Book Taxi
ಬೆಂಗಳೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನಕ್ಕೆ ಹೋಗಲು ವಿಮಾನ ಹತ್ತಬೇಕು ಎಂಬುದು ಉತ್ತರ ಭಾರತದವರು ಹೇಳುವ ಜೋಕು. ‘ಬೆಂಗಳೂರು ವಿಮಾನ ನಿಲ್ದಾಣ ಬೆಂಗಳೂರಿನಲ್ಲಿಲ್ಲ ಬದಲಿಗೆ ಬೇರೊಲ್ಲೊ ಇದೆ’, ‘ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವಷ್ಟೆ ಸಮಯ ಹಾಗೂ ಹಣ, ಬೆಂಗಳೂರು ವಿಮಾನ ನಿಲ್ದಾಣದಿಂದ, ಬೆಂಗಳೂರಿಗೆ ಹೋಗಲು ಆಗುತ್ತದೆ’ ಇವು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚಾಲ್ತಿಯಲ್ಲಿರುವ ಜೋಕುಗಳು. ಆದರೆ ಇವನ್ನೆಲ್ಲ ಸುಳ್ಳು ಮಾಡಲು ಟೊಂಕ ಕಟ್ಟಿ ನಿಂತಿದೆ ರೆಫೆಕ್ಸ್ ಇ-ವೀಲ್ಜ್ ಟ್ಯಾಕ್ಸಿ ಸೇವಾ ಸಂಸ್ಥೆ.
ಬೆಂಗಳೂರು ನಗರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುವುದು ಹರಸಾಹಸವೇ ಸರಿ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಫ್ಲೈಓವರ್ಗಳ ನಿರ್ಮಾಣ ಮಾಡಿ, ಸಿಗ್ನಲ್ ಫ್ರೀ ರಸ್ತೆ ಮಾಡಿ ವಿಮಾನ ನಿಲ್ದಾಣವನ್ನು ತಲುಪುವ ಸಮಯವನ್ನು ಕಡಿಮೆ ಮಾಡಿದೆ ಸರ್ಕಾರ, ಆದರೆ ವಿಮಾನ ನಿಲ್ದಾಣಕ್ಕೆ ತಲುಪಲು ತಗುಲುವ ವೆಚ್ಚವನ್ನು ಮಾತ್ರ ಯಾರಿಗೂ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಟ್ಯಾಕ್ಸಿಗೆ ಕನಿಷ್ಟ 1500 ದಿಂದ 3000 ದವರೆಗೂ ಕೊಡಬೇಕಾಗುತ್ತದೆ. ಅಪ್ಪಿ-ತಪ್ಪಿ ಕತ್ತಲಾದ ಮೇಲೆ ವಿಮಾನ ನಿಲ್ದಾಣದ ಕಡೆಗೆ ಹೊರಟಿರೆಂದರೆ 5000 ಸಾವಿರ ಹಣವನ್ನೂ ಕೊಡಬೇಕಾಗುತ್ತದೆ.
ಆದರೆ ಒಳ್ಳೆಯ ಉದ್ದೇಶದಿಂದ ಟ್ಯಾಕ್ಸಿ ಸೇವಾ ಉದ್ಯಮಕ್ಕೆ ಕಾಲಿಟ್ಟಿರುವ ರೆಫೆಕ್ಸ್ ಇ-ವೀಲ್ಜ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಬೆಂಗಳೂರಿನ ಯಾವುದೇ ಮೂಲೆಯಿಂದ ಟ್ಯಾಕ್ಸಿ ಬುಕ್ ಮಾಡಿದರೂ ಸಹ ಕೇವಲ 699 ರೂಪಾಯಿಗೆ ನೀವು ವಿಮಾನ ನಿಲ್ದಾಣ ತಲುಪಿಕೊಳ್ಳಬಹುದು. ಈ ಮೊದಲು ಇದೇ ರೆಫೆಕ್ಸ್ ಇ-ವೀಲ್ಜ್ನವರು 999 ರೂಪಾಯಿಗೆ ಬೆಂಗಳೂರಿನ ಯಾವುದೇ ಮೂಲೆಯಿಂದ ವಿಮಾನ ನಿಲ್ದಾಣಕ್ಕೆ ತಲುಪುವ ಆಫರ್ ಬಿಟ್ಟಿದ್ದರು. ಆದರೆ ಈಗ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಿದ್ದು ಕೇವಲ 699 ರೂಪಾಯಿಗೆ ಬೆಂಗಳೂರು ನಗರದ ಯಾವುದೇ ಮೂಲೆಯಿಂದಲೂ ರೆಫೆಕ್ಸ್ ಇ-ವೀಲ್ಜ್ ಟ್ಯಾಕ್ಸಿ ಬುಕ್ ಮಾಡಿ ವಿಮಾನ ನಿಲ್ದಾಣ ತಲುಪಿಕೊಳ್ಳಬಹುದು.
Refex Eveelz: ಎಂಜಿ ಜೊತೆ ಕೈಜೋಡಿಸಿದ ಬೆಂಗಳೂರಿನ ಜನಪ್ರಿಯ ಟ್ಯಾಕ್ಸಿ ಸಂಸ್ಥೆ
ಈ ಆಫರ್ನ ಲಾಭ ಪಡೆಯಲು ಕೆಲವು ಸರಳ ಸ್ಟೆಪ್ಸ್ಗಳನ್ನು ಅನುಸರಿಸಬೇಕು. ಮೊದಲಿಗೆ ರೆಫೆಕ್ಸ್ ಇ-ವೀಲ್ಜ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ನಿಮ್ಮ ರೈಡ್ ಅನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬೇಕು ಟ್ಯಾಕ್ಸಿ ಬುಕ್ ಮಾಡುವಾಗ FLAT699 ಪ್ರೋಮೊ ಕೋಡ್ ಅನ್ನು ಬಳಸಬೇಕು. ಹೀಗೆ ಮಾಡುವುದರಿಂದ ಸರಳವಾಗಿ ನೀವು ಕೇವಲ 699 ರೂಪಾಯಿಗಳಿಗೆ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ. ರೆಫೆಕ್ಸ್ ಇ-ವೀಲ್ಜ್ ಅಪ್ಲಿಕೇಶನ್ ಅನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ರೆಫೆಕ್ಸ್ ಇ-ವೀಲ್ಜ್ ಬಗ್ಗೆ
ರೆಫೆಕ್ಸ್ ಇ-ವೀಲ್ಜ್ ಘನ ಉದ್ದೇಶದಿಂದ ಟ್ಯಾಕ್ಸಿ ಸೇವಾ ಉದ್ಯಮಕ್ಕೆ ಕಾಲಿಟ್ಟಿದೆ ಮತ್ತು ವರ್ಷಗಳಿಂದಲೂ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದೆ. ರೆಫೆಕ್ಸ್ ಇ-ವೀಲ್ಜ್ ಸಂಸ್ಥೆಯ ಎಲ್ಲ ಟ್ಯಾಕ್ಸಿಗಳು ಇಂಧನ ರಹಿತ ಟ್ಯಾಕ್ಸಿಗಳು, ಈ ಸಂಸ್ಥೆ ಟ್ಯಾಕ್ಸಿ ಸೇವೆಗೆ ಕೇವಲ ಬ್ಯಾಟರಿ ಚಾಲಿತ ಕಾರುಗಳನ್ನಷ್ಟೆ ಬಳಸುತ್ತದೆ. ಇದಕ್ಕೆಂದೆ ಟಾಟಾ, ಮಹಿಂದ್ರಾ, ಎಂಜಿ ಇನ್ನಿತರೆ ಪ್ರಮುಖ ಇವಿ ಕಾರುಗಳ ನಿರ್ಮಾಣ ಮಾಡುವ ಸಂಸ್ಥೆಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಟರಿ ಚಾಲಿತ ವಾಹನ ಬಳಕೆಯಿಂದ ಇಂಧನದಲ್ಲಿ ಆಗುವ ಉಳಿತಾಯವನ್ನು ಗ್ರಾಹಕರಿಗೆ ಆಫರ್ಗಳ ಮೂಲಕ ವಿತರಣೆ ಮಾಡುತ್ತಿದೆ. ಹಾಗಾಗಿ ಇಷ್ಟು ಕಡಿಮೆ ಮೊತ್ತಕ್ಕೆ ರೈಡ್ಗಳನ್ನು ನೀಡಲು ಈ ಸಂಸ್ಥೆಗೆ ಸಾಧ್ಯವಾಗುತ್ತಿದೆ.