Site icon Samastha News

DSP Santosh Patel: 14 ವರ್ಷದ ಬಳಿಕ ಒಂದಾದ ಖಾನ್ ಮತ್ತು ಪಟೇಲ್, ಇದು ಅಪರೂಪದ ಗೆಳೆತನ

Salman Khan

DSP Santosh Patel

ಸುಮಾರು 35 ವರ್ಷದ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದ ಅವನ ತಳ್ಳುಗಾಡಿಯ ಎದುರು ಪೊಲೀಸ್ ಜೀಪ್ ಬಂದು ನಿಂತಿತು, ಪೊಲೀಸ್ ವಾಹನ ಕಂಡ ತರಕಾರಿ ವ್ಯಾಪಾರಿ ಗಾಬರಿಯಾದ, ತನಗೆ ಏನೋ ಕಾದಿದೆ ಎಂದುಕೊಂಡ, ಪೊಲೀಸ್ ಜೀಪಿನಿಂದ ಪೊಲೀಸ್ ಅಧಿಕಾರಿಯೊಬ್ಬರು ಕೆಳಗೆ ಇಳಿದವನೆ, ತರಕಾರಿ ವ್ಯಾಪಾರಿ ಬಳಿ ಬಂದು ಸೆಲ್ಯೂಟ್ ಹೊಡೆದ. ಕೂಡಲೇ ಏನೋ ನೆನಪು ಮಾಡಿಕೊಂಡ ತರಕಾರಿಯವ ಆ ಪೊಲೀಸ್ ಅಧಿಕಾರಿಯನ್ನು ಬಿಗಿದು ತಬ್ಬಿಕೊಂಡ. 14 ವರ್ಷದ ಹಳೆಯ ಗೆಳೆತನವನ್ನು ಇಬ್ಬರೂ ಮರೆತಿರಲಿಲ್ಲ.

ಈ ಸುಂದರ ಘಟನೆ ನಡೆದಿರುವುದು ಮಧ್ಯ ಪ್ರದೇಶದ ಭೋಪಾಲ್’ನಲ್ಲಿ. ತರಕಾರಿ ಮಾರುವ ಸಲ್ಮಾನ್ ಖಾನ್ ಹಾಗೂ ಮಧ್ಯ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಡಿಎಸ್’ಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ್ ಪಟೇಲ್ ಬರೋಬ್ಬರಿ 14 ವರ್ಷಗಳ‌ ನಂತರ ಮರಳಿ ಪರಸ್ಪರ ಭೇಟಿಯಾದರು. ಈ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಸತೋಷ್ ಪಟೇಲ್ ಭೂಪಾಲ್’ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರಂತೆ. ಅವರ ಕುಟುಂಬದಲ್ಲಿ ಮೊದಲ ಬಾರಿಗೆ ಪದವಿ ಓದಲು ಊರು ಬಿಟ್ಟು ಬಂದಿದ್ದರಂತೆ ಪಟೇಲ್, ಆದರೆ ಅವರ ಬಳಿ ಹಣ ಇರಲಿಲ್ಲ. ಎಷ್ಟೋ ಬಾರಿ ಊಟಕ್ಕೂ ಹಣ ಇರುತ್ತಿರಲಿಲ್ಲ. ಸಂತೋಷ್ ವಾಸವಿದ್ದ ಏರಿಯಾದಲ್ಲಿ ತರಕಾರಿ ಮಾರುತ್ತಿದ್ದ ಸಲ್ಮಾನ್ ಖಾನ್ ಎಷ್ಟೋ ಬಾರಿ ಉಚಿತವಾಗಿ ಸಂತೋಷ್’ಗೆ ತರಕಾರಿ ಕೊಡುತ್ತಿದ್ದಾರೆ. ಕೆಲವು ಸಣ್ಣ ಪುಟ್ಟ ಹಣಕಾಸು ಸಹಾಯವನ್ನೂ ಮಾಡುತ್ತಿದ್ದರಂತೆ. ಇದರಿಂದಾಗಿ ಪಟೇಲ್’ಗೆ ಸಾಕಷ್ಟು ಸಹಾಯವಾಗುತ್ತಿಂತೆ.

ಎಂಜಿನಿಯರಿಂಗ್ ಪದವಿ ಮುಗಿಸಿದ ಪಟೇಲ್, ಭೋಪಾಲ್’ನಲ್ಲಿ ಉದ್ಯೋಗ ಸಿಗದ ಕಾರಣ ಮರಳಿ ಹಳ್ಳಿಗೆ ಹೋಗಿಬಿಟ್ಟರಂತೆ. ಅಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಆರಂಭಿಸಿದ್ದಾರೆ. ಆದರೆ ಮಧ್ಯ ಪ್ರದೇಶ ಪಬ್ಲಿಕ್ ಸರ್ವೀಸ್’ಗೂ ತಯಾರಿ ನಡೆಸುತ್ತಿದ್ದರಂತೆ. 2017 ರಲ್ಲಿ ಪರೀಕ್ಷೆ ಪಾಸ್ ಆಗಿ ಪೊಲಿಒಸ್ ಹುದ್ದೆಗೆ ಆಯ್ಕೆ ಆಗಿದ್ದಾರೆ. ಈಗ ಗ್ವಾಲಿಯರ್ ನಲ್ಲಿ ಡಿಎಸ್’ಪಿ ಆಗಿ ಕೆಲಸ ಮಾಡುತ್ತಿದ್ದಾರೆ. ‘ನಾನು 14 ವರ್ಷಗಳಿಂದಲೂ ಖಾನ್ ಅನ್ನು ಭೇಟಿಯಾಗಲು‌ ಬಯಸಿದ್ದೆ, ಆದರೆ ಸಾಧ್ಯವಾಗಿರಲಿಲ್ಲ. ಆದರೆ ಟ್ರೈನಿಂಗ್ ಗಾಗಿ ಭೋಪಾಲ್’ಗೆ ಬಂದಿದ್ದಾಗ ಖಾನ್ ಯಾವ ಸ್ಥಳದಲ್ಲಿ ತರಕಾರಿ ಮಾರುತ್ತಿದ್ದನೋ ಅಲ್ಲೇ ಕಾಣಿಸಿದ’ ಎಂದಿದ್ದಾರೆ ಸಂತೋಷ್ ಪಟೇಲ್.

Gautam Adani: ನಕರಾ ಮಾಡಿದ ಬಾಂಗ್ಲಾದೇಶಕ್ಕೆ ಶಾಕ್ ಕೊಟ್ಟ ಅದಾನಿ

ಸಲ್ಮಾನ್ ಖಾನ್, ‘ಆಗ ಸಂತೋಷ್ ಪಟೇಲ್‌ ಬಡವ, ನಾನು ಸಾವಿರಾರು ಜನರಿಗೆ ತರಕಾರಿ ಮಾರುತ್ತೇನೆ ಯಾರೂ ನನ್ನ ಗುರುತು ಹಿಡಿದು, ಹುಡುಕಿಕೊಂಡು ಬಂದಿಲ್ಲ. ಆದರೆ ಪಟೇಲ್ ಬಂದಿದ್ದಾನೆ’ ಎಂದು ಖುಷಿಪಟ್ಟಿದ್ದಾರೆ. ಪಟೇಲ್ ತಮಗೆ, ಸಿಹಿ ಡಬ್ಬಿ ಹಾಗೂ ತುಸು ನಗದು ಹಣ ನೀಡಿದ್ದಾಗಿ ಖಾನ್ ಹೇಳಿಕೊಂಡಿದ್ದಾರೆ.

Exit mobile version