Darshan Thoogudeepa
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಜಾ ಆಗಿದೆ. ದರ್ಶನ್ ಮಾತ್ರವೇ ಅಲ್ಲದೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಪ್ರದೋಶ್, ನಾಗರಾಜು ಇನ್ನೂ ಕೆಲವರ ಜಾಮೀನು ಅರ್ಜಿ ವಜಾ ಆಗಿದೆ. ಇಂದು ನ್ಯಾಯಾಧೀಶರು ಕೇವಲ ಇಬ್ಬರಿಗೆ ಮಾತ್ರವೇ ಜಾಮೀನು ನೀಡಿದ್ದಾರೆ. ದರ್ಶನ್ ಜೈಲು ಸೇರಿ ಬರೋಬ್ಬರಿ ನಾಲ್ಕು ತಿಂಗಳಾಗಿವೆ. ಇಂದು ಜಾಮೀನು ಸಿಗುವ ನಿರೀಕ್ಷೆ ದರ್ಶನ್ಗೆ ಇತ್ತು. ಆದರೆ ನ್ಯಾಯಾಧೀಶರು ಅರ್ಜಿಯನ್ನು ವಜಾ ಮಾಡಿದ್ದಾರೆ. ಹಾಗಿದ್ದರೆ ದರ್ಶನ್ಗೆ ಉಳಿದ ಆಯ್ಕೆಗಳು ಯಾವುವು?
57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಜಾಮೀನು ಅರ್ಜಿ ವಜಾ ಆಗಿದೆ. ಈಗ ದರ್ಶನ್ ಹೈಕೋರ್ಟ್ಗೆ ಅಪೀಲು ಹೋಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ನಡುವೆ ದರ್ಶನ್ಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಮತ್ತೊಮ್ಮೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಗ್ಯದ ಕಾರಣ ನೀಡಿ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ. ಈ ಹಿಂದಿನ ಅರ್ಜಿಯಲ್ಲಿ ಮತ್ತು ವಾದ-ಪ್ರತಿವಾದದಲ್ಲಿ ಒಮ್ಮೆಯೂ ಸಹ ದರ್ಶನ್ರ ಆರೋಗ್ಯ ಸಮಸ್ಯೆ ಬಗ್ಗೆ ಉಲ್ಲೇಖ ಮಾಡಿರಲಿಲ್ಲ ಹಾಗಾಗಿ ಈಗ ಆರೋಗ್ಯದ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಹೈಕೋರ್ಟ್ನಲ್ಲಿ ಅಪೀಲು ಹಾಕುವ ಆಯ್ಕೆ ಇದೆಯಾದರೂ ಅದು ಬಹಳ ಸುರಕ್ಷಿತವಾದುದಲ್ಲ ಎನ್ನಲಾಗುತ್ತಿದೆ. ಹೈಕೋರ್ಟ್ನಲ್ಲಿ ವಾದಿಸಲು ಹೆಚ್ಚುವರಿ ಕಾರಣಗಳಿದ್ದರೆ ಮಾತ್ರವೇ ಹೈಕೋರ್ಟ್ನಲ್ಲಿ ಜಾಮೀನು ಸಿಗುವ ಸಾಧ್ಯತೆ ಇರುತ್ತದೆ. ಯಾವುದೇ ಹೆಚ್ಚುವರಿ ಕಾರಣ ಇಲ್ಲದೆ, 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನೀಡಿದ ಕಾರಣಗಳನ್ನೆ ಮತ್ತೊಮ್ಮೆ ಹೈಕೋರ್ಟ್ನಲ್ಲಿ ನೀಡಿದರೆ ಅಲ್ಲಿಯೂ ಸಹ ಅರ್ಜಿ ವಜಾ ಆಗುವ ಸಾಧ್ಯತೆಯೇ ದಟ್ಟವಾಗಿರುತ್ತದೆ.
Darshan Case: ದರ್ಶನ್ ಪ್ರಕರಣದಲ್ಲಿ ಮಹತ್ತರ ವಿಷಯ ಬಹಿರಂಗ, ಪೊಲೀಸರು ಸುಳ್ಳು ಹೇಳಿದರೆ?
ಇದೇ ಕಾರಣಕ್ಕೆ ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ಈಗಾಗಲೇ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕವೂ ಸಹ ಸಾಕಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿರುತ್ತದೆ ಹಾಗಾಗಿ ಈ ಕಾರಣವನ್ನು ಮುಂದಿಟ್ಟು ದರ್ಶನ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇನ್ನು ಪವಿತ್ರಾ ಗೌಡ ಸಹ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ರೇಣುಕಾ ಸ್ವಾಮಿ ಪ್ರಕರಣದಲ್ಲಿ 17 ಜನರನ್ನು ಬಂಧಿಸಲಾಗಿತ್ತು ಅದರಲ್ಲಿ ಕಳೆದ ವಾರ ಮೂವರಿಗೆ ಜಾಮೀನು ದೊರಕಿದೆ. ಇಂದು ಇಬ್ಬರಿಗೆ ಜಾಮೀನು ದೊರೆಕಿದೆ. ಕೆಲವು ಆರೋಪಿಗಳಂತೂ ಜಾಮೀನಿಗೆ ಅರ್ಜಿ ಸಹ ಹಾಕಿಲ್ಲ.