Baba Vanga
ಜಗತ್ತುನ ಹಲವು ದೇಶಗಳು ಬಾಬಾ ವಂಗಾ ಭವಿಷ್ಯವನ್ನು ನಂಬುತ್ತವೆ. ಹಲವು ವರ್ಷಗಳಿಂದಲೂ ಬಾಬಾ ವಂಗಾ ಭವಿಷ್ಯದ ಬಗ್ಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೆ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಹತ್ಯಾ ಪ್ರಯತ್ನವನ್ನು ಸಹ ಬಾಬಾ ವಂಗಾ ಮೊದಲೇ ಊಹಿಸಿದ್ದರು ಎನ್ನಗುತ್ತಿದೆ. ಬಾಬಾ ವಂಗಾ ಹೇಳಿರುವ ಪ್ರಕಾರ 2024 ರಲ್ಲಿ ಭೂಮಿಗೆ ಗಂಡಾಂತರವೊಂದು ಕಾದಿದೆ.
ಬಾಬಾ ವಂಗಾ ಭವಿಷ್ಯದ ಪ್ರಕಾರ 2024 ರಲ್ಲಿ ಭೂಮಿಗೆ ಗಂಡಾಂತರವಿದೆ. ಭೂಮಿಯ ಕೆಲವು ಭಾಗಗಳಲ್ಲಿ ಭಾರಿ ಶಾಖದ ಅಲೆಗಳು ಬೀಸಲಿವೆ. ಇದರಿಂದ ಹಲವರು ಜೀವ ಕಳೆದುಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಮೆಕ್ಕಾದಲ್ಲಿ ಭಾರಿ ಬಿಸಿಲಿನ ಜಳದಿಂದ ಬೀದಿ-ಬೀದಿಯಲ್ಲಿ ಜನ ಸತ್ತಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಭಾರತದ ದೆಹಲಿ ಹಾಗೂ ಇತರೆ ಕಡೆಗಳಲ್ಲಿಯೂ ಭಾರಿ ಬಿಸಿಲಿನಿಂದ ಜನ ತತ್ತರಿಸಿದರು. ಆದರೆ ಬಾಬಾ ವಂಗಾ ಹೇಳೊರುವಂತೆ ಬಿಸಿಲಿನ ಅಲೆ ಇನ್ನೂ ಹೆಚ್ಚಾಗಲಿದೆ.
ಇದು ಮಾತ್ರವೇ ಅಲ್ಲದೆ, ಭೂಮಿಯ ಭ್ರಮಣ ವಿಧಾನದಲ್ಲೂ ಬದಲಾವಣೆ ಆಗಲಿದೆಯಂತೆ. ಇದರಿಂದ ವಾತಾವರಣದ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದ್ದು ಬಿಸಿಲು, ಮಳೆ, ಚಳಿಗಾಲಗಳ ಕ್ರಮದಲ್ಲಿ ಬದಲಾವಣೆ ಆಗಲಿದೆ. ಅಥವಾ ಯಾವುದಾದರೂ ಕೆಲವು ಕಾಲಗಳೇ ಕಣ್ಮರೆ ಆಗಿಬಿಡುವ ಸಾಧ್ಯತೆಯೂ ಇದೆ ಎಂದು ಭವಿಷ್ಯವನ್ನಹ ವಿಷ್ಲೇಸಿಸಿರುವ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
DK Shivakumar : ಉಪ ಮುಖ್ಯಮಂತ್ರಿಯ ಚಪ್ಪಲಿಯನ್ನೇ ಕದ್ದೊಯ್ದ ಐನಾತಿಗಳು, ಬರಿಗಾಲಲ್ಲಿ ತೆರಳಿಸಿದ ಡಿಕೆ ಶಿವಕುಮಾರ್
ಬಾಬಾ ವಂಗಾ ಭವಿಷ್ಯದಂತೆ, ಕೃತಕ ಮಾನವರ ಸೃಷ್ಟಿ ಯಥೇಚ್ಚವಾಗಿ ಆಗಲಿದೆಯಂತೆ. ಈ ಕೃತಕ ಮನುಷ್ಯರಿಂದ ನಿಜ ಮನುಷ್ಯರು ಸಮಸ್ಯೆಗಳನ್ನಹ ಎದುರಿಸಲಿದ್ದಾರೆ. ಅಲ್ಲದೆ ಎರಡು ಶಕ್ತಿಶಾಲಿ ದೇಶಗಳು ಪರಸ್ಪರ ಯುದ್ಧಕ್ಕೆ ಮುಂದಾಗಲಿದ್ದು, ಯುದ್ಧದಲ್ಲಿ ಜೈವಿಕ ಅಸ್ತ್ರಗಳ ಬಳಕೆ ಆಗಲಿದೆ ಎಂದು ಭವಿಷ್ಯ ನುಡಿದ್ದಾರೆ ಬಾಬಾ ವಂಗಾ.
ವಹಾಮಾನ ವೈಪರಿತ್ಯದಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳಲಿದ್ದು ಆಹಾರ ಬೆಳೆಗಳನ್ನು ಬೆಳೆಯುವುದು ಕಷ್ಟವಾಗಲಿದೆ. ಇದರಿಂದ ವಿಶ್ವದಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗಲಿದೆ. ಜನ ಆಹಾರಕ್ಕಾಗಿ ಪರದಾಡಲಿದ್ದಾರೆ. ಸಿಗುವ ಆಹಾರದಲ್ಲಿ ಸತ್ವ ಇಲ್ಲದೆ ಹೋಗುತ್ತದೆ ಎನ್ನುತ್ತದೆ ಬಾಬಾ ವಂಗಾ ಭವಿಷ್ಯ.
ಬಾಬಾ ವಂಗಾ ನುಡಿದಿರುವ ಕೆಲವು ಭವಿಷ್ಯವಾಣಿಗಳು ಈಗಾಗಲೇ ನಿಜವಾಗಿವೆ. ಕೆಲವು ನಿಜ ಆಗಿವೆಯಾದರೂ ಅದರಿಂದ ಮನುಷ್ಯ ಕುಲಕ್ಕೆ ದೊಡ್ಡ ಸಮಸ್ಯೆಗಳೇನೂ ಆಗಿಲ್ಲ.