Site icon Samastha News

Samantha: ಸಮಂತಾ ಧರಿಸಿರುವ ಈ ವಾಚಿನ ಬೆಲೆಗೆ ಒಂದು ಮನೆ ಕಟ್ಟಿಸಬಹುದು

Samantha

Samantha

ಸಮಂತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ತೆಲುಗು, ತಮಿಳು ಮಾತ್ರವಲ್ಲದೆ ಬಾಲಿವುಡ್, ಹಾಲಿವುಡ್’ನಿಂದಲೂ ಆಫರ್ ಪಡೆಯುತ್ತಿದ್ದಾರೆ. ನಾಗ ಚೈತನ್ಯ ಜೊತೆ ವಿಚ್ಚೇದನ ಪಡೆದ ಬಳಿಕವಂತೂ ಸಮಂತಾಗೆ ಡಿಮ್ಯಾಂಡ್ ಹೆಚ್ಚಾಗಿದೆ‌. ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೆ ಸಂಭಾವನೆ ಸಹ ಏರಿಕೆ ಆಗಿದ್ದು, ಈಗ ಪ್ರತಿ ಸಿನಿಮಾಕ್ಕೆ ಸುಮಾರು ಹತ್ತು ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರಂತೆ ಸಮಂತಾ. ಹಣ ಹೆಚ್ಚಾದಂತೆ ಸಮಂತಾರ ಬದುಕುವ ಶೈಲಿಯೂ ಬದಲಾವಣೆಯಾಗಿದೆ.

ಸಮಂತಾ ಈಗ ದುಬಾರಿ ಕಾರುಗಳು, ದುಬಾರಿ ಆಭರಣ, ವಿದೇಶಿ ಬ್ರ್ಯಾಂಡ್’ನ ಲಕ್ಷಾಂತರ ರೂಪಾಯಿ ಬೆಲೆಯ ಡಿನೈಸರ್ ಉಡುಗೆಗಳನ್ನು ಮಾತ್ರವೇ ಧರಿಸುತ್ತಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಮಂತಾ ಕೈಗೆ ಲಕ್ಷಾಂತರ ರೂಪಾಯಿ ಬೆಲೆಯ ಗಡಿಯಾರವನ್ನು ಧರಿಸಿದ್ದರು. ಆ ಗಡಿಯಾರದ ಬೆಲೆಗೆ ಸಾಮಾನ್ಯ ವ್ಯಕ್ತಿ ಒಂದು ಮನೆ ಕಟ್ಟಿಸಬಹುದು.

ಈ ಚಿತ್ರದಲ್ಲಿ ಸಮಂತಾ ಧರಿಸಿರುವುದು ಬಲ್ಗೇರಿಯಾ ಬ್ರ್ಯಾಂಡ್’ನ ವಾಚು, ಸಮಂತಾ ಮಣಿಕಟ್ಟಿಗೆ ಸುತ್ತಿಕೊಂಡಿರುವ ಈ ವಾಚಿನಲ್ಲಿ ಚಿನ್ನ ಹಾಗೂ ತುಸು ವಜ್ರವನ್ನೂ ಬಳಕೆ ಮಾಡಲಾಗಿದೆ. ಅಂದಹಾಗೆ ಈ ವಾಚಿನ ಬೆಲೆ 45.47 ಲಕ್ಷ ರೂಪಾಯಿಗಳು. ಈ ಬೆಲೆಗೆ ಮೂರು ಬೆಡ್ ರೂಂನ ಮನೆಯನ್ನು ಸುಲಭವಾಗಿ ಕಟ್ಟಿಬಿಡಬಹುದು.

ಅಂದಹಾಗೆ ಸಮಂತಾ ಬಳಿ ಇಂಥಹಾ ದುಬಾರಿ ವಾಚುಗಳ ಕಲೆಕ್ಷನ್ ಇದೆ‌. ಇಂಥಹಾ ದುಬಾರಿಯಾದ ಐದಾರು ವಾಚು ಸಮಂತಾ ಹೊಂದಿದ್ದಾರೆ. ಮಾತ್ರವಲ್ಲದೆ ಬಲ್ಗೇರಿಯಾ ಬ್ರ್ಯಾಂಡ್’ನ ಕೋಟ್ಯಂತರ ಬೆಲೆಯ ನೆಕ್’ಲೆಸ್ ಅನ್ನೂ ಸಹ ಸಮಂತಾ ಹೊಂದಿದ್ದಾರೆ. ಇದರ ಜೊತೆಗೆ ಹಲವು ಐಶಾರಾಮಿಗಳು ಸಹ ಸಮಂತಾ ಬಳಿ ಇದೆ. ಸಮಂತಾರ ಒಟ್ಟು ಆಸ್ತಿಯ ಬೆಲೆ ಸುಮಾರು  200 ಕೋಟಿಗೂ ಹೆಚ್ಚಿದೆ.

Deepavali festival: ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ ಈ ಸ್ಟಾರ್ ನಟ-ನಟಿಯರು ಕಾರಣ ಏನು ಗೊತ್ತೆ?

ಅಂದಹಾಗೆ ಸಮಂತಾ ನಟಿಸಿರುವ ‘ಸಿಟಾಡೆಲ್’ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೀಗ ಮತ್ತೊಂದು ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ನಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ. ಬಾಲಿವುಡ್’ನ ಬಡಾ ಹೀರೋ ಜೊತೆ ಸಿನಿಮಾದಲ್ಲಿಯೂ ಸಮಂತಾ ನಟಿಸಲಿದ್ದಾರೆ. ಒಂದು ಹಾಲಿವುಡ್ ಪ್ರಾಜೆಕ್ಟ್ ಅನ್ನು ಸಹ ಸಮಂತಾ ಒಪ್ಪಿಕೊಂಡಿದ್ದಾರೆ.

Exit mobile version