Darshan: ದರ್ಶನ್ ಒಳ್ಳೆಯತನವನ್ನು ಉದಾಹರಣೆ ಸಹಿತ ವಿವರಿಸಿದ ಹಿರಿಯ ನಿರ್ಮಾಪಕ

0
239
Darshan

Darshan

ನಟ ದರ್ಶನ್ ಈಗ ಕೊಲೆ ಆರೋಪಿ ಆಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡು ಅವರ ವಿರೋಧಿಗಳು ಕೆಲವರು ಹಳ್ಳಕ್ಕೆ ಬಿದ್ದವರಿಗೆ ಆಳಿಗೊಂದು ಕಲ್ಲು ಎಂಬಂತೆ ದರ್ಶನ್ ವಿರುದ್ಧ ಒಬ್ಬರಾದ ಮೇಲೊಬ್ಬರು ಋಣಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅದಕ್ಕೆ ಸಮನಾಗಿ ದರ್ಶನ್​ರಿಂದ ಸಹಾಯ ಪಡೆದವರು, ದರ್ಶನ್​ರ ಆಪ್ತರು, ದರ್ಶನ್ ಅವರನ್ನು ಹತ್ತಿರದಿಂದ ಕಂಡವರು ದರ್ಶನ್ ಒಳ್ಳೆಯ ವ್ಯಕ್ತಿತ್ವದ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ದರ್ಶನ್​ ಪರವಾಗಿ ಮಾತನಾಡುತ್ತಾ, ದರ್ಶನ್​ಗೆ ಶಿಕ್ಷೆ ಆಗಬಾರದು ಎಂದು ಪ್ರತಿನಿತ್ಯ ಪ್ರಾರ್ಥಿಸುತ್ತೀನಿ ಎಂದಿದ್ದಾರೆ. ಅಲ್ಲದೆ ದರ್ಶನ್​ರ ಗುಣ ಎಂಥಹುದ್ದೆಂದು ಉದಾಹರಣೆಗಳ ಸಮೇತ ವಿವರಣೆ ನೀಡಿದ್ದಾರೆ. ಕೆಲವು ಹಳೆಯ ಘಟನೆಗಳನ್ನು ಉಲ್ಲೇಖ ಸಹ ಮಾಡಿದ್ದಾರೆ.

ನಾನು ಹಲವು ಬಾರಿ ದರ್ಶನ್ ಮನೆಗೆ ಹೋಗಿದ್ದೇನೆ. ಎರಡು ವರ್ಷದ ಹಿಂದೆ ಸಿನಿಮಾ ಒಂದಕ್ಕೆ ಅಡ್ವಾನ್ಸ್ ಕೊಡಲೆಂದು ಗೆಳೆಯರೊಬ್ಬರ ಜೊತೆಗೆ ದರ್ಶನ್​ ಮನೆಗೆ ಹೋಗಿದ್ದೆ. ದರ್ಶನ್ ಮೇಲಿದ್ದಾರೆ ಬರುತ್ತಾರೆ ಎಂದರು. ಆಗ ದರ್ಶನ್ ಮನೆಯಲ್ಲಿ ಯಾರ್ಯಾರೋ ಬಂದಿದ್ದರು. ಯಾರು ಇವರೆಲ್ಲ ಎಂದು ವಿಚಾರಿಸಿದಾಗ ತಿಳಿಯಿತು, ಅವರೆಲ್ಲ ದರ್ಶನ್​ರಿಂದ ಸಹಾಯ ಕೇಳಲು ಬಂದ ಜನರೆಂದು’ ಎಂದು ಕೆ ಮಂಜು ನೆನಪು ಮಾಡಿಕೊಂಡಿದ್ದಾರೆ.

ದರ್ಶನ್ ಸಹೋದರ ದಿನಕರ್ ನಿಜಕ್ಕೂ ಬಾಡಿಗೆ ಮನೆಯಲ್ಲಿದ್ದಾರೆಯೇ?

‘ಶಾಲೆ, ಕಾಲೇಜು ಫೀಸು ಕಟ್ಟಲಾಗದವರು. ಮನೆ ಬಾಡಿಗೆ ಕಟ್ಟಲಾಗದವರು, ಆಸ್ಪತ್ರೆ ಚಿಕಿತ್ಸೆಗೆ ಹಣ ಬೇಕಾದವರು ಹೀಗೆ ಯಾರ್ಯಾರೋ ದರ್ಶನ್ ಮನೆಗೆ ಬಂದು ಸಹಾಯ ಪಡೆದು ಹೋಗುತ್ತಿದ್ದರು. ದರ್ಶನ್ ಅವರಿಗೆ ಇಂದು ಹೀಗಾಗಿದೆ ಎಂದು ದರ್ಶನ್​ನ ಒಳ್ಳೆತನವನ್ನು ನಾವು ಮುಚ್ಚಿ ಹಾಕಬಾರದು. ಸಾವಿರಾರು ಜನ ಬಡವರಿಗೆ ದರ್ಶನ್ ಸಹಾಯ ಮಾಡಿದ್ದಾರೆ’ ಎಂದಿದ್ದಾರೆ ಕೆ ಮಂಜು.

ಹಣದ ವಿಷಯದಲ್ಲಿ ದರ್ಶನ್ ಬಹಳ ಕಟ್ಟುನಿಟ್ಟು, ಮೊದಲೇ ಸಂಭಾವನೆ ಬಗ್ಗೆ ಮಾತನಾಡುತ್ತಾರೆ. ಹೇಳಿದ ಸಮಯಕ್ಕೆ ಕೆಲಸ ಮುಗಿಸಿ ಕೊಡುತ್ತಾರೆ. ಶೂಟಿಂಗ್ ಸಮಯದಲ್ಲಿ ಯಾರಿಗೂ ಸಮಸ್ಯೆ ಕೊಡುವುದಿಲ್ಲ. ಅವರಿಂದ ಸಾಕಷ್ಟು ನಿರ್ಮಾಪಕರು ಬದುಕಿದ್ದಾರೆ. ಅವರಿಂದ ಸಾಕಷ್ಟು ಜನ ಅನ್ನ ತಿನ್ನುತ್ತಿದ್ದಾರೆ’ ಎಂದಿದ್ದಾರೆ ಮಂಜು.

LEAVE A REPLY

Please enter your comment!
Please enter your name here