Site icon Samastha News

Varthur santosh: ವರ್ತೂರು ಸಂತೋಷ್ ಕೃಪೆ, ಅರಣ್ಯ ಇಲಾಖೆ ಕೈಸೇರಿತು ಕೋಟ್ಯಂತರ ಮೌಲ್ಯದ ಸಂಪತ್ತು

Varthur santosh

Varthur santosh

ವರ್ತೂರು ಸಂತೋಷ್ ಕೃಪೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತು ಅರಣ್ಯ ಇಲಾಖೆ ಪಾಲಾಗಿದೆ. ಬಿಗ್ ಬಾಸ್ ಗೆ ಹೋಗಿದ್ದ ವರ್ತೂರು ಸಂತೋಷ್ ಕೊರಳಿನಲ್ಲಿದ್ದ ಹುಲಿ ಉಗುರಿನಿಂದಾಗಿ ಅವರ ವಿರುದ್ಧ ದೂರು ದಾಖಲಾಗಿ ಜೈಲುವಾಸವನ್ನೂ ಸಹ ಅನುಭವಿಸಿದರು. ಅದಾದ ಬಳಿಕ ಹುಲಿ ಉಗುರು ಹೊಂದಿದ್ದ ಸೆಲೆಬ್ರಿಟಿಗಳಿಗೂ ಸಂಕಷ್ಟ ಶುರುವಾಗಿತ್ತು‌. ಹುಲಿ ಉಗುರು ಧರಿಸಿದ್ದ ಪೊಲೀಸ್ ಒಬ್ಬರ ಬಂಧನವೂ ಆಗಿತ್ತು‌

ಆ ಘಟನೆಯ ಬಳಿಕ ಅರಣ್ಯ ಇಲಾಖೆ, ಹುಲಿ ಉಗುರು ಸೇರಿದಂತೆ ಕಾಡು ಪ್ರಾಣಿಗಳ ಅಂಗಾಂಗಳನ್ನು ಮರಳಿಸಲು ಮೂರು ತಿಂಗಳ ಗಡುವು ನೀಡಿತ್ತು. ಈ ಮೂರು ತಿಂಗಳ ಒಳಗೆ ವಸ್ತುಗಳ ಮರಳಿಸಿದರೆ ಶಿಕ್ಷೆ ದಂಡ ವಿಧಿಸುವುದಿಲ್ಲ ಎಂದಿತ್ತು. ಇದೇ ವರ್ಷದ ಜನವರಿ 11 ರಿಂದ ಮೂರು ತಿಂಗಳ ಕಾಲಾವಧಿ ನೀಡಲಾಗಿತ್ತು. ಜಾಲಾವಧಿ ಇದೀಗ ಮುಕ್ತಾಯವಾಗಿದ್ದು ಕೋಟ್ಯಂತರ ಮೌಲ್ಯದ ವಸ್ತುಗಳು ಅರಣ್ಯ ಇಲಾಖೆ ಕೈಸೇರಿವೆ.

ಹುಲಿ ಉಗುರಿ, ಆನೆ ದಂತ, ಹುಲಿ ಚರ್ಮ, ಜಿಂಕೆ ಕೊಂಬು, ಆನೆ ಬಾಲ, ಮುಳ್ಳುಹಂದಿಯ ಮುಳ್ಳು, ಘೇಂಡಾಮೃಗದ ಕೊಂಬು, ಕಾಡು ಹಂದಿಯ ಕೋರೆ ಇನ್ನೂ ಕೆಲವು ವಸ್ತುಗಳನ್ನು ಸ್ಥಳೀಯ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ವಿಶೇಷವೆಂದರೆ ಅತಿ ಹೆಚ್ಚು ಸಂಪತ್ತು ಸಂಗ್ರಹ ಆಗಿರುವುದು ಬೆಂಗಳೂರಿನಲ್ಲೆ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಹುಲಿ ಉಗುರು, ಹುಲಿ ಚರ್ಮ ಇನ್ನಿತರೆ ಸೇರಿದಂತೆ‌110 ಕ್ಕೂ ಹೆಚ್ಚು ವಸ್ತುಗಳನ್ನು ಬೆಂಗಳೂರಿಗರು ಮರಳಿಸಿದ್ದಾರೆ. ಇದೀಗ ವನ್ಯ ಜೀವಿ ಸಂಪತ್ತು ಮರಳಿಸುವ ಕಾಲಾವಧಿ ಮುಗಿದಿದ್ದು, ಇನ್ನು ಮುಂದೆ ಯಾರದ್ದಾದರೂ ಬಳಿ ಹುಲಿ ಉಗುರು, ಅಥವಾ ಇನ್ಯಾವುದೇ ವನ್ಯ ಜೀವಿ ಅಂಗಗಳು ಕಂಡು ಬಂದರೆ, ವ್ಯಾಪಾರ ಅಥವಾ ಸಾಗಟ ನೀಡಿದ್ದಾರೆ ಕಾನೂನು ರೀತ್ಯ ಅರಣ್ಯ ಇಲಾಖೆ ಕ್ರಮ ಜರುಗಿಸಲಿದೆ.

Exit mobile version