Bajaj Bike
ಬಜಾಜ್, ಭಾರತಕ್ಕೆ ಹಲವು ಅತ್ಯುತ್ತಮ ಬೈಕುಗಳನ್ನು ನೀಡದೆ. ದಶಕಗಳ ಹಿಂದೆ ಚೇತಕ್ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಿದ್ದ ಬಜಾಜ್ ಚೇತಕ್, ಆ ನಂತರ ಪಲ್ಸರ್ ಮೂಲಕ ಮತ್ತೊಂದು ಕ್ರಾಂತಿಯನ್ನೇ ಮಾಡಿತು. ಈ ಎರಡೂ ವಾಹನಗಳು ಭಾರತದಲ್ಲಿ ಅದೆಷ್ಟೋ ಜನರ ದ್ವಿಚಕ್ರ ವಾಹನ ಕೊಳ್ಳುವ ಕನಸನ್ನು ನನಸಾಗಿಸಿದವು. ಪಲ್ಸರ್, ಚೇತಕ್ ಮಾತ್ರವೇ ಅಲ್ಲದೆ ಬಜಾಜ್ ಈ ವರೆಗೆ ಅತ್ಯುತ್ತಮ ದ್ವಿಚಕ್ರ ವಾಹನಗಳನ್ನು ನೀಡಿದೆ ಅದರಲ್ಲಿ ಬಜಾಜ್ ಅವೇಂಜರ್ ಸಹ ಒಂದು.
ಹಾರ್ಲಿಡೇವಿಡ್’ಸನ್ ಲುಕ್ ನಿಂದ ಸ್ಪೂರ್ತಿ ಪಡೆದು ಭಿನ್ನವಾಗಿ ನಿರ್ಮಿಸಲ್ಪಟ್ಟ ಅವೇಂಜರ್ ಬೈಕ್, ಈಗಲೂ ಹಲವರ ಮೆಚ್ಚಿನ ವಾಹನ. ಲಾಂಗ್ ರೈಡ್ ಗಳಿಗೆ ಹೇಳಿ ಮಾಡಿಸಿದ ಗಾಡಿ ಇದಾಗಿತ್ತು. ಅಗಲವಾದ ಸೀಟು, ಆರಾಮದಾಯಕವಾಗಿ ಕೂರಬಹುದಾದ ಸೀಟಿಂಗ್ ಪೋಶ್ಚರ್. ಕಾರಿನ ಮಾದರಿಯಲ್ಲಿದ್ದ ಗೇರು ಮತ್ತು ಬ್ರೇಕ್ ಲಿವರ್ ಗಳು ಈ ಗಾಡಿಗೆ ಭಿನ್ನ ರೂಪವನ್ನು ನೀಡಿತ್ತು.
ಈಗ ಬಜಾಜ್ ಹೊಸ ಅವೇಂಜರ್ ಅನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಆದರೆ ಈ ಹಿಂದಿನ ಅವೇಂಜರ್’ಗಿಂತಲೂ ಶಕ್ತಿಯುತವಾದ ಎಂಜಿನ್ ಅನ್ನು ಹೊಸ ಅವೇಂಜರ್’ಗೆ ಅಳವಡಿಸುತ್ತಿದೆ ಕಂಪೆನಿ. ಹೊಸ ಅವೇಂಜರ್ ಬರೋಬ್ಬರಿ 400 ಸಿಸಿ ಎಂಜಿನ್ ಹೊಂದಿರಲಿದ್ದು, ಈ ಸೆಗ್ಮೆಂಟ್’ನ ಇತರೆ ಬೈಕುಗಳಿಗಿಂತಲೂ ಕಡಿಮೆ ಬೆಲೆಯ ವಾಹನ ಇದಾಗಿರಲಿದೆ.
Jawa Bikes: ರಾಯಲ್ ಎನ್’ಫೀಲ್ಡ್ ಗೆ ಠಕ್ಕರ್ ಕೊಟ್ಟ ಜಾವಾ, ಹೊಸ ಬೈಕ್ ಬಿಡುಗಡೆ
ರಾಯಲ್ ಎನ್’ಫೀಲ್ಡ್ ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು 350 ಸಿಸಿ ಬೈಕುಗಳೇ 2 ಲಕ್ಷದಿಂದ 3 ಲಕ್ಷಕ್ಕೆ ಮಾರಾಟವಾಗುತ್ತಿವೆ. ಆದರೆ ಬಜಾಜ್ ತನ್ನ ಅವೇಂಜರ್ ಬೈಕನ್ನು 2 ಲಕ್ಷ ರೂಪಾಯಿಗೆ ಮಾರುಕಟ್ಟೆಗೆ ತರುತ್ತಿದೆ. ದೆಹಲಿ ಸೇರಿದಂತೆ ಕೆಲವೆಡೆ ಈ ಬೈಕ್ 2 ಲಕ್ಷಕ್ಕಿಂತಲೂ ಕಡಿಮೆ ದರಕ್ಕೆ ಲಭ್ಯವಾಗಲಿದೆ. ಹೊಸ ಅವೇಂಜರ್’ನ ಡಿಸೈನ್ ನಲ್ಲಿಯೂ ಸಹ ಸಾಕಷ್ಟು ಭಿನ್ನತೆ ಇದೆ. ಮೊದಲಿನ ಅವೇಂಜರ್ ನಷ್ಟು ಕುಳ್ಳ ಇಲ್ಲ ಹೊಸ ಗಾಡಿ, ಮೊದಲಿನ ಅವೇಂಜರ್’ನಲ್ಲಿ ಓಡಿಸುವಾಗ ಕೈ ನೋವು ಬರುತ್ತದೆಂಬ ದೂರು ಕೇಳಿ ಬಂದಿತ್ತು, ಹಾಗಾಗಿ ಹೊಸ ಅವೇಂಜರ್ ನಲ್ಲಿ ಹ್ಯಾಂಡಲ್ ಬಾರ್ ಅನ್ನು ತುಸು ಬದಲಾವಣೆ ಮಾಡಿರುವುದು ಕಾಣಬಹುದಾಗಿದೆ.