CM Siddaramaiah
ಮುಡಾ ಹಗರಣ ಕರ್ನಾಟಕ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ 14 ಸೈಟುಗಳನ್ನು ಅಕ್ರಮವಾಗಿ ನೊಂದಣಿ ಮಾಡಿಸಲಾಗಿದೆ. ಇದರಿಂದ ಸರ್ಕಾರಕ್ಕೆ 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪ ಮಾಡಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಮುಡಾ (ಮೈಸೂರು ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ) ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಡಾ ಹಗರಣದ ಹೆಸರಿನಲ್ಲಿ ಬಿಜೆಪಿಗರು ಭಾರಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯಪಾಲರು ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಒಪ್ಪಿಗೆ ಸೂಚಿಸಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ತನಿಖೆ ಆರಂಭವಾದ ಬಳಿಕ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದೆಂಬ ಅಭಿಪ್ರಾಯಗಳು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ.
ಜಾರ್ಖಂಡ್ ನ ಸಿಎಂ ಹೇಮಂತ್ ಸುರೇನ್ ಅವರನ್ನು ಸಹ ಇದೇ ರೀತಿ ಭೂ ಹಗರಣದಲ್ಲಿ ಇದೇ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿ ಸಮಯ ಕಳೆದ ಹೇಮಂತ್ ಸೊರೇನ್ ಇದೇ ತಿಂಗಳು ಜಾಮೀನಿನ ಮೇಲೆ ಬಿಡುಗಡೆ ಆದರು. ಹೇಮಂತ್ ಅವರು ಹಗರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂಬ ಕಾರಣ ನೀಡಿ ಅವರಿಗೆ ಎಂಟು ತಿಂಗಳ ಬಳಿಕ ಜಾಮೀನು ನೀಡಲಾಯ್ತು. ಇನ್ನು ದೆಹಲಿಯಲ್ಲಿ ಸಹ ಸಿಎಂ ಅರವಿಂದ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಮೇಲೂ ಸಹ ಭೂ ಹಗರಣದ ಆರೋಪ ಹೊರಿಸಲಾಗಿದ್ದು ಅವರನ್ನೂ ಸಹ ಜೈಲಿಗೆ ಕಳಿಸುವ ಹುನ್ನಾರ ಮಡೆಯುತ್ತಿದೆ ಎನ್ನಲಾಗಿದೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ‘ನನ್ನ ಪತ್ನಿಗೆ ಪರಿಹಾರವಾಗಿ 14 ಸೈಟುಗಳು ನೀಡಲಾಗಿದ್ದು. ಆ ಮೂಲ ಜಮೀನನ್ನು ನನ್ನ ಪತ್ನಿಯ ಸಹೋದರ 1998 ರಲ್ಲಿ ಉಡುಗೊರೆಯಾಗಿ ನೀಡಿದ್ದ ಎಂದಿದ್ದಾರೆ. ಆದರೆ ಆ ಮೂಲ ಜಮೀನನ್ನೂ ಸಹ ಸಿದ್ದರಾಮಯ್ಯ ಅವರ ಸಂಬಂಧಿ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದ ಎಂದು ಈಗ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತ ಆರೋಪಿಸಿದ್ದಾರೆ.
Biriyani: ಬೆಳ್ಳಂಬೆಳಿಗ್ಗೆ ಬಿರಿಯಾನಿ ಹೋಟೆಲ್ ಗಳಿಗೆ ಕಾದಿದೆ ಸರ್ಕಾರದ ಏಟು
ಪ್ರಕರಣ, ಕೇಂದ್ರದ ತನಿಖಾ ಸಂಸ್ಥೆ ಇಡಿ ಕೈಗೆ ಹೋದರೆ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡುವುದು ಪಕ್ಕ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೇಮಂತ್ ಸುರೇನ್, ದೆಹಲಿಯ ಅರವಿಂದ್ ಕೇಜ್ರಿವಾಲ್ ರೀತಿ ಜೈಲು ಸೇರಲೇ ಬೇಕಾಗುತ್ತದೆ ಎನ್ನಲಾಗುತ್ತಿದೆ.