Site icon Samastha News

Asteroids: ಭೂಮಿಯತ್ತ ನುಗ್ಗಿ ಬರುತ್ತಿವೆ ಐದು ಬೃಹತ್ ಉಲ್ಕೆಗಳು

Asteroids

Asteroids

ಅಫೋಸಿಸ್ ಹೆಸರಿನ ಬೃಹತ್ ಆಕಾಶ ಕಾಯವೊಂದು 2029 ರಲ್ಲಿ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಹಾದು ಹೋಗಲಿದೆ. ಈ ಆಕಾಶಕಾಯದ ಹಾದು ಹೋಗುವಿಕೆಯ ಬಗ್ಗೆ ವಿಜ್ಞಾನಿಗಳು ಚಿಂತಿತರಾಗಿದ್ದಾರೆ. ಈ ಆಕಾಶಕಾಯದ ಗಾತ್ರ ಮತ್ತು ವೇಗ ವಿಜ್ಞಾನಿಗಳ ತಲೆ ಕೆಡಿಸಿದೆ. ಈ ಆಕಾಶ ಕಾಯ ಭೂಮಿಗೆ ಅಪ್ಪಳಿಸುವುದಿಲ್ಲವಾದರೂ ಅದರ ಬೃಹತ್ ಗಾತ್ರ ಮತ್ತು ವೇಗದಿಂದಾಗಿ ಭೂಮಿಯ ವಾತಾವರಣದಲ್ಲಿ ಕೆಲ ಬದಲಾವಣೆಗಳು ಆಗುವ ಸಂಭವ ಇದೆ ಎನ್ನುವ ಅನುಮಾನ ವಿಜ್ಞಾನಿಗಳದ್ದು. ಇದರ ನಡುವೆ ಇನ್ನೂ ಐದು ಆಕಾಶ ಕಾಯಗಳು ಭೂಮಿಯತ್ತ ನುಗ್ಗಿ ಬರುತ್ತಿವೆ. ಇದೇ ವಾರದಲ್ಲಿ ಈ ಐದೂ ಉಲ್ಕೆಗಳು ಭೂಮಿ ಬಳಿ ಹಾದು ಹೋಗಲಿವೆ. ಅವುಗಳ ಮಾಹಿತಿ ಇಲ್ಲಿದೆ.

2020 GE, 2024 RO11, 2024 RK7, 2024 RW25, and 2024 RP15 ಹೆಸರಿನ ಉಲ್ಕೆಗಳು ಈಗ ಭೂಮಿಯತ್ತ ನುಗ್ಗಿ ಬರುತ್ತಿವೆ. ಆದರೆ ಈ ಉಲ್ಕೆಗಳಿಂದ ಭೂಮಿಗೆ ಯಾವುದೇ ರೀತಿಯ ಹಾನಿ ಆಗದು ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಆದರೆ ಈ ಉಲ್ಕೆಗಳು ಅಧ್ಯಯನ ಯೋಗ್ಯವೆಂದು ಪರಿಗಣಿಸಿ ಉಲ್ಕೆಗಳ ಚಲನೆ, ರಚನೆ ಇನ್ನಿತರೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಲಿದ್ದಾರೆ.

2020 GE, 26 ಅಡಿ ವಿಸ್ತೀರ್ಣ ಹೊಂದಿದ್ದು ಸೆಪ್ಟೆಂಬರ್ 24 ಅಂದರೆ ನಾಳೆ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ನಾಳೆ ಈ ಉಲ್ಕೆಯು ಭೂಮಿಯ 4.10 ಲಕ್ಷ ಮೈಲಿ ಅಂತರದಲ್ಲಿ ಹಾದು ಹೋಗಲಿದೆ. ಇದು ಗಾತ್ರದಲ್ಲಿಯೂ ಬಹಳ ಚಿಕ್ಕದು ವೇಗ ಸಹ ಕಡಿಮೆ.

ಈ ಐದು ಉಲ್ಕೆ ಗುಚ್ಛದಲ್ಲಿ 2024 RO11 ಅತ್ಯಂತ ದೊಡ್ಡದು. ಇದರ ಗಾತ್ರ 120 ಅಡಿ. ಸೆಪ್ಟೆಂಬರ್ 24 ರಂದು ಇದು ಭೂಮಿಗೆ ಅತ್ಯಂತ ಸನಿಹದಲ್ಲಿ ಹಾದು ಹೋಗಲಿದೆ. ಈ ಉಲ್ಕೆಯ ಗಾತ್ರ 120 ಅಡಿ ಆಗಿದ್ದು ಭಾರಿ ವೇಗದಲ್ಲಿ ಇದು ಬಾಹ್ಯಾಕಾಶದಲ್ಲಿ ಚಲನೆಯಲ್ಲಿದೆ.

2024 RK7, ಸೆಪ್ಟೆಂಬರ್ 25 ರಂದು ಭೂಮಿಗೆ ಹತ್ತಿರದಲ್ಲಿ ಹಾದು ಹೋಗಲಿದೆ. ಇದು 100 ಅಡಿ ವಿಸ್ತೀರ್ಣ ಹೊಂದಿದ್ದು ವೇಗವಾಗಿ ಚಲಿಸುತ್ತಿದೆ. ಭೂಮಿಗೆ 4.23 ಲಕ್ಷ ಮೈಲು ಹತ್ತಿರದಲ್ಲಿ ಹಾದು ಹೋಗಲಿದೆ.

Health: ಬೆಳಿಗ್ಗೆ ಏಳಲು ಅಲಾರಾಮ್ ಇಟ್ಟುಕೊಳ್ಳುತ್ತೀರ? ಯಾವುದು ಆರೋಗ್ಯಕ್ಕೆ ಸೂಕ್ತ?

2024 RW25, ಉಲ್ಕೆಯು ಈ ಐದು ಉಲ್ಕಾ ಗುಚ್ಛದಲ್ಲಿ ಭೂಮಿಗೆ ಅತ್ಯಂತ ಹತ್ತಿರದಲ್ಲಿ ಹಾದು ಹೋಗುವ ಉಲ್ಕೆಯಾಗಿದೆ. ಈ ಆಕಾಶ ಕಾಯವು 82 ಅಡಿ ವಿಸ್ತೀರ್ಣ ಹೊಂದಿದೆ. ಭೂಮಿಗೆ 3.83 ಲಕ್ಷ ಮೈಲಿ ಹತ್ತಿರದಲ್ಲಿ ಹಾದು ಹೋಗಲಿದೆ. ಈ ಉಲ್ಕೆಯು ಸೆಪ್ಟೆಂಬರ್ 27 ರಂದು ಭೂಮಿಯ ಹತ್ತಿರದಿಂದ ಹಾದು ಹೋಗಲಿದೆ.

2024 RP15 ಆಕಾಶ ಕಾಯವು 93 ಅಡಿ ವಿಸ್ತೀರ್ಣ ಹೊಂದಿದ್ದು ಹೆಚ್ಚು ವೇಗವನ್ನು ಸಹ ಹೊಂದಿದೆ. ಈ ಉಲ್ಕೆಯು ಸೆಪ್ಟೆಂಬರ್ 27 ರಂದು ಭೂಮಿಯ ಹತ್ತಿರದಿಂದ ಹಾದು ಹೋಗಲಿದೆ. ಇದು ಭೂಮಿಗೆ 4.18 ಲಕ್ಷ ಮೈಲಿ ದೂರದಲ್ಲಿ ಈ ಉಲ್ಕೆ ಹಾದು ಹೋಗಲಿದೆ.

Exit mobile version