Bengaluru Company: ಕೇಳಿದಷ್ಟು ಸಂಬಳ‌ ಕೊಡುತ್ತದೆ ಬೆಂಗಳೂರಿನ ಈ ಕಂಪೆನಿ

0
120
Bengaluru Company

Bengaluru Company

ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಗೆ ತಮ್ಮ ಸಂಸ್ಥೆಯ ಮೇಲೆ ಇರುವ ಸಾಮಾನ್ಯ ದೂರು ಸಂಬಳದ್ದೆ. ಕೇಳಿದಷ್ಟು ಸಂಬಳ ಕೊಡಲಿಲ್ಲ, ಬಡ್ತಿ ಕೊಡುವುದಿಲ್ಲ, ನಾನು 10% ಇಂಕ್ರಿಮೆಂಟ್ ಕೇಳಿದ್ದೆ 5% ಅಷ್ಟೆ ಕೊಟ್ಟರು, ಕೆಲಸಕ್ಕೆ ಸೇರುವಾಗ ಒಂದು ಲಕ್ಷ‌ ಸಂಬಳ‌‌ ಕೇಳಿದ್ದೆ 50 ಸಾವಿರ ಕೊಟ್ಟರು ಇತ್ಯಾದಿ ದೂರುಗಳು ಸಾಮಾನ್ಯ. ಆದರೆ ಬೆಂಗಳೂರಿನ ಈ ಸಂಸ್ಥೆ ತಾನು ಕೆಲಸಕ್ಕೆ ಸೇರಿಸಿಕೊಳ್ಳುವ ಉದ್ಯೋಗಿಗಳು ಎಷ್ಟು ಸಂಬಳ ಕೇಳುತ್ತಾರೊ ಅಷ್ಟು ಸಂಬಳ‌ ಕೊಡುತ್ತದೆ. ಉದ್ಯೋಗಿಗಳೊಂದಿಗೆ ಸ್ಯಾಲರಿ ನೆಗೋಷಿಯೇಷನ್ ಮಾಡುವುದೇ ಇಲ್ಲ.

ಸ್ಯಾಲರಿ ನೆಗೋಷಿಯೇಷನ್ ಮಾಡಲೆಂದೇ ಕಾರ್ಪೊರೇಟ್ ಕಂಪೆನಿಗಳು ನುರಿತ ಎಚ್ ಆರ್ ಗಳನ್ನು ನೇಮಿಸಿಕೊಂಡಿರುತ್ತಾರೆ. ಸಾಧ್ಯವಾದಷ್ಟು ಕಡಿಮೆ ಸ್ಯಾಲರಿಗೆ ಉದ್ಯೋಗಿಗಳನ್ನು ನೇಮಿಸಿಕೊಂಡು ಅವರನ್ನು ಚೆನ್ನಾಗಿ ದುಡಿಸಿಕೊಳ್ಳುವುದೇ ಅವರ ಧ್ಯೇಯ ಆದರೆ ಬೆಂಗಳೂರಿನ ಕಂಪೆನಿ ‘ಜೋಕೊ’ ಇದಕ್ಕೆ ಸಂಪೂರ್ಣ ವಿರೋಧ.

ಸಂಸ್ಥೆಯ ಸಿಇಓ ಅರ್ಜುನ್ ವಿ, ಲಿಂಕ್ಡಿನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಈ ವರೆಗೆ 18 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಂಪೆನಿಗಾಗಿ ನೇಮಿಸಿಕೊಂಡಿದ್ದೇನೆ. ಆದರೆ ಯಾರೊಂದಿಗೂ ಸ್ಯಾಲರಿ ನೆಗೋಷಿಯೇಷನ್ ಮಾಡಿಲ್ಲ. ಬದಲಿಗೆ ಅವರು ಎಷ್ಟು ಕೇಳುತ್ತಾರೊ ಅಷ್ಟು ಸಂಬಳ ಕೊಟ್ಟಿದ್ದೇವೆ’ ಎಂದಿದ್ದಾರೆ. ಹೀಗೆ ಮಾಡುವುದರಿಂದ ತಮಗೆ ಲಾಭವೇ ಆಗಿದೆ ಎಂದಿದ್ದಾರೆ.

ತಾವು ಹೀಗೆ ಮಾಡುವುದರಿಂದ ಏನು ಲಾಭವಾಗಿದೆ ಎಂಬುದನ್ನು ನಾಲ್ಕು ಸರಳ ಪಾಯಿಂಟ್ಸ್ ಗಳಲ್ಲಿ ಅರ್ಜುನ್ ವಿವರಿಸಿದ್ದಾರೆ. ಮೊದಲನೆಯದಾಗಿ ಕೇಳಿದಷ್ಟು ಸಂಬಳ ಪಡೆದ ವ್ಯಕ್ತಿಗೆ ಕೆಲಸ ಮಾಡದೇ ಇರಲು ಕಾರಣವೇ ಇರುವುದಿಲ್ಲ. ಕೇಳಿದಷ್ಟು ಸಂಬಳ ಪಡೆದ ಕಾರಣ ಸಾಮಾನ್ಯಕ್ಕಿಂತಲೂ ಹೆಚ್ಚಿಗೆ ಕೆಲಸ ಮಾಡುತ್ತಾನೆ. ಕೆಲಸ ಕಲಿತ ನಂತರ ಕಂಪೆನಿ ಬಿಟ್ಟು ಹೋಗುವುದಿಲ್ಲ. ಏಕೆಂದರೆ ಬೇರೆ ಸಂಸ್ಥೆಗಳು ಆತ ಕೇಳಿದಷ್ಟು ಸಂಬಳ‌ ಕೊಡುವುದಿಲ್ಲ. ಹಾಗೂ ಉದ್ಯೋಗಿಗೆ ಹೆಚ್ಚಿನ ಇಂಕ್ರಿಮೆಂಟ್ ಬೇಕು ಎಂದರೆ ಇಲ್ಲಿಯೇ ಕೇಳಿ ಪಡೆಯಬಹುದು ಹಾಗಾಗಿ ಆತ ಕೆಲಸ ಬಿಡುವುದಿಲ್ಲ. ಕೇಳಿದಷ್ಟು ಸಂಬಳ ಕೊಟ್ಟ ಕೂಡಲೆ ಸಂಸ್ಥೆಯೊಂದಿಗೆ ಉದ್ಯೋಗಿಗೆ ಅವಿಮಾಭಾವ ಸಂಬಂಧ ಮೂಡುತ್ತದೆ. ಇದು ಆತನ ಕೆಲಸದ ರೀತಿಯ ಮೇಲೆ ಪರಿಣಾಮ ಬೀರಿತ್ತದೆ. ಕೇಳಿದಷ್ಟು ಸಂಬಳ ಕೊಡುವುದರಿಂದ ಉದ್ಯೋಗಿಗಳು ಪರಸ್ಪರ‌ರ ಸಂಬಳದ ಬಗ್ಗೆ ಚರ್ಚಿಸುತ್ತಾ, ಕಂಪೆನಿ ನಮಗೆ ಕಡಿಮೆ ನೀಡಿದೆ, ಅವನಿಗೆ ಕಡಿಮೆ ನೀಡಿದೆ ಎಂಬ ಅಸೂಯೆ ಬೆಳೆಸಿಕೊಳ್ಳುವುದಿಲ್ಲ ಎಂದು‌ ವಿವರಿಸಿದ್ದಾರೆ‌ ಸಿಇಓ ಅರ್ಜುನ್.

Richest Begger: ವಿಶ್ವದ ಶ್ರೀಮಂತ ಭಿಕ್ಷುಕ, ಈತನ ಒಟ್ಟು ಆಸ್ತಿಯೆಷ್ಟು?

ಈ ವರೆಗೆ ಕೇವಲ‌ ಒಂದು ಬಾರಿ ಮಾತ್ರ ಸ್ಯಾಲರಿ ನೆಗೋಷಿಯೇಷನ್ ಮಾಡಿದ್ದಾರಂತೆ ಅರ್ಜುನ್, ಅದೂ ಸಂಬಳ ಕಡಿಮೆ ಮಾಡಲು ಅಲ್ಲ ಬದಲಿಗೆ ಸಂಬಳ ಹೆಚ್ಚು ಮಾಡಿಸಲು. ಉದ್ಯೋಗಿಯೊಬ್ಬ ಕಡಿಮೆ ಸಂಬಳ ಕೇಳಿದ್ದಾಗ ಆತನ ಬಳಿ ಚರ್ಚಿಸಿ ಸಂಬಳ ಹೆಚ್ಚು ಮಾಡಿಸಿದರಂತೆ ಅರ್ಜುನ್. ಅಂದಹಾಗೆ ಕೇಳಿದಷ್ಟು ಸಂಬಳ ಕೊಟ್ಟು ಸುಮ್ಮನೆ ಕೂತು ಬಿಡುವುದಿಲ್ಲ, ಬದಲಿಗೆ ಪ್ರತಿ ವರ್ಷಕ್ಕೊಮ್ಮೆ ಉದ್ಯೋಗಿಗಳ ಕೆಲಸದ ಮೌಲ್ಯಮಾಪನ ಮಾಡಲಾಗುತ್ತದೆ. ಸಂಬಳಕ್ಕೂ ಮಾಡೊರುವ ಕೆಲಸಕ್ಕೂ ತಾಳೆ ಆಗದೇ ಇದ್ದರೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here