Rich Indian: ರದ್ದಿ ಆರಿಸುತ್ತಿದ್ದ ಈ ಭಾರತೀಯ ಇಂದು ದುಬೈನ ಭಾರಿ ಶ್ರೀಮಂತರಲ್ಲಿ ಒಬ್ಬ

0
113
Rich Indian

Rich Indian

ದುಬೈನ ಬುರ್ಜ್ ಖಲೀಫಾ ಯಾರಿಗೆ ತಾನೆ ಗೊತ್ತಿಲ್ಲ. ವಿಶ್ವದ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಒಂದು, ಮಾತ್ರವಲ್ಲದೆ ವಿಶ್ವದ ಅತ್ಯಂತ ದುಬಾರಿ ಮತ್ತು ಐಶಾರಾಮಿ ಹೋಟೆಲ್‌ ಸಹ. ಬುರ್ಜ್ ಖಲೀಫಾನಲ್ಲಿ ನಮ್ಮದೂ ಒಂದು ಮನೆ ಇರಬೇಕೆಂಬುದು ಕೋಟ್ಯಂತರ ಮಂದಿಯ ಆಸೆ. ಆದರೆ ಈ ಆಸೆ‌ ಈಡೇರುವುದು ಕೆಲವು ಶ್ರೀಮಂತರಿಗಷ್ಟೆ. ಅಂಥಹಾ‌ ಶ್ರೀಮಂತರಲ್ಲಿ ಒಬ್ಬರು ಭಾರತ ಮೂಲದ ಜಾರ್ಜ್ ವಿ‌ ನೆರಂಪಾರಂಬಿಲ್.

ಜಾರ್ಜ್ ವಿ ನೆರಂಪಾಂಬಿಲ್, ದುಬೈನ ಅತ್ಯಂಯ ಶ್ರೀಮಂತ ಭಾರತೀಯರಲ್ಲಿ ಒಬ್ಬರು. ಪ್ರತಿಷ್ಟಿತ ಬುರ್ಜ್ ಖಲೀಫಾನಲ್ಲಿ ಇವರು ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಅದೂ ಒಂದಲ್ಲ ಬರೊಬ್ಬರಿ 22. ಈ ಅಪಾರ್ಟ್ ಮೆಂಟ್ ಗಳನ್ನು ಬಾಡಿಗೆಗೆ ಬಿಟ್ಟಿದ್ದಾರೆ. ಅಂದಹಾಗೆ ಜಾರ್ಜ್ ಹುಟ್ಟುತ್ತಲೇ ಶ್ರೀಂತರಾಗಿದ್ದವರಲ್ಲ‌. ಮೆಕ್ಯಾನಿಕ್ ಆಗಿ, ರದ್ದಿ ಆರಿಸುವ ಹುಡುಗನಾಗಿ ಹೀಗೆ ಹಲವು ಕೆಲಸಗಳನ್ನು ಮಾಡಿ ಮೇಲೆ ಬಂದವರು. ಇವರ ಸಾಧನೆಯ ಕತೆ ಬಹಳ ಸ್ಪೂರ್ತಿದಾಯಕವಾದುದು.

ಜಾರ್ಜ್, ಕೇರಳದವರು. ತೀವ್ರ ಬಡತನದ ಕುಟುಂಬ ಹಾಗಾಗಿ ಎಳವೆಯಲ್ಲೇ ಶಾಲೆಗೆ ವಿದಾಯ ಹೇಳಿ ಕುಟುಂಬಕ್ಕೆ ಸಹಾಯ ಮಾಡಲೆಂದು ಕೆಲಸಕ್ಕೆ ಇಳಿದರು. ಆರಂಭದಲ್ಲಿ ರದ್ದಿ ಆಯುವ ಕೆಲಸ ಮಾಡಿದರು. ಅದರಿಂದ ದಿನಕ್ಕೆ ಎರಡು-ಮೂರು ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಬಳಿಕ ಬೈಕ್‌ ಮೆಕಾನಿಕ್ ಆದರು. ಅದಾದ ಬಳಿಕ ಹತ್ತಿಯ ಬೀಜದಿಂದ ಅಂಟು ತಯಾರಿಸಿ ಮಾರಲು ಆರಂಭಿಸಿದರು. ಇದು ಅವರ ಮೊದಲ ಉದ್ಯಮವಾಯ್ತು‌.

Online Food Order: ಆನ್ ಲೈನ್ ನಲ್ಲಿ‌ ಊಟ ಆರ್ಡರ್ ಮಾಡುವ‌ ಮುಂಚೆ ಈ ಸುದ್ದಿ‌ ಓದಿ

ಅಷ್ಟರಲ್ಲಿ ಅರಬ್ ರಾಷ್ಟ್ರಗಳು ಪ್ರಗತಿ ಕಾಣಲು ಪ್ರಾರಂಭವಾದವು. 1976 ರಲ್ಲಿ ಜಾರ್ಜ್ ದುಬೈಗೆ ಉದ್ಯೋಗಕ್ಕಾಗಿ ತೆರಳಿದರು. ಕೆಲ ಸಮಯ ದುಬೈನಲ್ಲಿ ಮೆಕ್ಯಾನಿಕ್ ಆಗಿ, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿದ ಜಾರ್ಜ್ ಅರಬ್ ದೇಶಗಳಲ್ಲಿ ಎಸಿ ಉದ್ಯಮಕ್ಕೆ ಸಾಕಷ್ಟು ಅವಕಾಶ ಇರುವುದು ಗಮನಿಸಿದರು. ಕೂಡಲೇ ಕಾರ್ಯಪ್ರವೃತ್ತರಾಗಿ ಎಸಿ ವಿತರಣೆ ಸಂಸ್ಥೆ ಆರಂಭಿಸಿದರು. ಬಳಿಕ ಎಸೊ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದರು ಇದಕ್ಕೆ ಜಿಇಓ ಎಂದು ಹೆಸರಿಟ್ಟರು.

2009 ರಲ್ಲಿ ಬುರ್ಜ್ ಖಲೀಫಾ ಉದ್ಘಾಟನೆಯಾದಾಗ. ಜಾರ್ಜ್ ರ ಹತ್ತಿರದೊಬ್ಬರು, ನಿನಗೆ ಆ ಬಿಲ್ಡಿಂಗ್ ನ ಒಳಗೆ ಹೋಗಲು ಸಹ ಬಿಡಲ್ಲ ಎಂದಿದ್ದರಂತೆ. ಅದೇ ಕೋಪದಲ್ಲಿ ಜಾರ್ಜ್ ಒಂದು ಅಪಾರ್ಟ್ ಮೆಂಟ್ ಖರೀದಿ ಮಾಡಿದ್ದಾರೆ. ಈಗ ಅವರ ಬಳಿ 22 ಬುರ್ಜ್ ಖಲೀಫ ಅಪಾರ್ಟ್ ಮೆಂಟ್ ಗಳಿವೆ. ಜಾರ್ಜ್ ರ ಒಟ್ಟು ಮೌಲ್ಯ 4800 ಕೋಟಿ.

LEAVE A REPLY

Please enter your comment!
Please enter your name here