Do Blind Dream: ಕಣ್ಣು ಕಾಣದ ಅಂಧರಿಗೆ ಕನಸು ಬೀಳುತ್ತದೆಯೆ? ಆ ಕನಸು ಬಣ್ಣದಲ್ಲಿರುತ್ತದೆಯಾ ಅಥವಾ ಕಪ್ಪು-ಬಿಳುಪು?

0
188
Do Blind Dream

Do Blind Dream

ಮಲಗಿದಾಗ ಕನಸು ಬೀಳುವುದು ತೀರ ಸಾಮಾನ್ಯ ಪ್ರಕ್ರಿಯೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ನೀವು ದಿನ ನಿತ್ಯದ ಜೀವನದಲ್ಲಿ ಏನನ್ನು ನೋಡುತ್ತೀರೋ ಅಥವಾ ಕೇಳುತ್ತೀರೊ ಅದರ ರೂಪವೇ ಕನಸಿನಲ್ಲಿ ಬರುತ್ತದೆ. ಅಂದರೆ ಆ ವ್ಯಕ್ತಿಯ ಗಮನಿಕೆ, ನೋಡುವಿಕೆ ಮತ್ತು ಊಹಿಸುವಿಕೆಯ ಮಿತಿಗಳ ವಾಪ್ತಿಯಲ್ಲಿಯೇ ಕನಸು ಬೀಳುತ್ತದೆ. ಹೀಗಿದ್ದಾಗ ಕಣ್ಣು ಕಾಣದ ವ್ಯಕ್ತಿ ತನ್ನ ಸುತ್ತಲಿನ ಏನನ್ನೂ ನೋಡಿರುವುದೇ ಇಲ್ಲ. ಹಾಗಿದ್ದ ಮೇಲೆ ಆತನಿಗೆ ಕನಸು ಬೀಳುತ್ತದೆಯೇ? ಕನಸು, ವ್ಯಕ್ತಿ ನೋಡಿದ ದೃಶ್ಯಗಳ ಮರುಸೃಷ್ಟಿಯೇ ಆಗಿರುವಾಗ ಏನನ್ನೂ ನೋಡದ ವ್ಯಕ್ತಿಯ ಕನಸಲ್ಲಿ ಏನು ಬರುತ್ತದೆ? ತಿಳಿಯೋಣ ಬನ್ನಿ.

ಅಂಧರಿಗೂ ಮಲಗಿರುವಾಗ ಕನಸು ಬೀಳುತ್ತದೆ. ಆದರೆ ಕಣ್ಣು ಹೊಂದಿರುವವರ ಕಸಿಗೂ, ಕಣ್ಣು ಕಾಣದವರ ಕನಸಿಗೂ ಬಹಳ ಅಂತರ ಇರುತ್ತದೆ. ಯಾವುದೇ ವ್ಯಕ್ತಿ ನೋಡಿದ ಅಥವ ದೃಶ್ಯ ರೂಪಿದಲ್ಲಿ ಕಲ್ಪಿಸಿಕೊಂಡ ದೃಶ್ಯಗಳು ಮೆದುಳಿನಲ್ಲಿ ಶೇಖರಣೆಗೊಂಡು ಅವೇ ಚಿತ್ರ-ವಿಚಿತ್ರ ಕ್ರಮದಲ್ಲಿ ಒಮ್ಮೊಮ್ಮೆ ಅಕಾರದಲ್ಲಿ ಕನಸಿನಲ್ಲಿ ಬರುತ್ತದೆ. ಆದರೆ ಅಂಧರು ಏನನ್ನೂ ನೋಡೇ ಇರುವುದಿಲ್ಲವಾದ್ದರಿಂದ ಅವರ ಕನಸಿನಲ್ಲಿ ದೃಶ್ಯಗಳು ಇರುವುದಿಲ್ಲ ಅಥವಾ ಅತ್ಯಂತ ಕಡಿಮೆ ಇರುತ್ತವೆ. ಅವರ ಕನಸುಗಳಲ್ಲಿ, ಮಾತು, ವಾಸನೆ, ಸ್ಪರ್ಷದ ಅನುಭವ ಹೆಚ್ಚಾಗಿ ಇರುತ್ತದೆ.

https://samasthanews.com/these-are-the-few-daily-use-things-which-made-using-petroleum/

ಯಾವಾದದರೂ ವಿಷಯ ಕೇಳಿದಾಗ ಅಂಧ ವ್ಯಕ್ತಿ ಆ ಘಟನೆ , ಅಥವಾ ವಸ್ತುವನ್ನು ಹೇಗೆ ಊಹಿಸಿಕೊಳ್ಳುತ್ತಾನೋ ಆ ದೃಶ್ಯವು ಮೆದುಳಲ್ಲಿ ದಾಖಲಾಗಿ ನಂತರ ಅದೇ ಕನಸಿನ ರೂಪದಲ್ಲಿ ಬರುವ ಸಾಧ್ಯತೆಯೂ ಇದೆ. ಉದಾಹರಣೆಗೆ, ಕಣ್ಣಿರುವವನು ಆನೆಯನ್ನು ನೋಡಿದ್ದಾನಾದ್ದರಿಂದ ಕನಸಿನಲ್ಲಿ ಆಬೆ ಬಂದಾಗ ಅದರ ಮೂಲ ಆಕಾರದಲ್ಲಿಯೇ ಬರುತ್ತದೆ. ಅಂಧ ಆನೆಯ ಬಗ್ಗೆ ಕೇಳಿಸಿಕೊಂಡು ಅದನ್ನು ಮನಸ್ಸಿನಲ್ಲಿ ಹೇಗೆ ಕಲ್ಪಿಸಿಕೊಂಡಿದ್ದಾನೋ ಹಾಗೆಯೇ ಆನೆ ಅಂಧನ ಕನಸಿನಲ್ಲಿ ಬರುತ್ತದೆ.

ಒಂದೊಮ್ಮೆ ಹುಟ್ಟುವಾಗ ಕಣ್ಣಿದ್ದು ಆ ನಂತರ ಕಣ್ಣು ಕಳೆದುಕೊಂಡಿದ್ದರೆ, ಆ ವ್ಯಕ್ತಿ ಕಣ್ಣು ಕಳೆದುಕೊಳ್ಳುವ ಮಂಚೆ ನೋಡಿದ ದೃಶ್ಯಗಳ ಆಧಾರದಲ್ಲಿಯೇ ಆ ವ್ಯಕ್ತಿಗೆ ಕನಸು ಬರುತ್ತದೆ‌. ಆದರೆ ಅಂಥಹಾ ವ್ಯಕ್ತಿಯ ಕನಸಿನಲ್ಲಿ ಬರುವ ದೃಶ್ಯ, ವ್ಯಕ್ತಿ, ವಸ್ತುಗಳಲ್ಲಿ ಬಹಳ ಭಿನ್ನತೆ ಇರುವುದಿಲ್ಲ ಎನ್ನಬಹುದು. ಕಣ್ಣು ಕಾಣದಾದ ಮೇಲೆ ಈ ಹಿಂದೆ ಕಣ್ಣಿದ್ದಾಗ ಕಂಡ ವಸ್ತುಗಳ, ಪರಿಸರದ ಆಧಾರದ ಮೇಲೆಯೇ ಆತ ಪ್ರತಿ ಘಟನೆಯನ್ನೂ ಊಹಿಸಿಕೊಳ್ಳುತ್ತಾನಾದ್ದರಿಂದ ಆ ಊಹೆಗೆ ಅನುಗುಣವಾಗಿ ಆತನಿಗೆ ಕನಸುಗಳು ಬರುತ್ತವೆ.

LEAVE A REPLY

Please enter your comment!
Please enter your name here