Bengaluru ZLB23 Bar
ಬೆಂಗಳೂರಿನಲ್ಲಿ ಹಲವು ರಂಗು-ರಂಗಾದ ಬಾರುಗಳಿವೆ. ಅತ್ಯುತ್ತಮ ಬಿಯರ್, ಇತರೆ ಮದ್ಯಗಳನ್ನು ಇಲ್ಲಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಈ ನಡುವೆ ಬೆಂಗಳೂರಿನ ಬಾರ್ ಒಂದು ಭಾರತದಲ್ಲಿಯೇ ಅತ್ಯುತ್ತಮ ಬಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಈ ಬಾರು ಭಾರತದ ಅತ್ಯುತ್ತಮ ಬಾರ್ ಆಗಿದೆ. ಆದರೆ ಏಷ್ಯಾದ 40ನೇ ಅತ್ಯುತ್ತಮ ಬಾರ್ ಎಂಬ ಖ್ಯಾತಿ ಪಡೆದುಕೊಂಡಿದೆ.
ಬೆಂಗಳೂರಿನ ಲೀಲಾ ಪಾಲೆಸ್ ಒಳಗಿರುವ ಜೆಡ್ ಎಲ್ ಬಿ 23 (ZLB23) ಬಾರು, ಭಾರತದ ನಂಬರ್ 1 ಹಾಗೂ ಏಷ್ಯಾದ 40ನೇ ಅತ್ಯುತ್ತಮ ಬಾರ್ ಎನಿಸಿಕೊಂಡಿದೆ. ಏಷ್ಯಾದ 50 ಅತ್ಯುತ್ತಮ ಬಾರುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬಾರು ಬೆಂಗಳೂರಿನ ಜೆಡ್ ಎಲ್ ಬಿ 23 (ZLB23).ಹಾಂಕ್ ಕಾಂಗ್ ನಲ್ಲಿ ಈ ಪಟ್ಟಿಯನ್ನು ಘೋಷಿಸಿ ಪ್ರಶ್ತಿಗಳನ್ನು ವಿತರಣೆ ಮಾಡಲಾಗಿದೆ.
ಬೆಂಗಳೂರಿನ ಜೆಡ್ ಎಲ್ ಬಿ 23 (ZLB23) ಬಾರು ತನ್ನ ವಿವಿಧ ರೀತಿಯ ವಿಸ್ಕಿಗಳು, ಮಾರ್ಟಿನಿಗಳಿಂದ ಸಖತ್‌ಗಮನ ಸೆಳೆಯಿತು. ಈ ಬಾರು ಹೊಂದಿರುವ ಜಪಾನಿನ ಕೆಲವು ವಿಸ್ಕಿಗಳ ಕಲೆಕ್ಷನ್ ಗಮನ ಸೆಳೆದಿದೆ. ಲೀಲಾ ಪ್ಯಾಲೆಸ್ ನಲ್ಲಿರುವ ಈ ಬಾರಿಗೆ ಒಂದು ಸೀಕ್ರೆಟ್ ಪ್ರವೇಶ ದ್ವಾರವಿದೆ. ಒಳಗೆ ಹೋದರೆ ಬೇರೆಯದ್ದೇ ಲೋಕಕ್ಕೆ ಹೋದ ಅನುಭವ ಆಗುತ್ತದೆ. ಅಷ್ಟು ಅದ್ಭುತವಾಗಿ ಬಾರ್ ನ ವಿನ್ಯಾಸ ಮಾಡಲಾಗಿದೆ.
Mukesh Ambani: ಹಣ ಕೊಟ್ಟು ಮದುವೆ ಬಗ್ಗೆ ಪ್ರಚಾರ ಮಾಡಿಸಿದ ಅಂಬಾನಿ ಕುಟುಂಬ!
ಜೆಡ್ ಎಲ್ ಬಿ 23 (ZLB23) ಬಾರಿನಲ್ಲಿ ಅತ್ಯುತ್ತಮ ಮದ್ಯ ಸರ್ವ್ ಮಾಡುವ ಜೊತೆಗೆ ಮನೊರಂಜನಾ ಕಾರ್ಯಕ್ರಮಗಳು ಸಹ ನಡೆಯುತ್ತವೆ. ಹಾಸ್ಯ ಗಿಗ್, ಜಾಜ್ ಸಂಗೀತ, ಇತರೆ ರೀತಿಯ ಸಂಗೀತ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಬಂದು ಇಲ್ಲಿ ಪ್ರದರ್ಶನ ನೀಡುತ್ತಾರೆ.
ಅಂದಹಾಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಂಕ್ ಕಾಂಗ್ ನ ‘ಬಾರ್ ಲಿಯೋನೆ’ ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಸಿಯೋಲ್‌ನ ಜಿಸ್ಟ್ , ಮೂರನೇ ಸ್ಥಾನವನ್ನು ಸಿಂಗಪುರದ ಜಿಗ್ಗರ್ ಆಂಡ್ ಪೋನಿ ಪಡೆದುಕೊಂಡಿದೆ. ಅತ್ಯುತ್ತಮ 50 ಬಾರುಗಳ ಪಟ್ಟಿಯಲ್ಲಿ ಸಿಂಗಪುರದ 11 ಬಾರುಗಳು ಸ್ಥಾನ ಪಡೆದುಕೊಂಡಿವೆ. ನೇಪಾಳದ ಒಂದು ಬಾರು, ಪಟ್ಟಿಯಲ್ಲಿ 39ನೇ ಸ್ಥಾನ ಪಡೆದುಕೊಂಡಿರುವುದು ವಿಶೇಷ.