Site icon Samastha News

Blue Bottle: ಮನೆ ಮುಂದೆ ನೀಲಿ ಬಾಟಲಿ ನೇತು ಹಾಕುತ್ತಿದ್ದಾರೆ ದೆಹಲಿ ಜನ, ಕಾರಣವೇನು?

Blue Bottle

Blue Bottle

ದೆಹಲಿ ಅದರಲ್ಲೂ ಪೂರ್ವ ದೆಹಲಿಯಲ್ಲಿ ಬಹುತೇಕ ಪ್ರತಿ ಮನೆಗಳ ಮುಂದೆಯೂ ನೀಲಿ ಬಣ್ಣದ ಬಾಟಲಿ ಅಥವಾ ನೀಲಿ ಬಣ್ಣದ ನೀರು ತುಂಬಿರುವ ಪ್ಲಾಸ್ಟಿಕ್ ಬಾಟಲಿಗಳನ್ನು ನೇತು ಹಾಕಲಾಗಿದೆ. ಕೆಲವರು ಮನೆಯ ಮುಂದಿನ ಗೇಟಿಗೆ ನೀಲಿ ಬಾಟಲಿಗಳನ್ನು ಕಟ್ಟಿದ್ದಾರೆ. ಒಬ್ಬರು ಕಟ್ಟಿದ್ದು ನೋಡಿ ಇನ್ನೊಬ್ಬರು ಹೀಗೆ ಬಹುತೇಕ ಪ್ರತಿ ಮನೆಯ ಮುಂದೆಯೂ ಈಗ ನೀಲಿ ಬಾಟಲಿ ನೇತು ಹಾಕಲಾಗಿದೆ. ಇದಕ್ಕೆ ಕಾರಣವೇನು? ಮುಂದೆ ಓದಿ…

ಪೂರ್ವ ದೆಹಲಿ ಮಧ್ಯಮ ವರ್ಗದ, ಬಡ ಮಧ್ಯಮ ವರ್ಗದ ಜನ ಹೆಚ್ಚಾಗಿರುವ ಪ್ರದೇಶ. ಶ್ರೀಮಂತ ಕುಟುಂಬಗಳೂ ಇಲ್ಲು ಇವೆಯಾದರೂ ದಕ್ಷಿಣ ದೆಹಲಿಯಷ್ಟು ಅಲ್ಲ. ಪೂರ್ವ ದೆಹಲಿಯಲ್ಲಿ ಸ್ವಚ್ಛತೆ ತುಸು ಕಡಿಮೆ ಅದರಲ್ಲೂ ಇಲ್ಲಿ ನಾಯಿಗಳ ಹಾವಳಿ ತುಸು ಹೆಚ್ಚು‌. ನೀಲಿ ಬಣ್ಣದ ಬಾಟಲಿಗಳನ್ನು ಮನೆಯ ಮುಂದೆ ಕಟ್ಟುವುದರಿಂದ ನಾಯಿಗಳು ಬರುವುದಿಲ್ಲ ಎಂಬುದು ಜನರ ನಂಬಿಕೆ ಹಾಗಾಗಿ ದೆಹಲಿಯ ಬಹುತೇಕ ಮಂದಿ ಮನೆಯ ಮುಂದೆ ನೀಲಿ ಬಣ್ಣದ ನೀರು ತುಂಬಿದ ಬಾಟಲಿಗಳನ್ನು ಕಟ್ಟುತ್ತಿದ್ದಾರೆ.

ಜನರ ನಂಬಿಕೆಯೇನೆಂದರೆ, ನಾಯಿಗಳಿಗೆ ನೀಲಿ ಬಣ್ಣ ಉಳಿದ ಬಣ್ಣಗಳಿಗಿಂತಲೂ ಗಾಢವಾಗಿ ಕಾಣುತ್ತದೆ. ಇತರೆ ಬಣ್ಣಗಳ ನಡುವೆ ನೀಲಿ‌ ಎದ್ದು ಕಾಣುವ ಕಾರಣ ಅದನ್ನು ಅಪಾಯವೆಂದು ಪರಿಗಣಿಸುವ ನಾಯಿಗಳು ಅಲ್ಲಿಂದ ದೂರ ಓಡುತ್ತವೆ. ಹಾಗಾಗಿ ಜನ ಮನೆಯ ಮುಂದೆ ಹೀಗೆ ನೀಲಿ ಬಾಟಲಿಗಳನ್ನು ಕಟ್ಟುತ್ತಿದ್ದಾರೆ. ಆದರೆ ವಿಜ್ಞಾನ ಈ ಬಗ್ಗೆ ಬೇರೆಯದನ್ನೇ ಹೇಳುತ್ತದೆ‌.

Success Story: ಪೇಪರ್ ಹಾಕುತ್ತಿದ್ದ ಈ ವ್ಯಕ್ತಿ ಈಗ ದುಬೈನ ನಂಬರ್ 1 ಶ್ರೀಮಂತರ ಭಾರತೀಯ

ವಿಜ್ಞಾನಿಗಳು, ಪ್ರಾಣಿ ತಜ್ಞರ ಪ್ರಕಾರ ನಾಯಿಗಳಿಗೆ ಯಾವ ಬಣ್ಣಗಳೂ ಸಹ ಕಾಣುವುದಿಲ್ಲ. ಅವಕ್ಕೆ ಬಣ್ಣಗಳನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ನೀಲಿ ಬಣ್ಣವಾಗಲಿ ಕೆಂಪು ಬಣ್ಣವಾಗಲಿ ಅವು ವ್ಯತ್ಯಾಸ ಗುರುತಿಸಲಾರವು ಹಾಗಾಗಿ ನೀಲಿ ಬಾಟಲಿ ಕಟ್ಟುವುದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುತ್ತಾರೆ ತಜ್ಞರು‌. ಆದರೆ ಜನ ಇದನ್ನು ನಂಬಿದ್ದಾಗಿದೆ. ಹಾಗಾಗಿ ಎಲ್ಲರೂ ಒಬ್ಬರನ್ನು ನೋಡಿ ಇನ್ನೊಬ್ಬರು ನೀಲಿ ಬಾಟಲಿಗಳನ್ನು ಮನೆಯ ಮುಂದೆ ಕಟ್ಟುತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಎಲ್ಲ ಮನೆ, ಕಿಟಕಿಗಳ ಮೇಲೆ ‘ನಾಳೆ ಬಾ’ ಎಂದು ಬರೆಯಲಾಗಿತ್ತು ನೆನಪಿದೆಯೇ, ಇದೂ ಸಹ ಹಾಗೆ ಆಗಿದೆ.

Exit mobile version