BBMP
ಬಿಬಿಎಂಪಿ ಎದುರು ಹಲವು ಸವಾಲುಗಳಿವೆ ಆದರೆ ಎಲ್ಲಕ್ಕಿಂತಲೂ ಪ್ರಮುಖವಾದುದು ಟ್ರಾಫಿಕ್. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರಿಗೆ ಅದರ ವಿಪರೀತ ಟ್ರಾಫಿಕ್ ಕಪ್ಪು ಚುಕ್ಕೆಯಾಗಿದೆ. ಏಕ ಮುಖ ಸಂಚಾರ ವ್ಯವಸ್ಥೆ, ಮೆಟ್ರೋ ನಿರ್ಮಾಣ, ಫ್ಲೈ ಓವರ್ ಗಳ ನಿರ್ಮಾಣ ಇನ್ನೂ ಹಲವು ಕ್ರಮಗಳ ಬಳಿಕವೂ ಬೆಂಗಳೂರಿನ ಟ್ರಾಫಿಕ್ ಕಡಿಮೆ ಆಗಿಲ್ಲ. ಈಗ ಬಿಬಿಎಂಪಿ ಮತ್ತೊಂದು ಬೃಹತ್ ಸಾಹಸಕ್ಕೆ ಕೈ ಹಾಕಿದೆ.
ಬೆಂಗಳೂರಿನಲ್ಲಿ ಬರೋಬ್ಬರಿ 18 ಕಿ.ಮೀ ಉದ್ದ ಸುರಂಗ ಮಾರ್ಗವನ್ನು ನಿರ್ಮಿಸಲು ಮುಂದಾಗಿದೆ ನಾಲ್ಕು ಪಥಗಳನ್ನು ಹೊಂದಿರುವ ಇಒ ಸುರಂಗ ಮಾರ್ಗ ನಿರ್ಮಾಣಕ್ಕೆ 8100 ಕೋಟಿ ಹಣ ಖರ್ಚಾಗಲಿದೆ ಎಂದು ಕಾರ್ಯಸಾಧನಾ ವರದಿಯಲ್ಲಿ ಅಂದಸಜಿಸಲಾಗಿದೆ.
ಈ ಬೃಹತ್ ಹಾಗೂ ಉದ್ದನೆಯ ಅಂಡರ್ ಗ್ರೌಂಡ್ ರಸ್ತೆಯು ಸಿಲ್ಕ್ ಬೋರ್ಡ್ ನ ಟ್ರಾಫಿಕ್ ಅನ್ನು ತಗ್ಗಿಸಲೆಂದು ನಿರ್ಮಿಸಲಾಗುತ್ತಿದ್ದು, ಸಿಲ್ಕ್ ಬೋರ್ಡ್ ನಿಂದ ಆರಂಭಿಸಿ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೂ ಈ ಅಂಡರ್ ಪಾಸ್ ನಲ್ಲಿಯೇ ವಾಹನಗಳು ಚಲಿಸಬಹುದಾಗಿರುತ್ತವೆ. ಈ ಸುರಂಗಕ್ಕೆ ಐದು ಕಡೆಗಳಲ್ಲಿ ಆಗಮನ ಹಾಗೂ ನಿರ್ಗಮನ (ಎಂಟ್ರಿ-ಎಕ್ಸಿಟ್) ಗಳು ಇರಲಿವೆ.
ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಕ್ವಾಟ್ರಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಲಾಲ್ ಬಾಗ್, ಬೆಂಗಳೂರು ಗಾಲ್ಫ್ ಕ್ಲಬ್, ಅರಮನೆ ಮೈದಾನ ಕೊನೆಯದಾಗಿ ಹೆಬ್ಬಾಳ ಫ್ಲೈಓರ್ ಬಳಿ ಈ ಬೃಹತ್ ಸುರಂಗ ಮಾರ್ಗಕ್ಕೆ ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ಗಳನ್ನು ನೀಡಲಾಗುತ್ತಿದೆ.
Renault Duster: ಬರುತ್ತಿದೆ ಆ ಕಾರು, ಮಾರುತಿ, ಹುಂಡೈ, ಟೊಯೊಟಾಗೆ ಶುರುವಾಗಿದೆ ನಡುಕ
ನಿರ್ಮಾಣ ಮಾಡಲಾಗುತ್ತಿರುವ ಸುರಂಗವು ಹತ್ತು ಮಿಒಟರ್ ಎತ್ತರ ಹೊಂದಿರಲಿದೆ. ನಾಲ್ಕು ಪಥಗಳನ್ನು ಹೊಂದೊರಲಿದ್ದು ವಾಹನಗಳು 60 ಕಿ.ಮೀ ವೇಗದಲ್ಲಿ ಓಡಾಡಬಹುದಾಗಿದೆ. ಈ ಸುರಂಗ ನಿರ್ಮಾಣಕ್ಕೆ 8100 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತಿ ಕಿ.ಮೀಟರ್ ರಸ್ತೆ ನಿರ್ಮಿಸಲು 450 ಕೋಟಿ ಹಣವನ್ನು ಬಿಬಿಎಂಪಿ ಖರ್ಚು ಮಾಡಲಿದೆ.