Site icon Samastha News

Darshan Thoogudeepa: ಕೊಲ್ಲೂರಿನಲ್ಲಿ ದರ್ಶನ್ ಗಾಗಿ ಪತ್ನಿಯಿಂದ ಯಾಗ, ಏನಿದರ ಮಹತ್ವ, ಕೊಲ್ಲೂರಿನ ಮಹಿಮೆ ಏನು?

Darshan Thoogudeepa

Darshan Thoogudeepa

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಇಂದು (ಜುಲೈ 26) ಕೊಲ್ಲೂರಿನ ಮುಕಾಂಬಿಕಾ ದೇವಾಲಯದಲ್ಲಿ ಚಂಡಿಕಾ ಯಾಗ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು ಯಾಗ ಮಾಡಲು ಕೊಲ್ಲೂರಿಗೆ ಬಂದಿದ್ದು ಏಕೆ? ಮುಕಾಂಬಿಕಾ ದೇವಾಲಯದ ಚಂಡಿಕಾ ಯಾಗ ಮಾಡುವ ವಿಶೇಷತೆ ಏನು? ಈ ಕ್ಷೇತ್ರದ ಮಹಿಮೆ ಏನು? ವಿಜಯಲಕ್ಷ್ಮಿ ಅವರು ಇಲ್ಲಿಯೇ ಚಂಡಿಕಾ ಹೋಮ ಮಾಡಲು ಕಾರಣವೇನು? ಇಲ್ಲಿದೆ ಪೂರ್ಣ ವಿವರ.

ಚಂಡಿಕಾ ಹೋಮದ ಮಹತ್ವ

ಚಂಡಿಕಾ ಹೋಮ, ತ್ರಿಶಕ್ತಿ ಸಂಗಮ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯರ ಸಂಗಮ. ಇನ್ನು ಕೊಲ್ಲೂರಿನ ಮುಕಾಂಬಿಕಾ ಮಾತೆ ಸಹ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯವರ ಐಕ್ಯ, ಇದೊಂದು ಶಕ್ತಿ ಸಾನಿಧ್ಯ ಆಗಿರುವ ಕಾರಣ ಈ ಕ್ಷೇತ್ರದಲ್ಲಿ ಮುಕಾಂಬಿಕ ತಾಯಿಯ ಸಾನಿಧ್ಯದಲ್ಲಿ ಚಂಡಿಕಾ ಹೋಮ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಇನ್ನೆಲ್ಲೂ ನಡೆಯದಷ್ಟು ಚಂಡಿಕಾ ಹೋಮಗಳು ಕೊಲ್ಲೂರಿನಲ್ಲಿ ನಡೆಯುತ್ತವೆ ಎನ್ನುತ್ತಾರೆ ಇಲ್ಲಿನ ಅರ್ಚಕರು.

ಕೊಲ್ಲೂರು ಕ್ಷೇತ್ರದ‌ ಮಹಿಮೆ

ಕೊಲ್ಲೂರಿನಲ್ಲಿ ಹಲವು ರಾಜಕಾರಣಿಗಳು, ಉದ್ಯಮಿಗಳು, ಕ್ರಿಕೆಟ್ ತಾರೆಯರು, ಸಿನಿಮಾ ನಟ-ನಟಿಯರು ಬಂದು ಚಂಡಿಕಾ ಹೋಮ ಮಾಡಿದ್ದಾರೆ. ‘ಇಲ್ಲಿ ಹೋಮ ಮಾಡಿದವರಿ ಶೀಘ್ರ ಫಲ‌ಪ್ರಾಪ್ತಿಯಾಗಿದೆ ಹಾಗಾಗಿ ಎಲ್ಲರೂ ಈ ಕ್ಷೇತ್ರಕ್ಕೆ ಬರುತ್ತಾರೆ’ ಎನ್ನುತ್ತಾರೆ ಇಲ್ಲಿನ ಅರ್ಚಕರು‌. ನಾಸ್ತಿಕರಾಗಿದ್ದ ತಮಿಳುನಾಡಿನ ಮಾಜಿ ಸಿಎಂ ಎಂಜಿಆರ್ ಇಲ್ಲಿ ಬಂದು ದೇವಿಗೆ ಕೈ ಮುಗಿದರು. ಕೊನೆಯ ಕಾಲದ ವರೆಗೂ ಸಿಎಂ ಆಗಿದ್ದರು. ಆ ನಂತರ ಜಯಲಲಿತಾ ಸಹ ಇಲ್ಲಿದೆ ಬಂದು ನಡೆದುಕೊಂಡಿದ್ದಾರೆ. ಗಾಯಕ ಜೇಸುದಾಸ್ ಗೆ ಹತ್ತು ವರ್ಷ ಮಕ್ಕಳಾಗಿರಲಿಲ್ಲ. ಇಲ್ಲಿ ಬಂದು ಚಂಡಿಕಾ ಹೋಮ ಮಾಡಿದ ಬಳಿಕ ಅವರಿಗೆ ಮೂರು ಜನ ಮಕ್ಕಳಾದರು. ಧರಂಸಿಂಗ್ ಅವರು ಇಲ್ಲಿ ಚಂಡಿಕಾ ಹೋಮ ಮಾಡಿದ ಬಳಿಕ ಸಿಎಂ ಆದರು‌. ಬಿಎಸ್ ಯಡಿಯೂರಪ್ಪ ಸಹ ಇಲ್ಲಿ ಚಂಡಿಕಾ ಹೋಮ ಮಾಡಿದ ಬಳಿಕವೇ ಸಿಎಂ ಆಗಿದ್ದು. ಈ ರೀತಿಯ ಹಲವಾರು ಪವಾಡಗಳು ಕ್ಷೇತ್ರದಲ್ಲಿ ನಡೆದಿವೆ. ಹಾಗಾಗಿ ಇಲ್ಲಿಗೆ ಹೆಚ್ಚು ಜನ ಬರುತ್ತಾರೆ ಎನ್ನುತ್ತಾರೆ ಸ್ಥಳೀಯ ಅರ್ಚಕರು.

ದುರ್ಗೆ ದುರ್ಗತಿ‌ ನಾಶಿಣಿ

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಯಾವುದೇ ಸಂಕಷ್ಟದಲ್ಲಿದ್ದರೂ ದುರ್ಗೆ ಆ ಕಷ್ಟದಿಂದ ಮೇಲೆತ್ತುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿಯೇ ಈಗ ವಿಜಯಲಕ್ಷ್ಮಿ ಅವರು, ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಪತಿ ದರ್ಶನ್ ಪರವಾಗಿ ಕೊಲ್ಲೂರು ಮೂಕಾಂಭಿಕೆ ಸನ್ನಿಧಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದಾರೆ. ಯಾಗದ ಫಲದಿಂದ ದರ್ಶನ್ ಗೆ ಒಳಿತಾಗಲಿದೆಯೇ? ದರ್ಶನ್ ಗೆ ಈ ಪ್ರಕರಣದಲ್ಲಿ ಜಾಮೀನು ಸಿಗಲಿದೆಯೇ ಕಾದು ನೋಡಬೇಕಿದೆ.

Exit mobile version