ಸಂಬಂಧಿಗಳಿಂದಲೇ ಅವಮಾನ ಆಗಲಿದೆ, ನಿರ್ಲಕ್ಷಿಸಿ, ಅತಿಯಾದ ಬುದ್ಧಿವಂತಿಕೆ ಪ್ರದರ್ಶನದಿಂದ ನಷ್ಟ ಅನುಭವಿಸಲಿದ್ದೀರಿ. ಇಷ್ಟವಾದವರ ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳು ವಿಧ್ಯಾಬ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳಲಿದ್ದಾರೆ. ದೇವಸ್ಥಾನಕ್ಕೆ ಹೋಗುವ ಅವಕಾಶ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಲಿವೆ. ಸ್ನೇಹಿತರಿಂದ ಅವಮಾನ ಮತ್ತು ಮೋಸ ನಡೆಯಲಿದೆ. ಪತಿ/ಪತ್ನಿಯ ನೆರವು ಸಿಗಲಿದೆ.

ಮಕರ ರಾಶಿ

ಮಕರ ರಾಶಿಗೆ ಶುಭ ದಿನ ನಡೆಯುತ್ತಿವೆ. ಹೊಸ ವಾಹನ ಖರೀದಿ ಯೋಗವಿದೆ. ಸ್ತ್ರೀಯರೊಟ್ಟಿಗೆ ವಿನಮ್ರತೆಯಿಂದ ವರ್ತಿಸಿ, ದ್ವೇಷ ಬಿಡಿ, ಇಷ್ಟಪಟ್ಟವರಿಗೆ ಕೆಲವು ಸಮಸ್ಯೆ ಬರಲಿವೆ. ಶತ್ರು ಕಿರಿ-ಕಿರಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಆದರೆ ವಿದ್ಯಾರ್ಥಿಗಳು ಮೈ ಮರೆಯಬಾರದು. ಸಂಬಂಧಿಕರ ಬಗ್ಗೆ ಬೇಸರ ಮೂಡಲಿದೆ.

ಕುಂಭ ರಾಶಿ

ಕುಂಭ ರಾಶಿಗೆ ಮಿಶ್ರಫಲವಿದೆ. ಧೈರ್ಯದಿಂದ ಮುನ್ನುಗ್ಗುವಿರಿ, ಆದರೆ ಕೆಲಸದಲ್ಲಿ ಎಚ್ಚರಿಕೆಯೂ ಇರಲಿ. ನಂಬಿದವರಿಂದ ನಿಮಗೆ ಬೆಂಬಲ ಸಿಗಲಿದೆ. ಹಿರಿಯ ಮಾತಿಗೆ ಗೌರವ ಇರಲಿ. ಧಾರ್ಮಿಕ ಕಾರ್ಯದತ್ತ ಒಲವು ಮೂಡಲಿದೆ. ಕುಟುಂಬದವರ ಆರೋಗ್ಯದ ಬಗ್ಗೆ ಗಮನ ಇರಲಿ. ಕೆಲವು ಗೆಳೆಯರು ಇನ್ನಷ್ಟು ಹತ್ತಿರ ಆಗಲಿದ್ದಾರೆ. ಹೊಸ ಹೂಡಿಕೆ ಮಾಡಲಿದ್ದೀರಿ, ಹಣವನ್ನೂ ಗಳಿಸಲಿದ್ದೀರಿ.

Rahul Gandhi: ರಾಹುಲ್ ಗಾಂಧಿ ಹೊಲೆದ ಚಪ್ಪಲಿಗೆ 10 ಲಕ್ಷ ಆಫರ್, ಆದರೂ ಮಾರದ ಅಂಗಡಿಯವ

ಮೀನ ರಾಶಿ

ಈ ರಾಶಿಗೂ ಸಹ ಮಿಶ್ರ ಫಲವೇ ಇದೆ. ಕೆಲವು ಸಮಸ್ಯೆಗಳು ಬರಲಿವೆ ಆದರೆ ಶಾಶ್ವತವಲ್ಲ. ಶಾಂತವಾಗಿರಿ ಮುಂದೆ ಒಳ್ಳೆಯದಿನಗಳಿವೆ. ಮನಸ್ಸು ಶಾಂತವಾಗಿಟ್ಟುಕೊಳ್ಳಲು ಯತ್ನಿಸಿ, ಹಣಕಾಸಿನ ವ್ಯವಹಾರ ಮಾಡುವಾಗ ಹುಷಾರು. ಹಣ ಕಳೆಯುವ ಆತಂಕವೂ ಇದೆ. ಕಷ್ಟವಿದೆಯೆಂದು ಸಾಲದ ಮೊರೆ ಹೋಗಬೇಡಿ. ಆದಾಯವನ್ನು ರಕ್ಷಿಸಿಕೊಳ್ಳಿ. ಯಾವುದೇ ಹಣಕಾಸಿನ ವಿಚಾರವನ್ನೂ ಎಚ್ಚರಿಕೆಯಿಂದ ನಿಭಾಯಿಸಿ, ಹೊಸ ವಸ್ತುಗಳ ಖರೀದಿಸುವಾಗ ಯೋಚಿಸಿ.

Exit mobile version