Cat Kidnap Case: ಕರ್ನಾಟಕ ಹೈಕೋರ್ಟ್ ನಲ್ಲಿ ಬೆಕ್ಕಿನ ಕಿಡ್ನ್ಯಾಪ್ ಪ್ರಕರಣ!

0
124
Cat Kidnap Case

Cat Kidnap Case

ನ್ಯಾಯಾಲಯಗಳಲ್ಲಿ ಒಮ್ಮೊಮ್ಮೆ ಚಿತ್ರ-ವಿಚಿತ್ರ ಪ್ರಕರಣಗಳು ಬರುವುದುಂಟು‌. ಆನೆಗೆ ಹಾಕುವ ನಾಮದ ಬಗ್ಗೆ ವರ್ಷಗಟ್ಟಲೆ ವಿಚಾರಣೆ, ವಾದ ವಿವಾದಗಳು ನಮ್ಮ ದೇಶದ ನ್ಯಾಯಾಲಯದಲ್ಲಿ ನಡೆದಿದ್ದಿದೆ. ಆದರೆ ಕರ್ನಾಟಕ ಹೈಕೋರ್ಟ್ ಗೆ ಕೆಲವು ದಿನಗಳ ಹಿಂದೆಯಷ್ಟೆ ಬೆಕ್ಕಿನ ಕಿಡ್ನ್ಯಾಪ್ ಕೇಸ್ ಒಂದು ಬಂದಿದೆ. ಪ್ರಕರಣದ ವಿಚಾರಣೆಯೂ ನಡೆದಿದೆ!

ಬೆಂಗಳೂರಿನ ಮಹಿಳೆಯೊಬ್ಬಳು, ತನ್ನ ನೆರೆಮನೆಯ ವ್ಯಕ್ತಿಯ ಮೇಲೆ ತನ್ನ ಬೆಕ್ಕನ್ನು ಅಪಹರಣ ಮಾಡಿದ್ದಾನೆಂದು ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯ  ದೂರು ಆಧರಿಸಿ ಪೊಲೀಸರು FIR ಸಹ ದಾಖಲಿಸಿ, ಬೆಕ್ಕು ಅಪಹರಿಸಿರುವ ಆರೋಪಿ ತಾಹಾ ಹುಸ್ಸೇನ್ ನ ವಿಚಾರಣೆ ಸಹ ಮಾಡಿದ್ದಾರೆ. ಇದರಿಂದ ರೋಸಿ ಹೋದ ತಾಹಾ ಹುಸ್ಸೇನ್ FIR ರದ್ದು ಮಾಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನರಸಪ್ಪ, ಬೆಕ್ಕು ಅಪಹರಣ ದೂರಿನಡಿ FIR ದಾಖಲಿಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಕ್ಕನ್ನು ಆರೋಪಿ ತಾಹಾ ಹುಸೇನ್ ಅವರೇ ಅಪಹರಿಸಿದ್ದಾರೆ ಎಂಬ ನಿರ್ಣಯಕ್ಕೆ ಹೇಗೆ ಬಂದಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಪೊಲೀಸರು ತಾವು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದು, ಬೆಕ್ಕು ತಾಹಾ ಹುಸೇನ್ ಮನೆಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದಿದ್ದಾರೆ.

Bar Owners Association: ಸರ್ಕಾರದ ವಿರುದ್ಧ ಬಾರ್ ಮಾಲೀಕರ ಪ್ರತಿಭಟನೆ, ಜುಳಯ 26ಕ್ಕೆ ಮದ್ಯ ಸಿಗಲ್ವ?

ಬೆಕ್ಕು ಗೋಡೆಗಳನ್ನು ಹಾರಿ, ಕಿಟಕಿಗಳಿಂದ ತೂರಿ ಹೋಗುತ್ತಿರುತ್ತದೆ. ಹಾಗಿದ್ದ ಮೇಲೆ ತಾಹಾ ಹುಸೇನ್ ಮನೆಯಲ್ಲೇ ಅದು ಇದೆಯೆಂಬ ನಿರ್ಣಯಕ್ಕೆ ಹೇಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು ತಾಹಾ ಹುಸೇನ್ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಮಾಡಿರುವುದಲ್ಲದೆ, ತಾಹಾ ವಿರುದ್ಧ ಯಾವುದೇ ತನಿಖೆ ನಡೆಸಬಾರದು ಎಂದು ಆದೇಶಿಸಿದ್ದಾರೆ.

ಮಹಿಳೆಯ ದೂರು ಆಧರಿಸಿ ಪೊಲೀಸರು  ತಾಹಾ ವಿರುದ್ಧ ಸೆಕ್ಷನ್ 504, 506, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಶಾಂತಿ ಭಂಗಕ್ಕೆ ಯತ್ನ, ಅಪರಾಧಿತನದ ಉದ್ದೇಶದಿಂದ ಕೃತ್ಯ, ಮಹಿಳೆಯ ಗೌರವಕ್ಕೆ ಧಕ್ಕೆ ಇನ್ನಿತರೆ ಆರೋಪಗಳನ್ನು ಹೊರಿಸಿದ್ದರು. ಆದರೆ ಈಗ ಹೈಕೋರ್ಟ್ ಆದೇಶದಿಂದ ಎಲ್ಲವೂ ರದ್ದಾಗಿದ್ದು, ತಾಹಾ ನಿರಾಳನಾಗಿದ್ದಾನೆ.

LEAVE A REPLY

Please enter your comment!
Please enter your name here