Bengaluru Railway Station: ಹೈಟೆಕ್ ಆಗಲಿದೆ ಬೆಂಗಳೂರಿನ ರೈಲ್ವೆ ನಿಲ್ದಾಣ, ಖರ್ಚಾಗಲಿದೆ ಸಾವಿರಾರು ಕೋಟಿ

0
118
Benagaluru Railway Station

Bengaluru Railway station

ಬೆಂಗಳೂರಿನ ವಿಮಾನ ನಿಲ್ದಾಣ ಈಗಾಗಲೇ ಜಗತ್ತಿನ ಗಮನ ಸೆಳೆದಿದೆ. ಬೆಂಗಳೂರು‌ವಿಮಾನ ನಿಲ್ದಾಣದ ಟರ್ಮಿನಲ್ ಗಳ ಐಶಾರಾಮಿತನ, ಸುಂದರತೆಯನ್ನು ಬೇರೆ ಬೇರೆ ದೇಶದ ಪ್ರವಾಸಿಗರು ಕೊಂಡಾಡುತ್ತಿದ್ದಾರೆ. ವಿಶ್ವದ ಅತ್ಯುತ್ತಮ ಟರ್ಮಿನಲ್’ಗಳಲ್ಲಿ ಬೆಂಗಳೂರು ವಿಮಾನ‌ನಿಲ್ದಾಣದ ಟರ್ಮಿನಲ್ ಸಹ ಒಂದಾಗಿದೆ. ಆದರೆ, ಅದೇ ಬೆಂಗಳೂರಿನ ರೈಲ್ವೆ ನಿಲ್ದಾಣ ಹೇಗಿದೆ? ಒಳಗೆ ಕಾಲಿಟ್ಟರೆ ಚಿತ್ರ ವಿಚಿತ್ರ ವಾಸನೆ, ಮೂಲ‌ ಸೌಕರ್ಯಗಳ‌ ಕೊರತೆ, ಜನಸಂದಣಿಯಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಈಗ ರೈಲ್ವೆ ನಿಲ್ದಾಣದ ಚಹರೆ ಬದಲಾಯಿಸಲು ಮುಂದಾಗಿದೆ ಸರ್ಕಾರ.

ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದ ರೀತಿಯಲ್ಲಿಯೇ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಹ ಬದಲಾವಣೆ ಮಾಡುತ್ತಿದೆ ಸರ್ಕಾರ. ವಿಮಾನ ನಿಲ್ದಾಣದ ವಿನ್ಯಾಸದಿಂದಲೇ ಸ್ಪೂರ್ತಿ ಪಡೆದು ಈ ಬದಲಾವಣೆ ಮಾಡಲಾಗುತ್ತದೆಯಂತೆ. ಈ ಬಗ್ಗೆ ಕೇಂದ್ರ ಸಚಿವರು ಅನುಮತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ರೈಲ್ವೆ ಖಾತೆಯ ರಾಜ್ಯ ಸಚಿವ ಆಗಿರುವ ವಿ ಸೋಮಣ್ಣ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರು ವಿಮಾನ‌ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಹಾಕಿಕೊಂಡಿದ್ದು ಈಗ ಡಿಪಿಆರ್ (ಕಾರ್ಯಸಾಧು ಯೋಜನೆ) ವರದಿ ತಯಾರಿಸಲು ಸೂಚಿಸಲಾಗಿದೆ. ವರದಿಯನ್ನು ರೈಲ್ವೆ ಬೋರ್ಡ್’ಗೆ ಸಲ್ಲಿಕೆ ಮಾಡಿ ಅನುಮತಿ ಪಡೆಯಲಾಗುವುದು. ರೈಲ್ವೆ ನಿಲ್ದಾಣಕ್ಕೆ ಸೇರಿರುವ 160 ಎಕರೆ ಪ್ರದೇಶ ಮೇಲ್ದರ್ಜೆಗೆ ಏರಿಸಲು ಲಭ್ಯವಿದೆ. ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ಅತ್ಯುತ್ತಮ ದರ್ಜೆಗೆ ರೈಲ್ವೆ ನಿಲ್ದಾಣವನ್ನು ಮರು ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

Delhi: ಬದಲಾಗಲಿದೆಯೇ ಭಾರತದ ರಾಜಧಾನಿ? ದೆಹಲಿಯ ಸಮಸ್ಯೆ ಏನು?

ಇಒ ಯೋಜನೆ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವಿಷ್ಣು ಬಳಿ ಚರ್ಚಿಸಿರುವುದಾಗಿ ಹೇಳೊರುವ ಸೋಮಣ್ಣ, ದೇಶದಲ್ಲಿ ಇಂಥಹಾ ಅಭಿವೃದ್ಧಿ ಕಾರಗಯಗಳಿಗೆ ಬೆಂಬಲ‌ ನೀಡುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.

ಬೆಂಗಳೂರು ‌ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಈ ಯೋಜನೆಯ ಅಂದಾಜು ವೆಚ್ಚ ಸುಮಾರು 1500 ಕೋಟಿ ರೂಪಾಯಿ ಆಗಲಿದೆ. ಸುಮಾರು ಮೂರು ವರ್ಷಗಳ ಯೋಜನೆ ಇದಾಗಿರಲಿದೆ.

LEAVE A REPLY

Please enter your comment!
Please enter your name here