Bengaluru Cab Driver
ಬೆಂಗಳೂರಿನಲ್ಲಿ ನಾನಾ ರೀತಿತ ವಂಚನೆಗಳಹ ಪ್ರತಿ ದಿನ ನಡೆಯುತ್ತಿರುತ್ತವೆ. ಇತ್ತೀಚೆಗಂತೂ ಆನ್ ಲೈನ್ ದೋಖಾಗಳು ಬಹಳ ಹೆಚ್ಚಾಗಿವೆ. ಇದರ ನಡುವೆ ಈ ಆನ್’ಲೈನ್ ಫ್ರಾಡ್’ಗೆ ಜನ ಕೋಟ್ಯಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇದೀಗ ಕೆಲವು ಟ್ಯಾಕ್ಸಿ ಡ್ರೈವರ್’ಗಳು ಇದೀಗ ಹೊಸ ವಂಚನೆ ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಟೆಕಿ ಒಬ್ಬರು ತಮ್ಮ ಸ್ವಂತ ಅನುಭವ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಅನುಪಮ್ ಎಂಬುವರು ಏರ್’ಪೋರ್ಟ್ ಗೆ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಟ್ಯಾಕ್ಸಿಯಲ್ಲಿ ಹೋಗುವಾಗ ಡ್ರೈವರ್, ಟೋಲ್ ತಪ್ಪಿಸಲೆಂದು ಹಳ್ಳಿ ದಾರಿ ತೆಗೆದುಕೊಂಡಿದ್ದಾನೆ. ಅಲ್ಲಿ ಸ್ವಲ್ಪ ದೂರ ಬಂದ ಬಳಿಕ ಕಾರಿನಲ್ಲಿ ಪೆಟ್ರೋಲ್ ಖಾಲಿ ಆಗುತ್ತಿದೆ, ನೀವು 1000 ರೂಪಾಯಿ ಕೊಟ್ಟರೆ ಮಾತ್ರ ಮುಂದೆ ಹೋಗಬಹುದು ಎಂದಿದ್ದಾನೆ. ಅದಾಗಲೇ 1000 ಕೊಟ್ಟು ಕಾರು ಬುಕ್ ಮಾಡಿದ್ದ ಅನುಪಮ್’ಗೆ ಇದನ್ನು ಕೇಳಿ ಶಾಕ್ ಆಗಿದೆ. ಅದಾಗಲೇ ವಿಮಾನಕ್ಕೆ ತಡ ಆಗುತ್ತಿದ್ದ ಕಾರಣದಿಂದಾಗಿ, ಅಲ್ಲದೆ ನಿರ್ಜನ ಪ್ರದೇಶದಲ್ಲಿ ಆ ಡ್ರೈವರ್ ತುಸು ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದರಿಂದ ಹೆದರಿ ಸುಮ್ಮನೆ 1000 ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ದಾರೆ ಅನುಪಮ್.
ಟೋಲ್ ತಪ್ಪಿಸುವುದು ಬೇಡ ಎಂದರೂ ಸಹ ಅದನ್ನು ನಿರ್ಲಕ್ಷಿಸಿ ಟೋಲ್ ರಹಿತ ಸಣ್ಣ ದಾರಿಯಲ್ಲೇ ಹೋಗುವ ಡ್ರೈವರ್’ಗಳು ಪ್ರಯಾಣಿಕರಿಂದ ಮಾತ್ರ ಟೋಲ್ ಹಣವನ್ನೂ ಸೇರಿಯೇ ಪಡೆದುಕೊಳ್ಳುತ್ತಾರೆ. ಯಾಕೆ? ಏನು? ಎಂದು ಪ್ರಶ್ನೆ ಮಾಡಿದರೆ ಜೋರು ಧನಿಯಲ್ಲಿ ಬೆದರಿಕೆ ಹಾಕಿದ್ದೂ ಇದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಬರೆದುಕೊಂಡಿದ್ದಾರೆ.
CM Siddaramaiah: ಇದು ಅನ್ಯಾಯ’ ಬಾರ್ ಮಾಲೀಕರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ
ಈಗ ಅನುಪಮ್ ತಮಗೆ ಆದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಮೇಲೆ ಹಲವರು ಇದೇ ಅನುಭವ ತಮಗೂ ಆಗಿದ್ದಾಗಿ ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಅನುಪಮ್ ಪೊಲೀಸರ ಸಹಾಯ ಪಡೆಯಬೇಕು ಎಂದು ಸಲಹೆ ಸಹ ನೀಡಿದ್ದಾರೆ. ಒಟ್ಟಾರೆ ಬೆಂಗಳೂರಿನ ಕ್ಯಾಬ್ ಡ್ರೈವರ್’ಗಳ ಮೇಲೆ ಈಗ ಮತ್ತೊಂದು ಆರೋಪ ಬಂದು ಕೂತಿದೆ. ಕೆಲವೇ ವರ್ಷಗಳಲ್ಲಿ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಆಗುತ್ತಿದ್ದು ಆಗಲಾದರೂ ಈ ಕೆಲ ಕ್ಯಾಬ್ ಡ್ರೈವರ್’ಗಳ ಅನ್ಯಾಯ, ಅಟ್ಟಹಾಸ ಕಡಿಮೆ ಆಗುತ್ತದೆಯಾ ನೋಡಬೇಕಿದೆ.