Site icon Samastha News

Bengaluru: ರಾತ್ರೋರಾತ್ರಿ ಕೋಟ್ಯಧೀಶಳಾದ ಬೆಂಗಳೂರಿನ ಮಹಿಳೆ: ಹೇಗೆ?

Bengaluru

Bengaluru

ರಾತ್ರೋ ರಾತ್ರಿ ಶ್ರೀಮಂತರಾಗುವ ಕನಸು ಯಾರಿಗೆ ಇರುವುದಿಲ್ಲ, ಅದೂ ನ್ಯಾಯಯುತ ದಾರಿಯಲ್ಲಿ. ಖಂಡಿತ ಇದು ಎಲ್ಲರ ಕನಸು. ಆದರೆ ಕೆಲವರ ಈ ಕನಸಷ್ಟೆ ನನಸಾಗುತ್ತದೆ. ರಾತ್ರೋ ರಾತ್ರಿ ಕೋಟ್ಯಧಿಪತಿತಾಗುವ‌ ಬೆಂಗಳೂರಿನ ಮಹಿಳೆಯೊಬ್ಬರ‌ ಕನಸು‌ ನನಸಾಗಿದೆ. ಎಲ್ಲದಕ್ಕೂ ಕಾರಣ ಅವರ ತಾತ ಮಾಡಿದ ಆ ಒಂದು ಕೆಲಸ.

ಬೆಂಗಳೂರಿನ ಪ್ರಿಯಾ ಎಂಬವರು 2020 ರಲ್ಲಿ ಕೇವಲ ಒಂದೇ ದಿನದಲ್ಲಿ ಕೋಟ್ಯಂತರ ರೂಪಾಯಿ ಹಣಕ್ಕೆ ಮಾಲೀಕರಾದರು. ಆಗಿದ್ದಿಷ್ಟು, 2020 ರಲ್ಲಿ ಕೋವಿಡ್ ನಿಂದಾಗಿ ಎಲ್ಲರಿಗೂ ವರ್ಕ್ ಫ್ರಂ ಹೋಮ್ ನೀಡಲಾಗಿತ್ತು. ಅಂತೆಯೇ ಪ್ರಿಯಾ ಅವರಿಗೂ ವರ್ಕ್ ಫ್ರಂ ಹೋಮ್ ಸಿಕ್ಕಿತ್ತು. ಬಿಡುವಿನ ಸಮಯದಲ್ಲಿ ತಮ್ಮ ತಾತನಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪ್ರಿಯಾ ತೆಗೆದು ನೋಡುತ್ತಿದ್ದರು. ಏಕೆಂದರೆ ಅವರ ತಾತ ಕೆಲ ವರ್ಷಗಳ ಹಿಂದೆಯಷ್ಟೆ ನಿಧನ ಹೊಂದಿದ್ದರು.

ಪ್ರಿಯಾ ಅವರ ತಾತ ಸಾಯುವ‌ ಮುನ್ನ ವಿಲ್ ಅಥವಾ ಉಯಿಲು ಬರೆದಿದ್ದರು. ಆ ವಿಲ್ ನಲ್ಲಿ ಕಂಪೆನಿಯೊಂದರ ಷೇರುಗಳ ಉಲ್ಲೇಖ ಇತ್ತು. ಸೂಕ್ಷ್ಮವಾಗಿ ಗಮನಿಸಿದ ಪ್ರಿಯಾಗೆ ಗೊತ್ತಾಗಿದ್ದೆಂದರೆ ಅವರ ತಾತ 2004 ರಲ್ಲಿ 500 ಎಲ್ ಆಂಡ್ ಟಿ (ಲಾರ್ಸನ್ ಆಂಡ್ ಟರ್ಬೊ) ಸಂಸ್ಥೆಯ ಷೇರು ಖರೀದಿ ಮಾಡಿದ್ದರು.

ಉಯಿಲು ಓದುತ್ತಿದ್ದಂತೆ ಪ್ರಿಯಾ, ತಾತನ ಷೇರುಗಳ ಹಿಂದೆ ಬಿದ್ದರು. ಆದರೆ ಅವು ಕಳೆದು ಹೋಗಿದ್ದವು. ಆದರೆ ಪ್ರಯತ್ನ ಬಿಡದ ಪ್ರಿಯಾ, ‘ಷೇರ್ ಸಮಾಧಾನ್’ ಹೆಸರಿನ ಸಂಸ್ಥೆಯ ನೆರವು ಪಡೆದು  ಎಲ್ ಆಂಡ್ ಟಿ ಮತ್ತು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಗೆ ಪದೆ ಪದೇ ಪತ್ರಗಳು ಬರೆದು ಕೊನೆಗೂ ತನ್ನ ತಾತನಿಗೆ ಸೇರಿದ 500 ಷೇರುಗಳನ್ನು ಮರಳಿ ಪಡೆದರು.

Earth: ದಿನಕ್ಕೆ 24 ಗಂಟೆ ಅಲ್ಲ 25 ಗಂಟೆ ಆಗಲಿದೆ

ಅಂದಹಾಗೆ ಪ್ರಿಯಾರ ತಾತ ಖರೀದಿಸಿದ್ದ 500 ಷೇರುಗಳು, ಬೋನಸ್, ಸ್ಪ್ಲಿಟ್, ಡಿವಿಡೆಂಟ್ ಎಲ್ಲದರ ಬಳಿಕ ಈಗ 4500  ಷೇರುಗಳಾಗಿವೆ. ಎಲ್ ಆಂಡ್ ಟಿ ಸಂಸ್ಥೆಯ ಒಂದು ಷೇರಿನ ಬೆಲೆ ಈಗ 3500 ರೂಪಾಯಿ ಅಲ್ಲಿಗೆ ಪ್ರಿಯಾಗೆ ಈಗ ತಾತನ ಷೇರಿನಿಂದ 1.70 ಕೋಟಿ ರೂಪಾಯಿ ಹಣ ಸಿಕ್ಕಿದೆ. ತಾತನಿಂದಾಗಿ ಪ್ರಿಯಾ ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಆದರೆ ತಾತನ ಷೇರುಗಳನ್ನು ತಾವು ಪಡೆದುಕೊಳ್ಳಲು‌ ದೊಡ್ಡ ಹೋರಾಟವನ್ನೇ ಪ್ರಿಯಾ ಮಾಡಿದ್ದಾರೆ.

Exit mobile version