ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್ ಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಿವೆ. ದರ್ಶನ್ ಇನ್ನೂ ಕನಿಷ್ಟ ನಾಲ್ಕೈದು ತಿಂಗಳು ಹೊರಗೆ ಬರುವುದಿಲ್ಲ ಎನ್ನಲಾಗುತ್ತಿದೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪತಿಯನ್ನು ಹೊರಗೆ ತರಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಜಕಾರಣಿಗಳ ಭೇಟಿಯಿಂದ ಹಿಡಿದು, ಗಂಡನ ಒಳಿತಿಗಾಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.
ಕಳೆದ ತಿಂಗಳು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮಾಡಿಸಿದ್ದ ವಿಜಯಲಕ್ಷ್ಮಿ ಈಗ ಮತ್ತೊಂದು ಪ್ರಮುಖ ಪೂಜೆಯನ್ನು ಪತಿ ದರ್ಶನ್ ಒಳಿತಿಗಾಗಿ ಮಾಡಿಸಿದ್ದಾರೆ. ಬನಶಂಕರಿ ದೇವಾಲಯದಲ್ಲಿ ದರ್ಶನ್ ಗಾಗಿ ವಿಶೇಷ ಪೂಜೆ ಮಾಡಿಸಿದ್ದಾರೆ. ಸಂಕಷ್ಟ ಬಂದಾಗ ಶಕ್ತಿ ದೇವತೆಯ ಮೊರೆ ಹೋಗುತ್ತಾರೆ. ಹಾಗಾಗಿ ವಿಜಯಲಕ್ಷ್ಮಿ ಅವರು ಇಲ್ಲಿಗೆ ಬಂದಿದ್ದಾರೆ ಎಂದಿದ್ದಾರೆ ದೇವಾಲಯದ ಅರ್ಚಕ.
ನಿನ್ನೆ (ಆಗಸ್ಟ್ 04) ಅಮವಾಸ್ಯೆಯ ವಿಶೇಷ ಸಂದರ್ಭದಲ್ಲಿ ಸಂಜೆ ಬನಶಂಕರಿ ದೇವಾಲಯಕ್ಕೆ ತೆರಳಿದ್ದ ವಿಜಯಲಕ್ಷ್ಮಿ ಅವರು ಪತಿಯ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ನಿನ್ನೆ ಭೀಮನ ಅಮವಾಸ್ಯೆ ಆಗಿರುವ ಕಾರಣ, ಪತಿಯ ಪೂಜೆ ಮಾಡುವುದು ಸಂಪ್ರದಾಯ ಆದರೆ ಪತಿ ಜೈಲಿನಲ್ಲಿರುವ ಕಾರಣ ಶಿವನ ಪೂಜೆಯನ್ನು ವಿಜಯಲಕ್ಷ್ಮಿ ಮಾಡಿದ್ದಾರೆ. ಜೊತೆಗೆ ಬನಶಂಕರಿ ದೇವಾಲಯದಲ್ಲಿ ಸಂಕಲ್ಪವನ್ನು ಸಹ ವಿಜಯಲಕ್ಷ್ಮಿ ಮಾಡಿದ್ದಾರೆ.
ವಿಶೇಷ ಪೂಜೆ
ವಿಜಯಲಕ್ಷ್ಮಿ ಅವರು ಮಾಡಿಸಿರುವ ವಿಶೇಷ ಪೂಜೆಯ ಬಗ್ಗೆ ಮಾತನಾಡಿರುವ ದೇವಾಲಯದ ಅರ್ಚಕರು, ಈ ಹಿಂದಿನಿಂದಲೂ ಸಂಕಷ್ಟಗಳು ಬಂದಾಗ ಅವರು ಶಕ್ತಿ ದೇವತೆಯ ಸನ್ನಿಧಾನಕ್ಕೆ ಮೊದಲಿನಿಂದಲೂ ಬರುತ್ತಾರೆ. ಈ ಹಿಂದೆ ದರ್ಶನ್ ಸಹ ಕೆಲವು ಬಾರಿ ಬಂದಿದ್ದರು ಈಗ ವಿಜಯಲಕ್ಷ್ಮಿ ಬಂದಿದ್ದಾರೆ, ಪತಿಯ ಹೆಸರಲ್ಲಿ ಸಂಕಲ್ಪ ಮಾಡಿದ್ದಾರೆ ಎಂದಿದ್ದಾರೆ.
Darshan: ಜೈಲಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ನಟ ದರ್ಶನ್, ಜೈಲಾಧಿಕಾರಿಗಳಿಗೆ ತಲೆ ನೋವು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ದರ್ಶನ್ ಬಂಧನವಾಗಿದೆ. ದರ್ಶನ್ ಮಾತ್ರವೇ ಅಲ್ಲದೆ ಅವರೊಟ್ಟಿಗೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಮೂರು ಮಂದಿ ಸಾಕ್ಷ್ಯಗಳಾಗಿ ಬದಲಾಗಿದ್ದು, ಆ ಮೂವರನ್ನು ತುಮಕೂರಿನ ಜೈಲಿನಲ್ಲಿ ಇರಿಸಲಾಗಿದೆ. ಸದ್ಯಕ್ಕೆ ದರ್ಶನ್ ಹಾಗೂ ಅವರ ಸಂಗಡಿಗರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಆಗಸ್ಟ್ 18 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.