RCB in IPL
ಐಪಿಎಲ್ನಲ್ಲಿ ಆರ್ಸಿಬಿಯ ಕಳಪೆ ಪ್ರದರ್ಶನ ಹೊಸದಲ್ಲ, ಮಾಮೂಲಿನಂತೆ ಈ ವರ್ಷವೂ ಆರ್ಸಿಬಿ ತನ್ನ ಕೆಟ್ಟ ಪ್ರದರ್ಶನವನ್ನು ಮುಂದುವರೆಸಿದೆ. ಆಡಿರುವ ಏಳು ಪಂದ್ಯಗಳಲ್ಲಿ ಪಂಜಾಬ್ ಮೇಲೆ ಗೆಲುವು ಸಾಧಿಸಿರುವುದು ಹೊರತುಪಡಿಸಿ ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ ಪ್ರತಿವರ್ಷದಂತೆ ಈ ವರ್ಷ ಸಹ ಆರ್ಸಿಬಿ ಅಭಿಮಾನಿಗಳು ಇನ್ನೂ ಭರವಸೆ ಕಳೆದುಕೊಂಡಿಲ್ಲ. ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆಯೆಂದು ಕಾತರರಾಗಿ ಕಾಯುತ್ತಿದ್ದಾರೆ. ಅದು ನಿಜವೂ ಹೌದು, ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಇನ್ನೂ ಅವಕಾಶಗಳಿವೆ.
ಆರ್ಸಿಬಿ ಈ ವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಆರ್ಸಿಬಿಗೆ ಇನ್ನೂ ಏಳು ಪಂದ್ಯಗಳು ಬಾಕಿ ಇವೆ. ಈ ಏಳೂ ಪಂದ್ಯಗಳನ್ನು ಆರ್ಸಿಬಿ ಒಂದೊಮ್ಮೆ ಗೆದ್ದರೆ ಆಗ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಮುಂದಿನ ಏಳೂ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದರೆ ಅದರ ಪಾಯಿಂಟ್ಸ್ 16 ಆಗುತ್ತದೆ. 16 ಪಾಯಿಂಟ್ಸ್ ಪಡೆದ ತಂಡಗಳು ಕೊನೆಯದಾಗಿ ಪ್ಲೇ ಆಫ್ ಪ್ರವೇಶಿಸುವ ಅರ್ಹತೆ ಗಿಟ್ಟಿಸುವ ದೊಡ್ಡ ಸಾಧ್ಯತೆ ಇರುತ್ತದೆ. ಎಂಟಕ್ಕಿಂತಲೂ ಹೆಚ್ಚು ಐಪಿಎಲ್ ತಂಡಗಳು ಆಡುವಾಗ 16 ಪಾಯಿಂಟ್ಸ್ ಪ್ಲೇ ಆಫ್ ಅವಕಾಶ ಪಡೆಯಲು ಕನಿಷ್ಠ ಪಾಯಿಂಟ್ಸ್ ಆಗಿರುತ್ತದೆ. ಒಂದೊಮ್ಮೆ ಎರಡು ತಂಡಗಳು 16 ಅಂಕಗಳನ್ನು ಗಳಿಸಿದ್ದರೆ ರನ್ರೇಟ್ ಆಧಾರದಲ್ಲಿ ಒಂದು ತಂಡ ಪ್ಲೇಆಪ್ ಪ್ರವೇಶಿಸುತ್ತದೆ.
Kolkatta vs Rajasthan: ಚೆನ್ನಾಗಿ ಆಡಲಿರುವ ಸಂಭ್ಯಾವ್ಯ ಆಟಗಾರರ ಪಟ್ಟಿ
ಆರ್ಸಿಬಿ 2009 ರಲ್ಲಿ ಇದೇ ಸ್ಥಿತಿಯಲ್ಲಿತ್ತು. ಆಡಿದ ಆರು ಪಂದ್ಯದಲ್ಲಿ ಐದನ್ನು ಸೋತಿತ್ತು. ಆದರೆ ಅದಾದ ಮೇಲೆ ಆಡಿದ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶಿಸಿದ್ದು ಮಾತ್ರವೆ ಅಲ್ಲದೆ ಫೈನಲ್ ಏರಿತ್ತು. ಫೈನಲ್ನಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಸೋತಿತು. ಈ ಬಾರಿಯೂ ಅಂಥಹಾ ಅದ್ಭುತ ನಡೆಯುತ್ತದೆ ಕಾದು ನೋಡಬೇಕಿದೆ. ಆರ್ಸಿಬಿಗೆ ಇನ್ನು ಏಳು ಪಂದ್ಯಗಳು ಬಾಕಿ ಇದೆ. ಅದರಲ್ಲಿ ಮೂರು ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ. ಆರ್ಸಿಬಿ ಕ್ರಮವಾಗಿ, ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್ ವಿರುದ್ಧ ಎರಡು ಪಂದ್ಯ, ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ವಿರುದ್ಧ ಪಂದ್ಯಗಳನ್ನು ಆಡಲಿದೆ. ಈ ಏಳು ಪಂದ್ಯಗಳನ್ನು ಗೆಲ್ಲುವ ಜೊತೆಗೆ ರನ್ರೇಟ್ ಅನ್ನು ಸಹ ತುಸು ಹೆಚ್ಚಿಸಿಕೊಂಡರೆ ಆರ್ಸಿಬಿಗೆ ಇನ್ನೂ ಅವಕಾಶ ಇದೆ.