Darshan Case
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಇನ್ನಿತರರು ಬಂಧನವಾಗಿ ಇಂದಿಗೆ (ಜೂನ್ 14) ನಾಲ್ಕು ದಿನಗಳಾಗಿವೆ. ಈ ಪ್ರಕರಣದಲ್ಲಿ ದಿನಕ್ಕೊಂದು ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಇಂದು ದರ್ಶನ್ ಹಾಗೂ ಗ್ಯಾಂಗ್ ಅನ್ನು ಎಲ್ಲಿಯೂ ಸ್ಥಳ ಮಹಜರಿಗೆ ಕಡೆದುಕೊಂಡು ಹೋಗಿರಲಿಲ್ಲವಾದರೂ. ಇಂದು ಸಹ ಕೆಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅದರ ವಿವರ ಇಲ್ಲಿದೆ.
* ಜೂನ್ 14 ರಂದು ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲಿಗೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 19 ಆಗಿದ್ದು, ಎಲ್ಲರೂ ಸಹ ಈಗ ಪೊಲೀಸರ ವಶದಲ್ಲಿಯೇ ಇದ್ದಾರೆ. ಕೆಲವು ಆರೋಪಿಗಳು ಸ್ವತಃ ಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ.
* ಪೊಲೀಸ್ ಅಧಿಕಾರಿಯದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ವೈರಲ್ ಆಗಿದ್ದು, ಆ ಆಡಿಯೋನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಅನ್ನು ಬಂಧಿಸದಂತೆ ತನಿಖಾಧಿಕಾರಿಗೆ ಬಹಳ ರಾಜಕೀಯ ಒತ್ತಡ ಬಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ.
* ದರ್ಶನ್ ಹಾಗೂ ಗ್ಯಾಂಗ್ ಶೆಡ್ನಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ವಿಡಿಯೋ ದೃಶ್ಯಾವಳಿಗಳು ಪೊಲೀಸರಿಗೆ ಲಭಿಸಿವೆ ಎನ್ನಲಾಗುತ್ತಿದೆ. ಮೊದಲಿಗೆ ಸಿಸಿಟಿವಿ ಆಫ್ ಮಾಡಲಾಗಿತ್ತು ಎಂಬ ವರದಿ ಬಂದಿತ್ತು. ಬಳಿಕ ಡಿಲೀಟ್ ಮಾಡಿದ್ದಾರೆ ಎಂಬ ವಾರ್ತೆ ಬಂತು. ಈಗ ನೋಡಿದರೆ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರಕಿವೆ ಎನ್ನಲಾಗುತ್ತಿದೆ.
https://samasthanews.com/darshan-old-friend-journalist-prakash-babu-writes-about-his-journey/
* ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ಚಿತ್ರದುರ್ಗದ ಅನು ಎಂಬಾತನ ತಂದೆ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇಂದೇ ಅನು, ಪೊಲೀಸರಿಗೆ ಶರಣಾಗಿದ್ದರು. ಮಗ ಪೊಲೀಸ್ ಕಸ್ಟಡಿಯಲ್ಲಿರುವ ವಿಷಯ ತಿಳಿದು ಅವರು ನಿಧನ ಹೊಂದಿದ್ದಾರೆ.
* ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಹೋಗುವಾಗಲೇ ಆತನಿಗೆ ದರ್ಶನ್ ತನ್ನನ್ನು ಹೊಡೆಯಬಹುದು ಎಂಬುದು ತಿಳಿದಿತ್ತು ಎನ್ನುವ ಅಂಶ ಇಂದು ಗೊತ್ತಾಗಿದೆ. ದಾರಿಯಲ್ಲಿ ಹೋಗುವಾಗ ತಪ್ಪಿಸಿಕೊಳ್ಳುವ ಹಲವು ಅವಕಾಶ ರೇಣುಕಾ ಸ್ವಾಮಿಗೆ ಲಭಿಸಿದರೂ ಸಹ ಆತ ತಪ್ಪಿಸಿಕೊಳ್ಳಲಿಲ್ಲ ಎಂದು ಕಾರು ಚಾಲಕನ ಗೆಳೆಯ ಮಾಧ್ಯಮಗಳಿಗೆ ಹೇಳಿದ್ದಾರೆ.
* ದರ್ಶನ್ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ಆರೋಪಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಒಳಗಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
* ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಸೇರಿಕೊಂಡು ದರ್ಶನ್ ಅನ್ನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದರು ಎಂದು ಬಿಜೆಪಿ ಮುಖಂಡ ಸಿಪಿ ಯೋಗೀಶ್ವರ್ ಹೇಳಿರುವುದು ರಾಜಕೀಯ ವಲಯದಲ್ಲಿ ಸಖತ್ ಚರ್ಚೆ ಆಗುತ್ತಿದೆ.
* ಇದೆಲ್ಲದರ ನಡುವೆ ದರ್ಶನ್ರ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ, ಪತಿ ದರ್ಶನ್ಗೆ ವಿಚ್ಛೇದನ ನೀಡುತ್ತಾರೆ ಎಂಬ ಗಾಳಿ ಸುದ್ದಿ ಸಹ ಹರಿದಾಡುತ್ತಿದೆ. ಆದರೆ ಇದು ಖಾತ್ರಿ ಆಗಿಲ್ಲ.