Site icon Samastha News

Adani: ಅದಾನಿ ವಿರುದ್ಧ ಭಾರತದಲ್ಲೂ‌ ದೂರು? ಮಾಜಿ ಸಿಎಂ ಮೇಲೂ ಆರೋಪ

Adani

Adani

ಭಾರತದ ಎರಡನೇ ಅತಿ ದೊಡ್ಡ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ಸರ್ಕಾರ ಈಗಾಗಲೇ ಬಂಧನ ವಾರೆಂಟ್ ಹೊರಡಿಸಿದೆ. ಸೌರ ಶಕ್ತಿ ಪ್ರಾಜೆಕ್ಟ್ ಪಡೆಯಲು ಸಾವಿರಾರು ಕೋಟಿ ಲಂಚ ಕೊಟ್ಟ ಆರೋಪ ಗೌತಮ್ ಅದಾನಿ ಮೇಲೆ ಹೇರಲಾಗಿದೆ. ದೂರು ದಾಖಲಾದ ಬೆನ್ನಲ್ಲೆ ಅದಾನಿ ಸಂಸ್ಥೆಯ ಎಲ್ಲ ಷೇರುಗಳು ಕುಸಿಯಲು ಆರಂಭಿಸಿವೆ. ಇದರ ನಡುವೆ ಈಗ ಅದಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭಾರತದಲ್ಲೂ ಅದಾನಿ ವಿರುದ್ಧ ದೂರು ದಾಖಲಾಗಿವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಮಾಜಿ ಸಿಎಂ ಒಬ್ಬರ ವಿರುದ್ಧವೂ ದೂರು ದಾಖಲಾಗುವ ಸಾಧ್ಯತೆ ಇದೆ.

ಪವರ್ ಪ್ರಾಜೆಕ್ಟ್ ಪಡೆಯಲು ಅದಾನಿ, 2200 ಕೋಟಿಗೂ ಹೆಚ್ಚು ಹಣ ಲಂಚವಾಗಿ ನೀಡಿದ್ದಾರೆ ಎಂದು ಅಮೆರಿಕ ಆರೋಪ ಮಾಡಿದೆ. ಇದೀಗ ಈ ಹಗರಣದಲ್ಲಿ ಮಾಜಿ ಸಿಎಂ ಹೆಸರು ಕೇಳಿ ಬಂದಿದೆ. ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಗೆ 1700 ಕೋಟಿ ಲಂಚವನ್ನು ಅದಾನಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಯುಎಸ್’ಎಸ್ಇಸಿ ಮಾಡಿರುವ ಆರೋಪದಂತೆ ಆಂಧ್ರ ಪ್ರದೇಶ ಬರೋಬ್ಬರಿ 7 ಗಿಗಾವ್ಯಾಟ್ ಸೋಲಾರ್ ಖರೀದಿ ಮಾಡಿಕೊಳ್ಳುವುದಾಗಿ ಹೇಳಿತ್ತಂತೆ. ಆದರೆ ಈ ಒಪ್ಪಂದ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರುಗಳು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಆದ ಬಳಿಕ ಆಗಿದೆ ಎಂದು ಯುಎಸ್’ಎಸ್ಇಸಿ ಹೇಳಿದೆ. ಅದಾನಿ ಗ್ರೀನ್’ನ ಕೆಲ ಅಧಿಕಾರಿಗಳು ಅಜ್ಯೂರ್ ಪವರ್ ಸೋಲಾರ್ ಸಂಸ್ಥೆಯ ಚೇರ್’ಮ್ಯಾನ್ ಗೆ ಹೇಳಿರುವಂತೆ 1700 ಕೋಟಿಗೂ ಹೆಚ್ಚು ಹಣವನ್ನು ‘ಆಂಧ್ರ’ಕ್ಕೆ ಲಂಚವಾಗಿ ನೀಡಿದೆಯಂತೆ.

Gautam Adani: ಅಮೆರಿಕದಲ್ಲಿ ಗೌತಮ್ ಅದಾನಿ‌ ವಿರುದ್ಧ ಗಂಭೀರ ಆರೋಪ, ಬಂಧನ ವಾರೆಂಟ್

ಆದರೆ ಅದಾನಿ ಗ್ರೂಪ್ಸ್, ತಮ್ಮ ಸಂಸ್ಥೆ ಮತ್ತು ಗೌತಮ್ ಅದಾನಿ ಮೇಲೆ ಯುಎಸ್ ನ್ಯಾಯ ಇಲಾಖೆ, ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್’ಚೇಂಜ್ ಕಮಿಷನ್ ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದು, ಅವೆಲ್ಲ ಕೇವಲ ಆರೋಪಗಳಷ್ಟೆ ಯಾವದೂ ಸತ್ಯವಲ್ಲ. ನ್ಯಾಯಾ ವ್ಯವಸ್ಥೆ ಮೂಲಕ ನಾವು ಹೋರಾಡಲಿದ್ದೇವೆ ಎಂದು ಹೇಳಿದೆ.

ಇದೀಗ ಈ ಪ್ರಕರಣದಲ್ಲಿ ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಹೆಸರು ಸಹ ಕೇಳಿ ಬಂದಿದ್ದು, ಭಾರತದಲ್ಲಿಯೂ ಅದಾನಿ ಹಾಗೂ ಜಗನ್ ವಿರುದ್ಧ ದೂರು ದಾಖಲಾಗುತ್ತದೆಯೇ ಕಾದು ನೋಡಬೇಕಿದೆ. ಇತ್ತೀಚೆಗಷ್ಟೆ ಜಗನ್ ಸರ್ಕಾರ ಇಳಿದು ಚಂದ್ರಬಾಬು ನಾಯ್ಡು ಅಧಿಕಾರ‌ ಸ್ವೀಕರಿಸಿದ್ದು, ಜಗನ್ ವಿರುದ್ಧ ತನಿಖೆ ನಡೆಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

Exit mobile version