Darshan Thoogudeepa: ರೇಣುಕಾ ಸ್ವಾಮಿ ಪ್ರಕರಣ:  ದರ್ಶನ್ ಗೆ ಎದುರಾಯ್ತು ಗಂಭೀರ ಸಂಕಷ್ಟ

0
143
Darshan Thoogudeepa

Darshan Thoogudeepa

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಈಗಾಗಲೇ ಎರಡೂವರೆ ತಿಂಗಳಾಗಿದೆ‌. ಕನಿಷ್ಟ ಇನ್ನೂ ಒಂದೆರಡು ತಿಂಗಳು ದರ್ಶನ್ ಗೆ ಜಾಮೀನು ಸಿಗದು ಎಂದೇ ಹೇಳಲಾಗುತ್ತಿದೆ. ಮನೆ ಊಟಕ್ಕೆ ಬೇಡಿಕೆ ಸಲ್ಲಿಸಿ ಹಾಕಿದ್ದ ಅರ್ಜಿಗೂ ನಾನಾ ಅಡೆತಡೆಗಳು ಎದುರಾಗಿವೆ. ಜೈಲಿನಲ್ಲಿ ಈಗಾಗಲೇ ಆರೋಗ್ಯ ಕೈಕೊಟ್ಟಿದೆ‌. ಇದೆಲ್ಲದರ ನಡುವೆ ದರ್ಶನ್ ಗೆ ಹೊಸ ಸಂಕಷ್ಟವೊಂದು ಎದುರಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಿದ್ಧವಾಗುತ್ತಿದ್ದು ಇನ್ನೆರಡು ವಾರಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಈ ನಡುವೆ ತನಿಖಾಧಿಕಾರಿಗಳು, ಈ ವರೆಗೆ ಸಂಗ್ರಹಿಸಿರುವ ಸಾಂಧರ್ಭಿಕ ಸಾಕ್ಷ್ಯಗಳು, ಪಡೆದಿರುವ ಹೇಳಿಕೆಗಳನ್ನೆಲ್ಲ ಪರಿಗಣಿಸಿ ದರ್ಶನ್ ಅನ್ನು ಈ ಹತ್ಯೆ ಪ್ರಕರಣದ ಎ1 ಆರೋಪಿಯನ್ನಾಗಿ ಮಾಡಲು ಮುಂದಾಗಿದ್ದಾರೆ.

ರೇಣುಕಾ ಸ್ವಾಮಿ‌ ಕೊಲೆ ಪ್ರಕರಣದಲ್ಲಿ ದರ್ಶನ್ ಅನ್ನು ಬಂಧಿಸಿದ ಬಳಿಕ ಸಲ್ಲಿಸಿದ್ದ ಪ್ರಾಥಮಿಕ ವರದಿಯಲ್ಲಿ ದರ್ಶನ್ ಅನ್ನು ಎ2 ಮಾಡಲಾಗಿತ್ತು. ದರ್ಶನ್ ರ ಪ್ರೇಯಸಿ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದರು. ಆದರೆ ಈಗ ಪೊಲೀಸರು ಕಲೆ ಹಾಕಿರುವ ಸಾಕ್ಷಿಯ ಆಧಾರದ ಮೇಲೆ ದರ್ಶನ್ ಅನ್ನು ಪ್ರಕರಣದ ಮೊದಲ ಆರೋಪಿಯನ್ನಾಗಿಸಲು ಮುಂದಾಗಿದ್ದಾರೆ. ಅದು ಮಾತ್ರವೇ ಅಲ್ಲದೆ ಉಳಿದ 16 ಆರೋಪಿತರ ಆರೋಪಿ ಸಂಖ್ಯೆಗಳಲ್ಲಿಯೂ ಕೆಲ ಬದಲಾವಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Yuvraj Singh: ಬರಲಿದೆ ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾ, ಹೀರೋ ಯಾರು?

ಪೊಲೀಸರು ಈವರೆಗೆ ಕಲೆ ಹಾಕಿರುವ ಸಾಕ್ಷ್ಯಗಳಿಂದ ದರ್ಶನ್, ಈ ಹತ್ಯೆ ಪ್ರಕರಣದ ಮೂಲ ರೂವಾರಿ ಎಂಬ ಅಂಶ ಪೊಲೀಸರಿಗೆ ಮನವರಿಕೆ ಆದಂತಿದೆ. ದರ್ಶನ್ ಹೇಳಿದ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ, ಹಾಗೂ ಕೊಲೆ ಪ್ರಕರಣ ಮುಚ್ಚಿ ಹಾಕುವ‌ ಪ್ರಯತ್ನದಲ್ಲಿಯೂ ದರ್ಶನ್ ಮುಂದಾಳತ್ವ ಇದೆಯೆಂಬುದು ಪೊಲೀಸರಿಗೆ ತಿಳಿದು ಬಂದಿರುವ ಕಾರಣ, ದರ್ಶನ್ ಅನ್ನು ಪ್ರಕರಣದ ಮೊದಲ ಆರೋಪಿ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here