Blinkit
ಕೋವಿಡ್ ಬಳಿಕ ಭಾರತದಲ್ಲಿ ಹೊಸ ಉದ್ಯಮಗಳ ಅಲೆಯೇ ಎದ್ದಿದೆ. ಕೋವಿಡ್ ಬಳಿಕ ಭಾರತದಲ್ಲಿ ತಲೆ ಎತ್ತಿದ ಹೊಸ ಉದ್ಯಮಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚು. ಅದರಲ್ಲೂ ಕ್ವಿಕ್ ಕಾಮರ್ಸ್ ಬ್ಯುಸಿನೆಸ್ ಗಳಂತೂ ಕೋವಿಡ್ ಬಳಿಕ ಬಲು ಹೆಚ್ಚಾಗಿವೆ. 10 ಮಿನಿಷದಲ್ಲಿ ಆಹಾರ ಡೆಲಿವರಿ, ಕೊರಿಯರ್ ಡೆಲಿವರಿ, ದಿನಸಿ ಡೆಲಿವರಿ, ಔಷಧ ಡೆಲಿವರಿ ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಈ ಕ್ವುಕ್ ಕಾಮರ್ಸ್ ಉದ್ಯಮಗಳು ಬಲು ಬೇಗ ಭಾರತದಲ್ಲಿ ಪ್ರಚಲತೆ ಪಡೆದುಕೊಂಡಿವೆ, ಸಾವಿರಾರು ಕೋಟಿ ಮೌಲ್ಯದ ಉದ್ಯಮಗಳಾಗಿ ಬೆಳೆದು ನಿಂತಿವೆ. ಅದೂ ಅತ್ಯಂತ ಕಡಿಮೆ ಅವಧಿಯಲ್ಲಿ.
ಹೀಗೆ ಬಲು ಬೇಗ ಬೆಳೆದ ಕ್ವಿಕ್ ಕಾಮರ್ಸ್ ಸಂಸ್ಥೆಗಳಲ್ಲಿ ಬ್ಲಿಂಕಿಟ್ ಸಹ ಒಂದು. ಕ್ವಿಕ್ ಕಾಮರ್ಸ್ ವಿಭಾಗದ ನಂಬರ್ 1 ಸಂಸ್ಥೆಯಾಗಿದೆ ಬ್ಲಿಂಕಿಟ್. 10 ನಿಮಿಷದಲ್ಲಿ ದಿನಸಿ ಡೆಲಿವರಿ ಮಾಡುವ ಭರವಸೆ ಕೊಡುವ ಬ್ಲಿಂಕಿಟ್ ಈಗ ತನ್ನ ಡೆಲಿವರಿ ಸೇವೆಯನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಬಂದಿದೆ. ಇದೀಗ ಬ್ಲಿಂಕಿಟ್ ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಆಂಬುಲೆನ್ಸ್ ಸೇವೆಯನ್ನು ಪ್ರಾರಂಭ ಮಾಡಿದೆ. ಆದರೆ ಕೇಂದ್ರ ಸಚಿವರು ಬ್ಲಿಂಕಿಟ್ ಗೆ ಸಣ್ಣ ಎಚ್ಚರಿಕೆಯನ್ನು ನೀಡಿದ್ದಾರೆ.
‘ಬ್ಲಿಂಕಿಟ್ ದೇಶದ ಕಾನೂನನ್ನು ಮೀರಬಾರದು’ ಎಂದು ತುಸು ಖಾರವಾಗಿಯೇ ಹೇಳಿದ್ದಾರೆ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಷ್ ಘೋಯಲ್. ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿರುವ ಸಚಿವರು, ‘ಬ್ಲಿಂಕಿಟ್, ಆಂಬುಲೆನ್ಸ್ ಸೇವೆ ಹಾಗೂ ಔಷಧ ಡೆಲಿವರಿ ಸೇವೆ ಆರಂಭಿಸಿರುವುದು ಸರಿ, ನನ್ನ ಒಂದು ಎಚ್ಚರಿಕೆ ಎಂದರೆ ಬ್ಲಿಂಕಿಟ್ ಈ ನೆಲದ ಕಾನೂನನ್ನು ಗೌರವಿಸಬೇಕು, ಅದನ್ನು ಮೀರಬಾರದು’ ಎಂದಿದ್ದಾರೆ.
ಬ್ಲಿಂಕಿಟ್ ಸದ್ಯಕ್ಕೆ ಐದು ಆಂಬುಲೆನ್ಸ್ ಗಳನ್ನು ಮಾರುಕಟ್ಟೆಗೆ ತಂದಿದೆ. ಗುರುಗ್ರಾಮದಲ್ಲಿ ಸೇವೆ ಆರಂಭಿಸಿದ್ದು, ಸಂಸ್ಥೆ ಹೇಳಿಕೊಂಡಿರುವಂತೆ ಅವರ ಆಂಬುಲೆನ್ಸ್ ನಲ್ಲಿ ಆಮ್ಲಜನಕದ ಸಿಲಿಂಡರ್ ಸೇರಿದಂತೆ ಇನ್ನೂ ಕೆಲವು ಜೀವ ರಕ್ಷಕ ಉಪಕರಣಗಳು ಇರಲಿವೆ. ಇದರ ಜೊತೆಗೆ ಆಂಬುಲೆನ್ಸ್ ಜೊತೆಗೆ ಒಬ್ಬ ತರಬೇತಿ ಪಡೆದ ಪ್ಯಾರಾ ಮೆಡಿಕಲ್ ನೌಕರ ಇರುತ್ತಾನೆ, ಜೊತೆಗೆ ಒಬ್ಬ ತರಬೇತಿ ಪಡೆದ ಡ್ರೈವರ್ ಸಹ ಇರಲಿದ್ದಾನೆ. ಕೇವಲ ಹತ್ತು ನಿಮಿಷದಲ್ಲಿ ಇವರ ಆಂಬುಲೆನ್ಸ್ ಮನೆ ಬಾಗಿಲಿಗೆ ಬಂದು ನಿಲ್ಲಲಿದೆಯಂತೆ.
Goa: ಹೊಳಪು ಕಳೆದುಕೊಂಡ ಗೋವಾ, ಏನಾಯ್ತು ಈ ರಾಜ್ಯಕ್ಕೆ?
ಆಂಬುಲೆನ್ಸ್ ಸೇವೆಯ ಜೊತೆಗೆ ಅಗತ್ಯ ಔಷಧಗಳನ್ನು ಸಹ ಬ್ಲಿಂಕಿಟ್ ಡೆಲಿವರಿ ಮಾಡಲಿದೆ. ಆಂಬುಲೆನ್ಸ್ ಸೇವೆ ಹಾಗೂ ಔಷಧ ಡೆಲಿವರಿಗೆ ಭಾರತದಲ್ಲಿ ಕೆಲವು ನಿಯಮಗಳಿವೆ. ಹಾಗಾಗಿಯೇ ಕೇಂದ್ರ ಸಚಿವರು ಬ್ಲಿಂಕಿಟ್’ಗೆ ಸಣ್ಣ ಎಚ್ಚರಿಕೆ ನೀಡಿದ್ದಾರೆ.