Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಂಧನವಾಗಿ 3 ತಿಂಗಳಾಗಿದೆ. ಈಗ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ ದರ್ಶನ್. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲು ರೆಡಿಯಾಗಿದ್ದಾರೆ. ಇಂದು ಅಥವಾ ನಾಳೆ ಪವಿತ್ರಾ ಸೇರಿದಂತೆ ಹಲವು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಪ್ರಕರಣದ ಎ2 ಆರೋಪಿ ದರ್ಶನ್ ಮಾತ್ರ ಜಾಮೀನಿಗೆ ಅರ್ಜಿ ಸಲ್ಲಿಸುತ್ತಿಲ್ಲ. ಇದಕ್ಕೆ ಕಾರಣ ಇದೆ.
ನಿನ್ನೆ (ಸೆಪ್ಟೆಂಬರ್ 13) ದರ್ಶನ್ ಭೇಟಿಗೆ ಆಗಮಿಸಿದ್ದ ಅವರ ಪರ ವಕೀಲರು, ಆರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೆರಖಿಸಿರುವ ಮಾಹಿತಿಗೂ ನಿಜವಾಗಿ ನಡೆದ ಘಟನೆಗೂ ಸಾಮ್ಯತೆ ಎಷ್ಟಿದೆ ಎಂಬ ಬಗ್ಗೆ ಹಾಗೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಪಡೆಯಲು ಬಂದಿದ್ದರು. ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ದರ್ಶನ್ ಪರ ವಕೀಲರು, ಆರೋಪ ಪಟ್ಟಿಯನ್ನು ಪರಾಮರ್ಶಿಸುತ್ತಿದ್ದೇವೆ. ದರ್ಶನ್ ಈಗ ಜಾಮೀನಿಗೆ ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ.
ಇದಕ್ಕೆ ಕಾರಣವೂ ಇದೆ. ದರ್ಶನ್ ಪರ ಜಾಮೀನಜ ಅರ್ಜಿ ಸಲ್ಲಿಸಿ ಅದು ರಿಜೆಕ್ಟ್ ಆದರೆ ಮತ್ತೆ ಅರ್ಜಿ ಸಲ್ಲಿಸಲು ಅಥವಾ ಮೇಲ್ಮನವಿ ಹಾಕಲು ಸಮಯ ಬೇಕಾಗುತ್ತದೆ. ಅದರ ಬದಲಿಗೆ ಆರೋಪ ಪಟ್ಟಿಯ ಪೂರ್ಣ ಅಧ್ಯಯನ ನಡೆಸಿ, ಸರಿಯಾದ ಅಂಶಗಳೊಂದಿಗೆ ಅರ್ಜಿ ಹಾಕಿದರೆ ಆಗ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ ಆ ಒಳಗಾಗಿ ಪ್ರಕರಣದ ಇತರೆ ಆರೋಪಿಗಳಲ್ಲಿ ಯಾರಿಗಾದರೂ ಜಾಮೀನು ದೊರೆತರೆ ದರ್ಶನ್ ಗೆ ಜಾಮೀನು ಕೊಡಿಸುವುದು ಸುಲಭವಾಗುತ್ತದೆ ಎಂಬುದು ವಕೀಲರ ಲೆಕ್ಕಾಚಾರ.
Darshan: ದರ್ಶನ್ ಚಿತ್ರಗಳ ಸೋರಿಕೆ ಹಿಂದೆ ಸರ್ಕಾರದ ಕೈವಾಡ?
ದರ್ಶನ್ ಪರವಾಗಿ ಕರ್ನಾಟಕದ ಜನಪ್ರಿಯ ವಕೀಲ ಸಿವಿ ನಾಗೇಶ್ ವಕೀಲಿಕೆ ಮಾಡಲಿದ್ದಾರೆ. ಹಾಗಾಗಿ ಪ್ರಕರಣದಲ್ಲಿ ಅಳೆದು ತೂಗಿ ಹೆಜ್ಜೆಗಳನ್ನು ಇಡುತ್ತಿದ್ದಾರೆ ಸಿವಿ ನಾಗೇಶ್.