Bengaluru: ಡಿಗ್ರಿ, ರೆಸ್ಯೂಮೆ ಬೇಕಿಲ್ಲ, 40 ಲಕ್ಷ ಸಂಬಳದ ಉದ್ಯೋಗ ಬೆಂಗಳೂರಲ್ಲಿ

0
47
Bengaluru
AI company

Bengaluru:

ಕೆಲಸ ಹುಡುಕುವುದೆಂದರೆ ನರಕ ನೋಡಿದ ಅನುಭವ ಆಗುವ ಕಾಲವಿದು. ರೆಸ್ಯೂಮೆ ಹಾಕುವುದು, ಲಿಂಕ್ಡಿನ್ ಇನ್ನಿತರೆ ಸೈಟ್ ಗಳಲ್ಲಿ ಪ್ರೊಫೈಲ್ ಮಾಡುವುದು, ತಿಂಗಳ ಸಬ್ ಸ್ಕ್ರಿಪ್ಷನ್ ನೀಡುವುದು ನಾನಾ ರೀತಿಯ ರಿಕ್ವೈರ್ ಮೆಂಟ್ ಗಳು ಉದ್ಯೋಗ ಪಡೆಯಲು ಈಗ ಬೇಕಿವೆ. ಒಳ್ಳೆಯ ಕಾಲೇಜಿನ ಡಿಗ್ರಿ ಇಲ್ಲದೇ ಇದ್ದರೆ ಮೊದಲ ಸುತ್ತಿನಲ್ಲೇ ರೆಸ್ಯೂಮೆ ಕಸದ ಬುಟ್ಟಿ ಸೇರುತ್ತದೆ. ಆದರೆ ಬೆಂಗಳೂರಿನ ಸಂಸ್ಥೆಯೊಂದು ರೆಸ್ಯೂಮೆ ಬಿಡಿ ಕಾಲೇಜು ಡಿಗ್ರಿಯೂ ಬೇಡ, 40 ಲಕ್ಷದ ಸಂಬಳ ಕೊಡುತ್ತೇವೆ ಬನ್ನಿ ಎಂದು ಕರೆಯುತ್ತಿದೆ.

ಬೆಂಗಳೂರಿನ ಎಐ ಕಂಪೆನಿ ‘ಸ್ಮಾಲೆಸ್ಟ್ ಎಐ’ ಸಂಸ್ಥೆಯ ಮಾಲೀಕ ಸುದರ್ಶನ್ ಕಾಮತ್, ಟ್ವೀಟ್ ಒಂದನ್ನು ಮಾಡಿದ್ದು, ಅರ್ಜೆಂಟ್ ಆಗಿ ಕಂಪೆನಿಗೆ ಎಂಜಿನಿಯರ್  ಒಬ್ಬರು ಬೇಕಿದ್ದು ವರ್ಷಕ್ಕೆ 40 ಸಾವಿರ ಸಂಬಳ (CTC) ಕೊಡುತ್ತೇವೆ, ವಾರಕ್ಕೆ 5 ದಿನ ಕೆಲಸ. ಮಾಡಬೇಕಿರುವುದು ಇಷ್ಟೆ ರೆಸ್ಯೂಮೆ ಬೇಡ, ನಿಮ್ಮ ಕಾಲೇಜು ಯಾವುದಾಗಿದ್ದರೂ ಪರವಾಗಿಲ್ಲ, ನಿಮ್ಮ ಬಗ್ಗೆ 100 ಪದಗಳಲ್ಲಿ ಬರೆದು ನಮ್ಮ ಇಮೇಲ್ ವಿಳಾಸವಾದ info@smallest.ai ಗೆ ಕಳಿಸಿ, ಅದರ ಜೊತೆಗೆ ಈ ಹಿಂದೆ ನೀವು ಮಾಡಿರುವ ಕೆಲಸದ ಕೆಲ ಲಿಂಕ್ ಗಳನ್ನು ಕಳಿಸಿ ಎಂದಿದ್ದಾರೆ.

ಫೆಬ್ರವರಿ 24 ರಂದು ಈ ಟ್ವಿಟ್ಟರ್ ಪೋಸ್ಟ್ ಅನ್ನು ಸುದರ್ಶನ್ ಕಾಮತ್ ಮಾಡಿದ್ದು ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಹಲವರು ಸುದರ್ಶನ್ ಅವರ ಐಡಿಯಾ ಅನ್ನು ಇಷ್ಟ ಪಟ್ಟಿದ್ದಾರೆ. ಸುದರ್ಶನ್, ರೆಸ್ಯೂಮೆ, ಕಾಲೇಜು ಡಿಗ್ರಿಗೆ ಬದಲಾಗಿ ಪ್ರಭೆಯನ್ನು, ಕೆಲಸ ಮಾಡುವ ಹಂಬಲ ಇರುವವರನ್ನು ಹುಡುಕುತ್ತಿದ್ದಾರೆ ಇದು ಅವರ ಕಂಪೆನಿಗೆ ಒಳ್ಳೆಯದು ಮಾಡಲಿದೆ ಎಂದಿದ್ದಾರೆ. ಹಲವರು ಸುದರ್ಶನ್ ನೀಡಿರುವ ಮೇಲ್ ಐಡಿಗೆ ತಮ್ಮ ರೆಸ್ಯೂಮೆ ಕಳಿಸಿದ್ದಾರೆ.

Health: ಆರೋಗ್ಯಕ್ಕಾಗಿ ಆಹಾರ ಪದಾರ್ಥ ನಿಮ್ಮ ಅಡುಗೆ ಮನೆಯಲ್ಲಿ ಇರಲೇ ಬೇಕು

ಆದರೆ ಇನ್ನು ಕೆಲವರು ಇನ್ನು ಕೆಲವರು ಕಂಪೆನಿಯ ಕಚೇರಿ ಇರುವ ಇಂದಿರಾ ನಗರ ಬಹಳ ದುಬಾರಿ ಏರಿಯಾ ಅಂಥಹಾ ಏರಿಯಾದಲ್ಲಿದ್ದು ಕೆಲಸ ಮಾಡಲು ವರ್ಷಕ್ಕೆ 40 ಲಕ್ಷ ಸಂಬಳ ಬಹಳ ಕಡಿಮೆ ಆಯ್ತು ಎಂದು ತಕರಾರು ಸಹ ತೆಗೆದಿದ್ದಾರೆ. ಆದರೆ ಹೆಚ್ಚಿನ ಜನ ಸುದರ್ಶನ್ ಅವರ ಐಡಿಯಾವನ್ನು ಇಷ್ಟ ಪಟ್ಟಿದ್ದಾರೆ. ಇನ್ನು ಕೆಲವರು ತಾವು ಮಾಡಿರುವ ಕೆಲಸದ ಲಿಂಕ್ ಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ.

LEAVE A REPLY

Please enter your comment!
Please enter your name here