Darshan
ದುನಿಯಾ ವಿಜಯ್ ಈಗ ಗೆಲುವಿನ ಅಲೆಯ ಮೇಲೆ ತೇಲುತ್ತಿದ್ದಾರೆ. ಅವರು ನಿರ್ದೇಶಿಸಿ, ನಟಿಸಿರುವ ‘ಭೀಮ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣ ಮಾಡಲಾದ ಈ ಸಿನಿಮಾ ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ 15 ಕೋಟಿಗೂ ಹೆಚ್ಚು ಹಣ ಕಲೆ ಹಾಕಿದೆ. ದುನಿಯಾ ವಿಜಯ್ ಹಾಗೂ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ ಆದರೆ ದರ್ಶನ್ ಮತ್ತು ಅವರ ಅಭಿಮಾನಿಗಳು ಮಾತ್ರ ಬಹಳ ಬೇಸರದಲ್ಲಿದ್ದಾರೆ. ಮಾತ್ರವಲ್ಲ ಕೆಲವು ದರ್ಶನ್ ಅಭಿಮಾನಿಗಳು ದುನಿಯಾ ವಿಜಯ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ದುನಿಯಾ ವಿಜಯ್ ಇತ್ತೀಚೆಗಷ್ಟೆ ಟಿವಿ9 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ನಿರೂಪಕರು, ಕನ್ನಡ ಚಿತ್ರರಂಗದ ನಟರ ಹೆಸರುಗಳನ್ನು ಹೇಳುತ್ತಾ, ಪ್ರತಿ ಒಬ್ಬರ ಹೆಸರು ಹೇಳಿದಾಗಲೂ ನಿಮಗೆ ಏನು ಅನ್ನಿಸುತ್ತದೆಯೋ ಅದನ್ನು ಹೇಳಬೇಕು ಎಂದರು. ಗಣೇಶ್, ಸುದೀಪ್, ಶಿವಣ್ಣ ಇನ್ನಿತರತ ಬಗ್ಗೆ ಮಾತನಾಡಿದ ಬಳಿಕ ಅಪ್ಪು ಹೆಸರು ಹೇಳಿದರು ಸಂದರ್ಶಕ ಆಗ ದುನಿಯಾ ವಿಜಿ, ಸುದೀರ್ಘವಾಗಿ ಮಾತನಾಡುತ್ತಾ ಪುನೀತ್ ಅವರ ಗುಣಗಾನ ಮಾಡಿದರು. ಬಳಿಕ ಸಂದರ್ಶಕ ದರ್ಶನ್ ಹೆಸರು ಹೇಳಿದರು. ಆಗ ದುನಿಯಾ ವಿಜಯ್ ‘ಒಳ್ಳೆದಾಗ್ಲಿ’ ಎಂದಷ್ಟೆ ಹೇಳಿ ಸುಮ್ಮನಾದರು. ಅವರು ‘ಒಳ್ಳೆದಾಗ್ಲಿ’ ಎಂದ ರೀತಿ ಸಹ ದರ್ಶನ್ ಗೂ ನನಗೂ ಸಂಬಂಧ ಇಲ್ಲ ಎನ್ನುವಂತಿತ್ತು.
ದುನಿಯಾ ವಿಜಯ್, ತಮ್ಮ ‘ಬಾಸ್’ ದರ್ಶನ್ ಬಗ್ಗೆ ಹೀಗೆ ಕ್ಷುಲ್ಲಕವಾಗಿ ಉತ್ತರ ನೀಡಿರುವುದು ದರ್ಶನ್ ಅಭಿಮಾನಿಗಳಿಗೆ ಬೇಸರ ತಂದಿದೆ. ಅಸಲಿಗೆ ದುನಿಯಾ ವಿಜಯ್, ದರ್ಶನ್ ಬಗ್ಗೆ ತಾತ್ಸಾರವಾಗಿ ಮಾತನಾಡಲು ಕಾರಣವೂ ಇದೆ. ಹಿಂದೊಮ್ಮೆ ಈಗ ದರ್ಶನ್ ಗೆ ಬಂದಿರುವ ಆದರೆ ಅದಕ್ಕಿಂತಲೂ ಕಡಿಮೆ ಗುರುತ್ವದ ಸಮಸ್ಯೆಯಲ್ಲಿ ದುನಿತಾ ವಿಜಿ ಸಿಲುಕಿಕೊಂಡಿದ್ದಾಗ ದರ್ಶನ್ ಯಾವ ರೀತಿ ಮಾಧ್ಯಮಗಳ ಮುಂದೆ ಮಾತನಾಡಿದ್ದರೋ ಅದೇ ರೀತಿಯಲ್ಲಿ ಈಗ ದುನಿಯಾ ವಿಜಯ್ ಮಾತನಾಡಿದ್ದಾರೆ.
ದುನಿಯಾ ವಿಜಯ್ ವಿವಾದವೊಂದರಲ್ಲಿ ಸಿಲುಕಿಕೊಂಡಾಗ, ಕಾರ್ಯಕ್ರಮವೊಂದರಲ್ಲಿ ದರ್ಶನ್ ಗೆ ಇದೇ ಪ್ರಶ್ನೆ ಕೇಳಲಾಗುತ್ತದೆ. ದುನಿಯಾ ವಿಜಯ್ ಬೆಳವಣಿಗೆ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಮಾಧ್ಯಮದವರ ಮೇಲೆ ಸಿಟ್ಟಾದ ದರ್ಶನ್, ಏನು ವಿಷಯ ಇದೆಯೋ ಅದನ್ನು ಕೇಳಿ ಬೇಡದೆ ಇರುವ ವಿಷಯ ಕೇಳಬೇಡಿ’ ಎಂದಿದ್ದರು. ಆ ಮೂಲಕ ದುನಿಯಾ ವಿಜಯ್ ಅವರದ್ದು ಬೇಡದ ವಿಷಯ ಎಂಬಂತೆ ತಾತ್ಸಾರ ಮಾಡಿದ್ದರು.
Shah Rukh Khan: ತಮ್ಮದೇ ಹಳೆ ಸಿನಿಮಾಗಳ ಖರೀದಿಸುತ್ತಿರುವ ಶಾರುಖ್ ಖಾನ್: ಕಾರಣ?
ಅಂದು ದರ್ಶನ್ ಇದ್ದ ಸ್ಥಾನದಲ್ಲಿ ಈಗ ದುನಿಯಾ ವಿಜಯ್ ಇದ್ದಾರೆ. ಹಾಗಾಗಿ ಅಂದು ತಮ್ಮ ಬಗ್ಗೆ ತಾತ್ಸಾರವಾಗಿ ಮಾತನಾಡಿದ್ದ ದರ್ಶನ್ ಬಗ್ಗೆ ಈಗ ದುನಿಯಾ ವಿಜಿ ತಾತ್ಸಾರವಾಗಿ ಮಾತನಾಡಿದ್ದಾರೆ. ಸಮಯ ಮತ್ತೆ ಬದಲಾಗಿದೆ. ಈಗ ದರ್ಶನ್ ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ದುನಿಯಾ ವಿಜಯ್ ಸಿನಿಮಾ ಗೆದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ.