Site icon Samastha News

DK Shivakumar: ಸಿಎಂ ಆಗೋದು ಹೇಗೆ? ಡಿಕೆ ಶಿವಕುಮಾರ್ ಉತ್ತರ ಹೀಗಿತ್ತು

DK Shivakumar

DK Shivakumar

ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಸಿಎಂ ರೇಸಿನಲ್ಲಿದ್ದಾರೆ. ಮುಡಾ ಹಗರಣದ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ‌ ಅಲ್ಲಲ್ಲಿ ಸಣ್ಣಗೆ ಸಿಎಂ ಬದಲಾವಣೆ ಮಾತೂ ಸಹ ಕೇಳಿಬರುತ್ತಿದೆ. ಸಿಎಂ ಬದಲಾವಣೆ ಮಾತು ಬಂದಾಗೆಲ್ಲ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಲೇ ಇದೆ. ಇದೀಗ ಸ್ವತಃ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದರೆ ಏನು ಮಾಡಬೇಕು ಎಂದು ಹೇಳಿದ್ದಾರೆ.

ಮಕ್ಕಳ‌ ದಿನಾಚರಣೆ ಪ್ರಯುಕ್ತ ವಿಧಾನಸೌಧದಲ್ಲಿ ವಿದ್ಯಾರ್ಥಿಗಳೊಡನೆ ವಿಶೇಷ ಸಂವಾದವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು. ಈ ವೇಳೆ ವಿದ್ಯಾ ಸಾಗರ ಶಾಲೆಯ ಏಳನೇ ತರಗತಿ‌ ವಿದ್ಯಾರ್ಥಿಯೊಬ್ಬ ನಾನು ಸಿಎಂ ಆಗಬೇಕು ಎಂದುಕೊಂಡಿದ್ದೇನೆ ಅದಕ್ಕಾಗಿ ನಾನು ಏನು ಮಾಡಬೇಕು ಎಂದು ಪ್ರಶ್ನೆ ಕೇಳಿದ್ದಾನೆ.

ಅದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊ, ಆರ್ಥಿಕವಾಗಿ ಸಧೃಡನಾಗು, ನಾಯಕತ್ವ ಗುಣ ಬೆಳೆಸಿಕೊ, ಧೈರ್ಯವಾಗಿ ಮಾತನಾಡುವುದು ಕಲಿ ಆಗ ಸಿಎಂ ಆಗಬಲ್ಲೆ’ ಎಂದಿದ್ದಾರೆ.

ವಿದ್ಯಾರ್ಥಿಗಳು ಹಲವು ಪ್ರಶ್ನೆಗಳನ್ನು ಡಿಸಿಎಂ ಅವರಿಗೆ ಕೇಳಿದ್ದಾರೆ. ಪತ್ರಕರ್ತರು ಕೇಳಲು ಹಿಂಜರಿಯುವ ಕೆಲವು ಕಠಿಣವಾದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಡಿಸಿಎಂ ಅವರನ್ನು ಕೇಳಿದ್ದಾರೆ. ವಿದ್ಯಾರ್ಥಿನಿಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಇದೆ, ಇನ್ನೂ ಕೆಲವು‌ ಸವಲತ್ತುಗಳು ಯುವತಿಯರಿಗೆ ಮಾತ್ರವೇ ಇದೆ ಆದರೆ ನಮಗೂ ಅಂಥಹಾ ಸವಲತ್ತು ಕೊಡಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಕೆಲವು ಸವಲತ್ತುಗಳನ್ನು ನೀಡುವ ಆಲೋಚನೆ ಸರ್ಕಾರಕ್ಕೆ ಇದೆ ಎಂದಿದ್ದಾರೆ.

Bandh: ನವೆಂಬರ್ 20ಕ್ಕೆ ರಾಜ್ಯದಲ್ಲಿ ಮದ್ಯ ಮಾರಾಟ ಇಲ್ಲ, ಕಾರಣ ಏನು?

ಒಬ್ಬ ವಿದ್ಯಾರ್ಥಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕಳಪೆ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಈಗಾಗಲೇ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚುಗೊಳಿಸಲು ಕೆಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಗುಣಮಟ್ಟದ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಲಾಗಿದೆ‌. ಅವರಿಗೆ ಸತತ ಟ್ರೈನಿಂಗ್ ಸಹ ನೀಡಲಾಗಿದೆ ಎಂದಿದ್ದಾರೆ.

Exit mobile version