Bengaluru: 56 ಕೋಟಿ ಕದ್ದ ಎಂಜಿನಿಯರ್, ಎರಡು ವರ್ಷದ ಬಳಿಕ ಬಂಧನ

0
101
Bengaluru

Bengaluru

ಬೆಂಗಳೂರಿನಲ್ಲಿ ಕಂಪೆನಿಯೊಂದರಿಂದ 56 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ಕದ್ದಿದ್ದ ಚಾಣಾಕ್ಷ ಎಂಜಿನಿಯರ್ ಒಬ್ಬನನ್ನು ಸೈಬರ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳ್ಳತನ ನಡೆದಿದ್ದು 2022 ರಲ್ಲಿ, ಆದರೆ ಚಾಣಾಕ್ಷ ಕಳ್ಳ, ಎರಡು ವರ್ಷಗಳ ಕಾಲ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆದರೆ ಕೊನೆಗೂ ಒಇಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಸೈಫರ್ ಟೆಕ್ನಾಲಜೀಸ್ ಸಂಸ್ಥೆಯ ಉದ್ಯೋಗಿ ಆಗಿದ್ದ ಬಿ.ಟೆಕ್ ಪದವೀಧರ ಶುಭಾಂಗ್ ಜೈನ್ ಬಂಧಿತ ಆರೋಪಿ. ಶುಭಾಂಗ್ ಜೈನ್, 2021 ರಲ್ಲಿ ಬೆಂಗಳೂರಿನ ಸೈಫರ್ ಟೆಕ್ನಾಲಜೀಸ್ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಅನಲಿಸ್ಟ್, ಫೈನ್ಯಾನ್ಸ್ ವಿಭಾಗಕ್ಕೆ ಕೆಲಸಕ್ಕೆ ಸೇರಿಕೊಂಡ. ಆತನಿಗೆ ಸಂಸ್ಥೆಯ ಎಲ್ಲ ವಾಲೆಟ್ ಗಳ ಪಾಸ್ ವರ್ಡ್’ಗಳನ್ನು ನೀಡಲಾಗಿತ್ತು.

ಕ್ರಿಪ್ರೊ ಕರೆನ್ಸಿ ಟ್ರೇಡ್ ನಲ್ಲಿ ನಿಪುಣನಾಗಿದ್ದ ಶುಭಾಂಗ್ ಜೈನ್, ಕಂಪೆನಿಯ ವಾಲೆಟ್’ನಲ್ಲಿದ್ದ 56 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಎಗರಿಸಿದ್ದಾನೆ‌. ಹೀಗೆ ಎಗರಿಸಿದ ಕ್ರಿಪ್ಟೊ ಕರೆನ್ಸಿಯನ್ನು ತನ್ನ ಬಂಧುಗಳ, ಸ್ನೇಹಿತರ ವಾಲೆಟ್ ಗಳಿಗೆ ವರ್ಗಾವಣೆ ಮಾಡಿದ್ದಾನೆ. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ತಲೆ ಮರೆಸಿಕೊಂಡಿದ್ದಾನೆ. ಕಂಪೆನಿಯ ಸಿಇಓ ಅಖಿಲ್ ಗುಪ್ತ, ಕಂಪೆನಿಯ ವಾಲೆಟ್ ಚೆಕ್ ಮಾಡಿದಾಗ ವಾಲೆಟ್ ಖಾಲಿ ಆಗಿರುವುದು ಗೊತ್ತಾಗಿದೆ‌. ಕೂಡಲೆ ಸಿಬಿಐಗೆ ದೂರು ನೀಡಿದ್ದಾರೆ. ಸಿಬಿಐನವರು ಏಪ್ರಿಲ್ 28, 2022 ಕ್ಕೆ ದೂರನ್ನು ಸೈಬರ್ ಗೆ ವರ್ಗಾವಣೆ ಮಾಡಿದ್ದರು.

ಆಗಿನಿಂದಲೂ ಆರೋಪಿಯ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದರು. ಆದರೆ ಚಾಣಾಕ್ಷನಾಗಿದ್ದ ಶುಭಾಂಗ್, ತಲೆ ಮರೆಸಿಕೊಂಡೇ ಓಡಾಡುತ್ತಿದ್ದ. ದೊಡ್ಡ ಮೊತ್ತದ ಹಣವನ್ನು ನಗದು ಮಾಡಿಕೊಂಡಿದ್ದ, ಆ ಹಣ ಬಳಸಿ ನಗರದಿಂದ ನಗರಕ್ಕೆ ಸುತ್ತುತ್ತಲೇ ಇದ್ದ, ಐಶಾರಾಮಿ ಹೋಟೆಲ್ ಗಳಲ್ಲಿಯೇ ಉಳಿದುಕೊಳ್ಳುತ್ತಿದ್ದ. ಆದರೆ ಎಲ್ಲೆಡೆ ನಕಲಿ ಐಡಿ ಬಳಸುತ್ತಿದ್ದ, ಪದೇ ಪದೇ ಮೊಬೈಲ್, ಸಿಮ್ ಕಾರ್ಡ್ ಬದಲಾವಣೆ ಮಾಡುತ್ತಲೇ ಇದ್ದ.

Bengaluru: ಚಿನ್ನದ ಸರದೊಂದಿಗೆ ಗಣೇಶನ ವಿಸರ್ಜನೆ, ಆಮೇಲೇನಾಯ್ತು?

ಸತತ ಹುಡುಕಾಟದ ಬಳಿಕ ಪೊಲೀಸರು ಆತನ ಒಂದು ಮೊಬೈಲ್ ಫೋನ್ ನಿಂದ ಪದೇ ಪದೇ ಮನೆ ಬ್ರೋಕರ್ ಗಳಿಗೆ ಫೋನ್ ಹೋಗುತ್ತಿರುವುದು ಗಮನಿಸಿ, ಪೊಲೀಸರೆ ಮನೆ ಓನರ್ ಹೆಸರಲ್ಲಿ ಶುಭಾಂಗ್ ಗೆ ಕರೆ ಮಾಡಿ, ಆತನಿಗೆ ಮನೆ ತೋರಿಸುವುದಾಗಿ ಕರೆಸಿಕೊಂಡು ಬಂಧಿಸಿದ್ದಾರೆ. ಸತತ ಎರಡು ವರ್ಷದ ಹುಡುಕಾಟದ ಬಳಿಕ ಕೊನೆಗೂ ಚಾಣಾಕ್ಷ ಎಂಜಿನಿಯರ್ ಸೆರೆಯಾಗಿದೆ.

LEAVE A REPLY

Please enter your comment!
Please enter your name here