Freebies
ಸಿದ್ದರಾಮಯ್ಯ ಅವರ ಉಚಿತ ‘ಭಾಗ್ಯ’ಗಳು ದೇಶದಾದ್ಯಂತ ಚರ್ಚೆಯನ್ನೇ ಹುಟ್ಟುಹಾಕಿದ್ದವು. ಜನರಿಗೆ ಹೀಗೆ ಉಚಿತವಾಗಿ ಸೇವೆ, ಸರಕುಗಳನ್ನು ನೀಡುವುದು ಸರಿಯೋ ತಪ್ಪೊ ಎಂಬ ಚರ್ಚೆ ನಡೆಯಿತು. ಸ್ವತಃ ಮೋದಿ ತಮ್ಮ ಭಾಷಣಗಳಲ್ಲಿ ಈ ‘ಫ್ರೀ ಬೀ’ (ಉಚಿತ ಸೇವೆ) ಯನ್ನು ಟೀಕೆ ಮಾಡಿದ್ದರು. ಆದರೆ ಇಲ್ಲೊಬ್ಬ ಕೋಟ್ಯಧೀಶ ಕಳೆದ 36 ವರ್ಷಗಳಿಂದ ಉಚಿತ ಸೇವೆಗಳಿಂದಲೇ ಜೀವನ ನಡೆಸುತ್ತಿದ್ದಾರೆ. ಅದೂ ಐಶಾರಾಮಿ ಜೀವನ!
ಫೋಟೋನಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಹಿರೋಟೊ ಕಿರತಾನಿ. ಜಪಾನಿನ ಈ ವ್ಯಕ್ತಿಯ ವಯಸ್ಸು 75 ವರ್ಷ. ವರ್ಷಕ್ಕೆ 140 ಸಿನಿಮಾ ನೋಡುತ್ತಾರೆ. ಒಳ್ಳೆ ಹೋಟೆಲ್ ಗಳಲ್ಲಿ ಊಟ ಮಾಡುತ್ತಾರೆ. ಮನೊರಂಜನಾ ಕಾರ್ಯಕ್ರಮ ಅಟೆಂಡ್ ಮಾಡುತ್ತಾರೆ. ವರ್ಷಕ್ಕೆ ಹಲವು ಜೊತೆ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಜಿಮ್, ಮಸಾಜ್ ಪಾರ್ಲರ್ ಗಳಿಗೆ ಹೋಗುತ್ತಾರೆ ಆದರೆ ಎಲ್ಲೂ ಹಣ ಕೊಡುವುದಿಲ್ಲ, ಬದಲಿಗೆ ಎಲ್ಲೆಡೆ ಕೊಡುವುದು ಕೂಪನ್ ಮಾತ್ರ.
ಹಿರೋಟೊ ಕಿರತಾನಿ ಜಪಾನಿನ ಚೆಸ್ ಮಾದರಿ ಆಟದ ಒಳ್ಳೆಯ ಕ್ರೀಡಾಪಟು ಆಗಿದ್ದರು. ಅವರನ್ನು ಜಪಾನಿನ ಷೇರು ಕಂಪೆನಿಯೊಂದು ತರಬೇತಿಗೆ ಕರೆಯಿತು. ಆಗ ಷೇರು ಮಾರುಕಟ್ಟೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಹಿರೋಟೊ ಕಿರತಾನಿ, ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಿದರು. ಆರಂಭದಲ್ಲೇ ದೊಡ್ಡ ಮೊತ್ತದ ಹಣ ಗಳಿಸಿದರು. ಆಗೆಲ್ಲ ಹಣವನ್ನು ಚೆನ್ನಾಗಿಯೇ ಖರ್ಚು ಮಾಡುತ್ತಿದ್ದ ಹಿರೋಟೊ ಕಿರತಾನಿ ಹೀಗೆ ಹಠಾತ್ತನೆ ಜಿಪುಣನಾಗಲು ಕಾರಣವಾಗಿದ್ದು 2008 ರ ಮಾರುಕಟ್ಟೆ ಕುಸಿತ. ಆ ಕುಸಿತದಲ್ಲಿ ಸುಮಾರು 25 ಕೋಟಿ ಹಣ ಕಳೆದುಕೊಂಡ ಹಿರೋಟೊ ಕಿರತಾನಿ ಭಾರಿ ನಷ್ಟಕ್ಕೆ ನೂಕಲ್ಪಟ್ಟರು.
ಆಗ ಖರ್ಚು ಕಡಿಮೆ ಮಾಡಲು ಈ ಕೂಪನ್ ಬಳಸಿ ಜೀವನ ಮಾಡಲು ಆರಂಭಿಸಿದರು. ಷೇರು ಖರೀದಿದಾರನಾಗಿದ್ದ ಕಾರಣ ಕೆಲವು ಕಂಪೆನಿಗಳ ಕೂಪನ್ ಗಳು ಹಿರೋಟೊ ಕಿರತಾನಿಗೆ ಬರುತ್ತಿದ್ದವು. ಕೆಲವು ಬಾರಿ ಬೇರೆಯವರಿಂದ ಕೂಪನ್ ಗಳನ್ನು ಪಡೆಯುತ್ತಿದ್ದರು. ಕ್ಯಾಷ್ ಕೂಪನ್ ಸಂಗ್ರಹಿಸಲು ಆರಂಭಿಸಿದರು. ಇದು ಅವರಿಗೆ ಅಭ್ಯಾಸವಾಗಿ ಹೋಯ್ತು. 2008 ರ ಬಳಿಕ ಹಿರೋಟೊ ಕಿರತಾನಿ ಜೀವನ ನಡೆಸುತ್ತಿರುವುದು ಬಹುತೇಕ ಕೂಪನ್ ಗಳನ್ನು ಆಧರಿಸಿಯೆ.
Delhi Election: ದೆಹಲಿ ಚುನಾವಣಾ ಅಖಾಡಕ್ಕೆ ಇಳಿದ RSS, ಕೇಜ್ರಿವಾಲ್’ಗೆ ನಡುಕ
ಕೂಪನ್ ಬಳಸಿ ಖರೀದಿ ಮಾಡಿದ ಸೈಕಲ್ ಏರುವುದು, ಆ ದಿನ ಎಕ್ಸ್ ಪೈರ್ ಆಗುವ ಕೂಪನ್ ಗಳನ್ನು ಹಿಡಿದು ಆ ಕೂಪನ್ ಮೂಲಕ ಲಭ್ಯ ಇರುವ ಸೇವೆಗಳನ್ನು ಪಡೆಯುವುದೇ ಅವರ ನಿತ್ಯದ ಕೆಲಸ. ಇದೇ ಕಾರಣಕ್ಕೆ ಹಿರೋಟೊ ಕಿರತಾನಿ ಅನ್ನು ‘ಕಿಂಗ್ ಆಫ್ ಫ್ರೀ ಬೀಸ್’ (ಉಚಿತ ಸೇವೆಗಳ ರಾಜ) ಎಂದು ಕರೆಯುತ್ತಾರೆ. ಕಂಪೆನಿಗಳಿಂದ ಸರ್ಕಾರಗಳಿಂದ ಬರುವ ಯಾವೊಂದು ಉಚಿತ ಸೇವೆಯನ್ನೂ ಬಳಸದೆ ಬಿಡುವುದಿಲ್ಲ ಈ ವ್ಯಕ್ತಿ.