Site icon Samastha News

Biriyani: ಮೂರು ರೂಪಾಯಿಗೆ ಹೊಟ್ಟೆ ತುಂಬ ಬಿರಿಯಾನಿ!

Biriyani

Biriyani

ಕೋವಿಡ್ ಬಳಿಕ ರೆಸ್ಟೊರೆಂಟ್ ಬ್ಯುಸಿನೆಸ್​ನಲ್ಲಿ ಬೂಮ್ ಆಗಿದೆ. ಅದರಲ್ಲೂ ಬಿರಿಯಾನಿ ಹೋಟೆಲ್​ಗಳು ಏರಿಯಾಗೊಂದರಂತೆ ತಲೆ ಎತ್ತಿವೆ. ಬಿರಿಯಾನಿಯ ಹೊಸ ಟ್ರೆಂಡ್ ಶುರುವಾಗಿದೆ. ಅರ್ಲಿ ಮಾರ್ನಿಂಗ್ ಬಿರಿಯಾನಿ ಸೇರಿದಂತೆ ಬೇರೆ ಬೇರೆ ರೀತಿಯ ಬಿರಿಯಾನಿ ಹೋಟೆಲ್​ಗಳು ಸಿಕ್ಕ-ಸಿಕ್ಕಲ್ಲಿ ತಲೆ ಎತ್ತಿದ್ದು ಗ್ರಾಹಕರನ್ನು ಸೆಳೆಯಲು ರುಚಿಯ ಜೊತೆಗೆ ಭಿನ್ನ ಭಿನ್ನ ಆಫರ್​ಗಳನ್ನು ಸಹ ನೀಡುತ್ತಿವೆ. ಇಲ್ಲೊಂದು ಹೋಟೆಲ್​ನವರು ಗ್ರಾಹಕರನ್ನು ಸೆಳೆಯಲು ಕೇವಲ ಮೂರು ರೂಪಾಯಿಗೆ ಬಿರಿಯಾನಿ ಕೊಡುತ್ತಿದ್ದಾರೆ.

ಇಲ್ಲೊಬ್ಬ ಹೋಟೆಲ್ ಮಾಲೀಕ ಕೇವಲ ಮೂರು ರೂಪಾಯಿಗೆ ಭರ್ಜರಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾನೆ. ಆದರೆ ಈ ಭರ್ಜರಿ ಆಫರ್ ಬೆಂಗಳೂರಿನಲ್ಲಿ ಇಲ್ಲ ಬದಲಿಗೆ ಆಫರ್ ಇರುವುದು ದೂರದ ಆಂಧ್ರ ಪ್ರದೇಶದಲ್ಲಿ. ಆಂಧ್ರದ ಪಶ್ಚಿಮ ಗೋಧಾವರಿ ಬಳಿಯ ಏಲೂರು ಜಿಲ್ಲೆಯ ಜಂಗರೆಡ್ಡಿಗುಡೆಂನ ಹೋಟೆಲ್​ನ ಈ ಭರ್ಜರಿ ಆಫರ್ ನೀಡಲಾಗಿದೆ.

Beer: ಕರ್ನಾಟಕಕ್ಕೆ ಕಾಲಿಟ್ಟ ಮತ್ತೊಂದು ಬಿಯರ್ ಕಂಪೆನಿ, ಬೆಲೆ ಎಷ್ಟು?

ಜಂಗರೆಡ್ಡಿಗುಡ್ಡೆಂ ಪಟ್ಟಣದಲ್ಲಿ ಅಕ್ಟೋಬರ್ 05 ರಂದು ಹೊಸ ಹೋಟೆಲ್ ಉದ್ಘಾಟನೆಗೊಂಡಿದ್ದು, ಹೋಟೆಲ್​ನ ಉದ್ಘಾಟನೆ ಆಫರ್ ಎಂದು ಮೂರು ರೂಪಾಯಿಗೆ ಬಿರಿಯಾನಿ ಕೊಡುವ ಆಫರ್ ಇರಿಸಲಾಗಿತ್ತು. ಅನ್​ಲಿಮಿಟೆಡ್ ರೆಸ್ಟೊರೆಂಟ್​ ಹೆಸರಿನ ಹೊಸ ರೆಸ್ಟೊರೆಂಟ್ ಒಂದು ಜಂಗರೆಡ್ಡಿಗುಡ್ಡೆಂ ನಲ್ಲಿ ಪ್ರಾರಂಭವಾಗಿದೆ. ಆದರೆ ಈ ಆಫರ್ ಹೋಟೆಲ್ ಉದ್ಘಾಟನೆಯಾದ ದಿನ ಮೊದಲ ಮೂರು ಗಂಟೆ ಮಾತ್ರವೇ ಇತ್ತಂತೆ. ಆದರೆ ಮೂರು ರೂಪಾಯಿಗೆ ಬಿರಿಯಾನಿ ತಿನ್ನಲು ಸಾಲು ಗಟ್ಟಿನಿಂತಿದ್ದರು.

ಮೂರು ರೂಪಾಯಿಗೆ ಬಿರಿಯಾನಿ ತಿನ್ನಲು ಜನ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಕಾರಣ ಜನರನ್ನು ನಿಯಂತ್ರಿಸುವುದು ಭಾರಿ ಕಷ್ಟವಾಗಿ ಪರಿಣಮಿಸಿದೆ. ಬಿರಿಯಾನಿ ಮಾತ್ರವೇ ಅಲ್ಲದೆ ಹೋಟೆಲ್​ನ ಇನ್ನಿತರೆ ಕೆಲವು ಐಟಂಗಳ ಮೇಲೂ ಆಫರ್​ಗಳನ್ನು ನೀಡಲಾಗಿತ್ತು, ಕಾರುಗಳಲ್ಲಿ, ಬಸ್ಸುಗಳನ್ನು ಬಂದ ಜನ ಹೋಟೆಲ್ ಮುಂದೆ ಮೂರು ರೂಪಾಯಿಗೆ ಬಿರಿಯಾನಿ ತಿನ್ನಲು ಸಾಲುಗಟ್ಟಿ ನಿಂತಿದ್ದರಂತೆ.

Exit mobile version