Site icon Samastha News

Dhanush: ಧನುಶ್ ಗೆ ನಿರ್ಬಂಧ,‌ ಒಡೆದ ತಮಿಳು‌ ಚಿತ್ರರಂಗ

Dhanush

Dhanush

ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ಮಾಪಕರ‌ ಸಂಘ ಹಾಗೂ ಇನ್ನೂ ಕೆಲವು ಸಂಘಗಳು ಸೇರಿಕೊಂಡು ನಟ ಧನುಷ್ ಗೆ ನಿರ್ಬಂಧ ಹೇರಿರುವ ವಿಷಯ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ಧನುಷ್ ಮೇಲೆ ನಿರ್ಬಂಧ ಹೇರಿದ ಬಳಿಕ ಚಿತ್ರರಂಗ ಒಡೆದು ಎರಡು ಭಾಗವಾಗಾಗಿದೆ. ಕೆಲವರು‌ ಧನುಶ್ ಪರವಾಗಿ ನಿಂತಿದ್ದರೆ, ಇನ್ನು ಕೆಲವರು ಧನುಶ್ ಗೆ ವಿರುದ್ಧವಾಗಿ ನಿಂತಿದ್ದಾರೆ.

ಇತ್ತೀಚೆಗಷ್ಟೆ ಸಭೆ ನಡೆಸಿದ ಟಿಎಫ್ ಪಿಸಿ, ಧನುಶ್ ಮೇಲೆ ನಿರ್ಬಂಧ ಹೇರಿದ್ದು ಯಾವುದೇ ನಿರ್ಮಾಪಕರು ಅವರೊಟ್ಟಿಗೆ ಕೆಲಸ ಮಾಡಬಾರದೆಂದು, ಕೆಲವು ಅವರ ಸಿನಿಮಾಗಳನ್ನು ಪ್ರದರ್ಶಿಸಬಾರದೆಂದು ಹಾಗೂ ವಿತರಣೆ‌ಮಾಡಬಾರದೆಂಬ ನಿರ್ಣಯ ಪ್ರಕಟಿಸಿದ್ದಾರೆ. ಆದರೆ ಈ ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯ ಮೂಡಿದೆ. ಧನುಶ್, ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ಡೇಟ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ‌ ನಿರ್ಬಂಧ ಹೇರಲಾಗಿದೆ.

ಧನುಶ್ ಮೇಲೆ ಹೇರಲಾಗಿರುವ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ‌ ತಮಿಳು ಸಿನಿಮಾ ಕಲಾವಿದರ ಸಂಘ, ನಿರ್ಮಾಪಕರ ಸಂಘ ಹೀಗೆ ಒಮ್ಮಿಂದೊಮ್ಮೆಲೆ ಧನುಶ್ ಹೆಸರು ಘೋಷಣೆ ಮಾಡಿರುವುದನ್ನು ನಾವು ವಿರೋಧಿಸುತ್ತೇವೆ. ಧನುಶ್ ಮೇಲೆ ನಿಷೇಧ ಹೇರಿರುವ ವಿಚಾರ ನಮಗೆ ಮಾಧ್ಯಮಗಳಿಂದ ಗೊತ್ತಾಯ್ತ. ಕಲಾವಿದರ ಸಂಘಕ್ಕೆ ಮುಂಚಿತವಾಗಿ ಮಾಹಿತಿ ನೀಡುವ‌ ಸೌಜನ್ಯವನ್ನೂ ಅವರು ತೋರಿಲ್ಲ ಎಂದಿದ್ದಾರೆ.

Karnataka film chamber of commerce: ರಾಜ್ಯ ಸರ್ಕಾರದ ವಿರುದ್ಧ ಚಿತ್ರರಂಗ ಅಸಮಾಧಾನ

ದಕ್ಷಿಣ ಭಾರತದ ಕಲಾವಿದರ ಸಂಘ ಹಾಗೂ ತಮಿಳು ಚಿತ್ರರಂಗ ಕಲಾವಿದರ ಸಂಘವು ಧನುಶ್ ಮೇಲೆ ಹೇರಿರುವ ನಿರ್ಬಂಧದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದೆ. ತಮಿಳು ಚಿತ್ರರಂಗದ ಕೆಲವು ಜನಪ್ರಿಯ ನಟರು ಸಹ ಈ ಧಿಡೀರ್ ನಿರ್ಣಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಗಸ್ಟ್ 16 ರಂದು ಕಲಾವಿದರ ಸಂಘ ಮೀಟಿಂಗ್ ನಡೆಸಲಿದ್ದು, ವಿಷಯದ ಬಗ್ಗೆ ಚರ್ಚಿಸಿ ತಮ್ಮ‌ ನಿರ್ಣಯ ಪ್ರಕಟಿಸಲಿದೆ.

ಕಲಾವಿದರ ಸಂಘದ ಪದಾಧಿಕಾರಿಗಳಯ ಹೇಳಿರುವಂತೆ ಧನುಶ್ ವಿಷಯವನ್ನು ಜುಲೈ 21 ರಂದಿ ನಡೆದ ಸಭೆಯಲ್ಲಿ ಚರ್ಚಿಸಿ ಇತ್ಯರ್ಥ ಪಡೊಸಲಾಗಿತ್ತು. ಅಲ್ಲದೆ ಕೆಲವು ನಿಯಮಗಳನ್ನು ಸಹ ಹೇರಿಕೊಳ್ಳಲಾಗಿತ್ತು‌. ಆದರೆ ಈಗ ನಿರ್ಮಾಪಕರ ಸಂಘವು ಆ ನಿಯಮಗಳನ್ನು ಮುರಿದು ವರ್ತಿಸಿದೆ ಎಂದು ಆರೋಪ ಮಾಡಿದ್ದಾರೆ.

Exit mobile version