ರೇಣುಕಾ ಸ್ವಾಮಿ ಕೊಲೆ ಪ್ರಕರಣ ದೇಶದಾದ್ಯಂತ ಕುತೂಹಲ ಕೆರಳಿಸಿದೆ. ಬೆಂಗಳೂರು ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಅತ್ಯಂತ ಚುರುಕಾದ ಹಾಗೂ ಪ್ರಾಮಾಣಿಕ ತನಿಖೆಯನ್ನು ಈ ವರೆಗೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಪ್ರಕರಣದಲ್ಲಿ 17 ಜನರನ್ನು ಪೊಲೀಸರು ಬಂದಿಸಿದ್ದು, ಹಲವಾರು ಮಂದಿಯ ವಿಚಾರಣೆ ಮಾಡಿದ್ದಾರೆ. ಅದರಲ್ಲಿ ನಟ ಚಿಕ್ಕಣ್ಣ ಸಹ ಒಬ್ಬರು. ಚಿಕ್ಕಣ್ಣ ಅನ್ನು ಕೇವಲ ವಿಚಾರಣೆ ಮಾಡಿ ಸಾಕ್ಷಿಯಾಗಷ್ಟೆ ಪೊಲೀಸರು ಈ ಹಿಂದೆ ಪರಿಗಣಿಸಿದ್ದರು. ಆದರೆ ಈಗ ಪೊಲೀಸರು ಚಿಕ್ಕಣ್ಣ ವಿರುದ್ಧ ಕ್ರಮಕ್ಕೆ ಮುಂದಾಗಲು ಚಿಂತನೆ ನಡೆಸಿದ್ದಾರೆ.
ಅಸಲಿಗೆ ರೇಣುಕಾ ಸ್ವಾಮಿ ಕೊಲೆ ನಡೆದ ದಿನ ದರ್ಶನ್ ಹಾಗೂ ಚಿಕ್ಕಣ್ಣ ಒಟ್ಟಿಗೆ ಪಾರ್ಟಿ ಮಾಡಿದ್ದರು. ಆದರೆ ರೇಣುಕಾ ಮಿಯನ್ನು ಶೆಡ್ ಗೆ ಕರೆತಂದ ವಿಷಯ ತಿಳಿದ ಬಳಿಕ ದರ್ಶನ್ ಪಾರ್ಟಿ ಬಿಟ್ಟು ತೆರಳಿದ್ದರು, ಚಿಕ್ಕಣ್ಣ, ದರ್ಶನ್ ಜೊತೆ ಶೆಡ್ಡಿಗೆ ಹೋಗದೆ ನೇರವಾಗಿ ಮನೆಗೆ ಹೋಗಿದ್ದರು. ಇದೇ ಕಾರಣಕ್ಕೆ ಪೊಲೀಸರು ಈ ಹಿಂದೆ ಚಿಕ್ಕಣ್ಣ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಂಡಿದ್ದರು. ಚಿಕ್ಕಣ್ಣ ಅವರನ್ನು ಸುಮಾರು ಮೂರು ಬೇರೆ ಬೇರೆ ದಿನ ವಿಚಾರಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
Rishab Shetty: ರಿಷಬ್ ಶೆಟ್ಟಿ ಹೇಳಿಕೆಗೆ ತೀವ್ರ ವಿರೋಧ, ಕಾಂತಾರ 2 ಕಲೆಕ್ಷನ್ ಮೇಲೆ ಬೀರಲಿದೆಯೇ ಪರಿಣಾಮ?
ಆದರೆ ಇದೀಗ ಚಿಕ್ಕಣ್ಣ, ಜೈಲಿನಲ್ಲಿರುವ ದರ್ಶನ್ ಅನ್ನು ಭೇಟಿ ಆಗಲು ತೆರಳಿದ್ದು ಮಾತ್ರವಲ್ಲದೆ, ಜೈಲಿನಲ್ಲಿ ಭೇಟಿ ಸಹ ಆಗಿದ್ದಾರೆ. ಸಾಕ್ಷಿಗಳು, ಆರೋಪಿಗಳನ್ನು ಭೇಟಿ ಮಾಡಿರುವುದು ಪ್ರಕರಣದ ದಿಕ್ಕು ತಪ್ಪಿಸುವ ಅಥವಾ ಸಾಕ್ಷ್ಯಗಳ ತಿರುಚುವ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಚಿಕ್ಕಣ್ಣ, ಜೈಲಿನಲ್ಲಿ ಆರೋಪಿ ದರ್ಶನ್ ಅನ್ನು ಭೇಟಿ ಆಗಿರುವುದನ್ನು ಗಮನಿಸಿರುವ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಚಿಕ್ಕಣ್ಣ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜೂನ್ 09 ರಂದು ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಅತ್ಯಂತ ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದು, ದರ್ಶನ್ ಎರಡನೇ ಆರೋಪಿ ಆಗಿದ್ದಾರೆ. ದರ್ಶನ್ ರ ಹಲವು ಆಪ್ತರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಕೊಲೆ ಮಾಡಿದ್ದಲ್ಲದೆ, ಮಾಡಿರುವ ಕೊಲೆಯನ್ನು ಇನ್ನೊಬ್ಬರ ಮೇಲೆ ಹಾಕಿ ಮುಚ್ಚಿ ಹಾಕುವ ಯತ್ನವನ್ನೂ ಸಹ ದರ್ಶನ್ ಹಾಗೂ ಸಂಗಡಿಗರು ಮಾಡಿದ್ದರು.