Site icon Samastha News

Chikkaballapur: ತಮ್ಮದೇ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತರು

Chikkaballapur

Chikkaballapur

ಲೋಕಸಭೆ ಚುನಾವಣೆಯಲ್ಲಿ‌ (Lok Sabha Election 2024) ಕುತೂಹಲ ಕೆರಳಿಸಿದ್ದ ಲೋಕಸಭೆ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಸಹ ಒಂದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ಸೋತಿದ್ದ ಸುಧಾಕರ್ ಲೋಕಸಭೆಗೆ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಶಾಸಕ ಪ್ರದೀಪ್ ಈಶ್ವರ್ ಅಂತೂ ಚುನಾವಣಾ ಪ್ರಚಾರದ ಸಮಯದಲ್ಲಿ ಸುಧಾಕರ್ ವಿರುದ್ಧ ಪುಂಖಾನುಪುಂಖವಾಗಿ ಡೈಲಾಗ್ ಗಳನ್ನು ಹೊಡೆದಿದ್ದರು. ಈಗ ಸುಧಾಕರ್ ಗೆದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಲವು ಮುಖಂಡರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧವೇ ತಿರುಗಿ ಬಿದ್ದಿದ್ದು ಶಾಸಕರ ವಿರುದ್ಧ ಕಾಂಗ್ರೆಸ್ ರಾಜ್ಯ ಮುಖಂಡರಿಗೆ ದೂರು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ಬಳಿಕ ಮಾತನಾಡಿದ್ದ ಯುವ‌ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಅವರ ಪುತ್ರ ಜಗದೀಶ್, ಪಕ್ಷದ ಸೋಲಿಗೆ ಶಾಸಕ ಪ್ರದೀಪ್ ಈಶ್ವರ್ ಅವರ ವಿವೇಚನಾ ರಹಿತ ಹೇಳಿಕೆಗಳೇ ಕಾರಣ ಎಂದಿದ್ದರು. ಇದರಿಂದ ಸಿಟ್ಟಗಿದ್ದ ಶಾಸಕ ಪ್ರದೀಪ್ ಈಶ್ವರ್, ಜಗದೀಶ್ ಅವರನ್ನು ಉಚ್ಚಾಟನೆ ಮಾಡಿ ಆದೇಶ ಪ್ರತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸ್ ಆಫ್ ನಲ್ಲಿ ಹಂಚಿಕೊಂಡಿದ್ದರು.

ಎಲ್ಲರ ಕಣ್ಣು ನಿತೀಶ್‌ ಕುಮಾರ್‌ ಮೇಲೆ, ಯಾರು ಈ ನಿತೀಶ್‌ ಕುಮಾರ್?‌ ರಾಜಕೀಯ ಹಿನ್ನೆಲೆ ಏನು?

ಇದರಿಂದ ಕೋಪಗೊಂಡ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜಿನಪ್ಪ, ನಗರಸಭೆ ಸದಸ್ಯ ರಫೀಕ್, ಉಚ್ಛಾಟಿತ ಸದಸ್ಯ ಜಗದೀಶ್ ಇನ್ನೂ ಕೆಲವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟೊಯಾಗಿ ಉಚ್ಚಾಟನೆ ತೆರವು ಮಾಡಬೇಕೆಂದು ಕೋರಿರುವುದಲ್ಲದೆ ಪ್ರದೀಪ್ ಈಶ್ವರ್ ವಿರುದ್ಧವೂ ದೂರು ಸಲ್ಲಿಸಿ ಬಂದಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಅವರನ್ನು ಸಹ ಭೇಟಿಯಾಗಿ ಅವರಿಗೂ ಮನವಿ ಸಲ್ಲಿಸಿ ಬಂದಿದ್ದಾರೆ.

ಮನವಿ ಸ್ವೀಕರಿಸಿರುವ ಡಿಕೆ ಶಿವಕುಮಾರ್, ಉಚ್ಛಾಟನೆ ಆದೇಶ ವಾಪಾಸ್ ಪಡೆಯುವಂತೆ ಸೂಚಿಸಿದ್ದಾರೆ. ಅಲ್ಲದೆ ಪ್ರದೀಪ್ ಈಶ್ವರ್ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಲಾಗುವುದು ಎಂದಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಹಲವು ನಾಯಕರು ಈಗಾಗಲೇ ಪ್ರದೀಪ್ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ಶಾಸಕ ಪ್ರದೀಪ್ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

Exit mobile version