Site icon Samastha News

Bigg Boss Kannada: ಯುವತಿಯನ್ನು ಕೆಟ್ಟದಾಗಿ ಮುಟ್ಟಿದ ಕನ್ನಡ ಬಿಗ್’ಬಾಸ್ ಸ್ಪರ್ಧಿ?

Bigg Boss Kannada

ಬಿಗ್’ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಸ್ಪರ್ಧಿಯೊಬ್ಬ, ಮಹಿಳಾ ಸ್ಪರ್ಧಿಯ ಜೊತೆ ಹದ್ದು ಮೀರಿ ವರ್ತಿಸಿದ್ದಾನೆ ಎನ್ನಲಾಗುತ್ತದೆ‌. ಶೋನಲ್ಲಿಯೇ ಆ ಮಹಿಳಾ ಸ್ಪರ್ಧಿ, ತನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡ ಸ್ಪರ್ಧಿಗೆ ಬೈದು ಬುದ್ಧಿ ಹೇಳಿದ್ದಾರೆ. ಆದರೂ ಸಹ ಆ ಪುರುಷ ಅಭ್ಯರ್ಥಿ ತಾನೇನೂ ಮಾಡಿಲ್ಲ ಎಂದೇ ಹೇಳಿದ್ದು, ಶನಿವಾರ ಬರುವ ಸುದೀಪ್ ಅವರು ಮಹಿಳಾ ಅಭ್ಯರ್ಥಿಯನ್ನು ಪೀಡಿಸಿದ ಪುರುಷ ಅಭ್ಯರ್ಥಿಯನ್ನು ಹೇಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.

ಆಗಿರುವುದಿಷ್ಟು, ಮನೆಯ ಸ್ಪರ್ಧಿ ಧನರಾಜ್, ಯುವತಿ ಐಶ್ವರ್ಯಾರ ದೇಹವನ್ನು ಕೆಟ್ಟದಾಗಿ ಮುಟ್ಟಿದ (ವಸ್ತುವೊಂದರಿಂದ) ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿದೆ. ಬೆಳಿಗಿನ ಸಮಯ ಧನರಾಜ್ ಎಲ್ಲರನ್ನೂ ದಿಂಬಿನಿಂದ ಹೊಡೆಯುತ್ತಾ ಎಬ್ಬಿಸುತ್ತಾರೆ. ಕೆಲವೊಮ್ಮೆ ಕಿವಿಯಲ್ಲಿ ಕೂಗಿಯೂ ಎಬ್ಬಿಸುತ್ತಾರೆ. ಇತ್ತೀಚೆಗೆ ನಟಿ ಗೌತಮಿ, ಇದೇ ವಿಷಯಕ್ಕೆ ಧನರಾಜ್’ಗೆ ಎಚ್ಚರಿಕೆ ಕೊಟ್ಟಿದ್ದಾರೆ.

‘ಹಾಡು ಹಾಕಿದಾಗ ಏಳಬೇಕು ಎಂಬುದು ನನಗೆ ಗೊತ್ತಿದೆ‌, ನೀನು ಎಬ್ಬಿಸಬೇಕಿಲ್ಲ. ನೀನು ನನ್ನ ಬಮ್’ಗೆ (ಹಿಂಬದಿಗೆ) ಹೊಡೆದು ಎಬ್ಬಿಸುತ್ತೀಯ ಅದು ನನಗೆ ಸ್ವಲ್ಪವೂ ಇಷ್ಟ ಇಲ್ಲ’ ಎಂದು ಗೌತಮಿ ನೇರವಾಗಿ ಹೇಳಿದ್ದಾರೆ. ಇದು ಧನರಾಜ್’ಗೆ ಶಾಕ್ ಆಗಿದೆ. ನೀವು ಎಲ್ಲದಕ್ಕೂ ಪಾಸಿಟಿವ್ ಎನ್ನುತ್ತಿರುತ್ತೀರ ಹಾಗಾಗಿ ನಾನು ಹಾಗೆ ಮಾಡಿದೆ. ನೀವು ಮಾಮೂಲಿಯಾಗಿ ತೆಗೆದುಕೊಳ್ಳುತ್ತೀರ ಎಂದುಕೊಂಡು ಹಾಗೆ ಮಾಡಿದೆ, ನಿಮಗೆ ಅದು ಸರಿಬರಲಿಲ್ಲ ಎಂದರೆ ಏನೂ ಮಾಡಲು ಆಗದು’ ಎಂದಿದ್ದಾರೆ.

Bigg Boss: ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ಸ್ಪರ್ಧಿ ಯಾರು? ಇಲ್ಲಿದೆ ಉತ್ತರ

ಆ ನಂತರ ನಾಮಿನೇಷನ್ ಸಮಯದಲ್ಲಿಯೂ ಸಹ ಗೌತಮಿ ಇದೇ ಕಾರಣ ಹೇಳಿ ಧನರಾಜ್ ಅನ್ನು ನಾಮಿನೇಷನ್ ಮಾಡಿದರು. ಧನರಾಜ್ ಮನೆಯಲ್ಲಿ ಆರಾಮವಾಗಿರುತ್ತಾರೆ‌. ಆದರೆ ಕೆಲ ಸಂದರ್ಭದಲ್ಲಿ ಅವರ ವರ್ತನೆ ಸ್ವಲ್ಪ ಅತಿಯಾಯ್ತು ಎನಿಸುವಂತೆ ಇರುತ್ತದೆ. ಶನಿವಾರದ ಎಪಿಸೋಡ್’ಗೆ ಬರುವ ಸುದೀಪ್ ಧನರಾಜ್’ಗೆ ಹೇಗೆ ಬುದ್ಧಿವಾದ ಹೇಳುತ್ತಾರೆ ಕಾದು ನೋಡಬೇಕಿದೆ.

Exit mobile version