Dhruva Sarja: ಮಾರ್ಟಿನ್’ ತಂಡದಲ್ಲಿ ಮನಸ್ಥಾಪ? ಸ್ಪಷ್ಟನೆ ಕೊಟ್ಟ ಚಿತ್ರತಂಡ

0
207
Dhruva Sarja

Dhruva Sarja

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಶುರುವಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಯ್ತು ಆದರೆ ಈ ವರೆಗೆ ಬಿಡುಗಡೆ ಆಗಿಲ್ಲ. ಸಿನಿಮಾದ ಬಗ್ಗೆ ಇತ್ತೀಚೆಗೆ ಸುದ್ದಿಯೂ ಆಗಿಲ್ಲ. ಆದರೆ ಇದೀಗ ‘ಮಾರ್ಟಿನ್’ ಸಿನಿಮಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಚಿತ್ರತಂಡವೂ ಮಾತನಾಡಿದೆ.

ಇತ್ತೀಚೆಗೆ ‘ಮಾರ್ಟಿನ್’ ಚಿತ್ರತಂಡ ಫಿಲಂ‌ಚೇಂಬರ್ ಗೆ ದೂರೊಂದನ್ನು ನೀಡಿತ್ತು. ಅದರ ಬೆನ್ನಲ್ಲೆ ‘ಮಾರ್ಟಿನ್’ ಸಿನಿಮಾದ ನಾಯಕ ಧ್ರುವ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಪರಸ್ಪರ ಕಿತ್ತಾಡಿಕೊಂಡಿದ್ದಾರೆ ಹಾಗಾಗಿಯೇ ಸಿನಿಮಾ ತಡವಾಗಿದೆ. ಈಗ ವಿವಾ ಫಿಲಂ ಚೇಂಬರ್ ಮೆಟ್ಟಿಲೇರಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಸ್ಷಷ್ಟನೆ ನೀಡಿರುವ ನಿರ್ದೇಶಕ ಎಪಿ ಅರ್ಜುನ್, ಧ್ರುವ ಸರ್ಜಾ ಹಾಗೂ ಉದಯ್ ಮೆಹ್ತಾ ನಡುವೆ ಸಂಭಾವನೆ ವಿಷಯಕ್ಕೆ ಕಿರಿಕ್ ಆಗಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. ನಮ್ಮ ಸಿನಿಮಾದ ಸಿಜಿ ತಡವಾಗಿದೆ. ಸಂಸ್ಥೆಯೊಂದು ಸಿಜಿ‌ವಿಷಯದಲ್ಲಿ ನಮಗೆ ಮೋಸ ಮಾಡಿದೆ ಹಾಗಾಗಿ‌ ನಾವು ಇಒ ವಿಷಯವಾಗಿ ಫಿಲಂ ಚೇಂಬರ್ ಗೆ ದೂರು ಕೊಟ್ಟಿದ್ದೇವೆ. ನಾವು ಧ್ರುವ ವಿರುದ್ಧ ದೂರು ನೀಡಿಲ್ಲ ಎಂದಿದ್ದಾರೆ.

ಅವನಿಗೆ ನಾನು ಹಾಗೆ ಮಾಡಬಾರದಿತ್ತು: ದ್ವಾರಕೀಶ್ ಪಶ್ಚಾತ್ತಾಪದ ಮಾತು

‘ನಾನು, ನಿರ್ಮಾಪಕರು ಚನ್ನಾಗಿದ್ದೀವಿ ಆರಾಮಾಗಿದ್ದೀವಿ , ನಮ್ಮ‌ಮಧ್ಯೆ ಯಾವುದೇ ಮನಸ್ತಾಪವಿಲ್ಲ ಇದೆಲ್ಲ ರೂಮರ್ಸ್ ದಯವಿಟ್ಟು ಕಿವಿಕೊಡಬೇಡಿ, ಸಿನಿಮಾ ಕೆಲಸದಲ್ಲಿ ಬ್ಯೂಸಿ ಇದ್ದೀವಿ ಈಗ ತಾನೇ ಡಬ್ಬಿಂಗ್ ಮುಗಿಸಿಕೊಂಡು ಬಂದಿದ್ದೀವಿ ಎಂದು ಗಾಸಿಪ್ ಗೆ ತೆರೆ ಏಳೆದಿದೆ ಮಾರ್ಟಿನ್ ಸಿನಿಮಾ ತಂಡ.

ಮಾರ್ಟಿನ್ ಸಿನಿಮಾದ ಚಿತ್ರೀಕರಣ ಆರಂಭಿಸಿ ಕೆಲವು ವರ್ಷಗಳೇ ಕಳೆದಿವೆ. ಸಿನಿಮಾದ ಟೀಸರ್ ಬಿಡುಗಡೆ ಆಗಿ ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಕೆಲವರ ಪ್ರಕಾರ ಸಿನಿಮಾದ ಚಿತ್ರೀಕರಣ ಪೂರ್ಣ ಮುಗಿದಿದೆ ಆದರೆ ಚಿತ್ರತಂಡದ ಪ್ರಮುಖರ ನಡುವೆ ಇರುವ ಮನಸ್ಥಾಪದಿಂದಾಗಿ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

LEAVE A REPLY

Please enter your comment!
Please enter your name here