Site icon Samastha News

Crude Oil: ದಾಖಲೆ ಕುಸಿದ ಕಂಡ ಕಚ್ಚಾ ತೈಲ ಬೆಲೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿತ ಯಾವಾಗ?

Crude Oil

Crude Oil

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದೆ. 2021 ರಿಂದಲೂ ಕುಸಿತದ ಹಾದಿಯಲ್ಲಿಯೇ ಇರುವ‌ಕಚ್ಚಾ ತೈಲ ಬೆಲೆ ಈಗ 2021 ಮಹಾ ಕುಸಿತದ ಹಂತ ತಲುಪಿದ್ದು, ಮೂರು ವರ್ಷದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. ಈಗಿನ ಬೆಲೆಯಂತೆ ಕಚ್ಚಾ ತೈಲು ಪ್ರತಿ ಬ್ಯಾರಲ್ ಗೆ ಕೇವಲ 64 ಡಾಲರ್ ಗೆ ಮಾರಾಟವಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ ಎಲ್ಲೆಡೆ ಇಂಧನ ಬೆಲೆಗಳು ಕುಸಿಯುವುದು ಸಾಮಾನ್ಯ. ಆದರೆ ಭಾರತದಲ್ಲಿ ಅದಾಗಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದಲೂ ಕಚ್ಚಾ ತೈಲ ಬೆಲೆ ಕಡಿಮೆಯೇ ಇದೆ ಹಾಗಿದ್ದರೂ ಸಹ ಭಾರತದಲ್ಲಿ ಇಂಧನ ದರಗಳು ಏರುತ್ತಲೆ ಸಾಗುತ್ತಿವೆ. ಈಗ ಮತ್ತೊಮ್ಮೆ ಕಚ್ಚಾ ತೈಲ ಬೆಲೆ ಮೂರು ವರ್ಷದಲ್ಲೇ ಕಡಿಮೆಗೆ ಕುಸಿದಿದೆ ಆದರೆ ಭಾರತದಲ್ಲಿ ಇಂಧನ ಬೆಲೆ ಕಡಿಮೆ ಆಗಲಿದೆಯೇ ಎಂಬ ಅನುಮಾನ ಮೂಡಿದೆ.

ಚೀನಾ ಕೆಲವು ದೊಡ್ಡ ದೇಶಗಳು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿರುವ ಕಾರಣ ಕಚ್ಚಾ ತೈಲದ ಬೆಲೆ ಕುಸಿದಿದೆ ಎನ್ನಲಾಗುತ್ತಿದೆ. 2023 ಕ್ಕೆ ಹೋಲಿಸಿದರೆ 2024 ರಲ್ಲಿ ಈವರೆಗೆ ಚೀನಾ ಕಚ್ಚಾ ತೈಲ ಆಮದಿನಲ್ಲಿ 3% ಕಡಿಮೆ ಮಾಡಿದೆ. ರಷ್ಯಾ, ಅಮೆರಿಕ ಸಹ ಕಚ್ಚಾ ತೈಲ ಆಮದಿನಲ್ಲಿ ಇಳಿಕೆ ಮಾಡಿದೆ. ಅಲ್ಲದೆ ಭಾರತವೂ ಸಹ ಕಚ್ಚಾ ತೈಲ‌ಆಮದು ಕಡಿಮೆ ಮಾಡಿದೆ. ಇದರ ಜೊತೆಗೆ ಕಚ್ಚಾ ತೈಲ ಸಂಗ್ರಹವನ್ನು ಹೆಚ್ಚು ಮಾಡಿರುವ ಕಾರಣ ಬೆಲೆಯಲ್ಲಿ ತೀವ್ರ ಇಳಿಕೆ ಆಗಿದೆ.

Dodaballapur: ಹೊಸ ನಗರ ನಿರ್ಮಾಣಕ್ಕೆ ದೊಡ್ಡಬಳ್ಳಾಪುರದ ಬಳಿ 25 ಎಕರೆ ಜಾಗ ನೀಡಿದ ಸರ್ಕಾರ

ಕಚ್ಚಾ ತೈಲ ಬೆಲೆಯಲ್ಲಿ ಉಂಟಾಗಿರುವ‌ ಕುಸಿತ ಭಾರತದಂತಹಾ ದೇಶಗಳಿಗೆ ಪ್ರತಿಕೂಲವಾಗಿ ಪರಿಣಮಿಸಬಹುದು ಎಂದು ಮಾರ್ಗನ್ ಸ್ಟ್ಯಾನ್ಲಿ ಅಭಿಪ್ರಾಯ ಪಟ್ಟಿದೆ.

Exit mobile version