ಕೆಲವು ವ್ಯಕ್ತಿಗಳ ಪ್ರತಿಭೆ ಅಪರೂಪದಲ್ಲಿ ಅಪರೂಪದ್ದಾಗಿರುತ್ತದೆ. ಅಂಥಹವರಿಗೆ ಎಷ್ಟು ಸಂಬಳ ಕೊಟ್ಟರೂ ಅದು ಕಂಪೆನಿಗೆ ನಷ್ಟವಲ್ಲ. ಹೊಸ ಹೊಸ ಕಂಪೆನಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತ ಗೂಗಲ್’ಗೆ ಸೆಡ್ಡು ಹೊಡೆಯುತ್ತಿರುವ ಸಮಯದಲ್ಲಿ ಗೂಗಲ್, ಕೇವಲ ಒಬ್ಬ ವ್ಯಕ್ತಿಗೆ 22 ಸಾವಿರ ಕೋಟಿ ಹಣ ಕೊಟ್ಟು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದೆ. ಈತ ಸಾಮಾನ್ಯ ವ್ಯಕ್ತಿಯಲ್ಲ, ಈಗ ಎಲ್ಲೆಡೆ ಚರ್ಚೆ ಆಗುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಜೀನಿಯಸ್.
ನೊವಾಮ್ ಶಜೀರ್, 2000 ನೇ ಇಸವಿಯಲ್ಲಿ ಗೂಗಲ್ ಕಂಪೆನಿ ಸೇರಿಕೊಂಡಿದ್ದರು. ಎಐ ವಿಭಾಗದಲ್ಲಿ ಅಪ್ರತಿಮ ಪ್ರತಿಭೆ ಉಳ್ಳವರಾಗಿದ್ದ ನೊವಾಮ್, ತಮ್ಮ ಸಹೋದ್ಯೋಗಿ ಒಟ್ಟಿಗೆ ಸೇರಿಕೊಂಡು ಚಾಟ್ ಬಾಟ್ ಒಂದನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಆ ಚಾಟ್ ಬಾಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಗೂಗಲ್ ಹಿಂದೇಟು ಹಾಕಿತು, ಇದರಿಂದ ಬೇಸರಗೊಂಡ ನೊವಾಮ್, 2021 ರಲ್ಲಿ ಗೂಗಲ್’ಗೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಸಹೋದ್ಯೋಗಿ ಜೊತೆ ಸೇರಿ ತಮ್ಮದೇ ಹೊಸ ಕಂಪೆನಿ ಸ್ಥಾಪಿಸಿದ್ದರು.
ಆದರೆ ಈಗ ಗೂಗಲ್’ಗೆ ಎಐನ ತಾಕತ್ತು ಅರ್ಥವಾಗಿದ್ದು, ಚಾಟ್ ಜಿಪಿಟಿ, ಮೆಟಾ ಎಐ ಇನ್ನಿತರೆ ಎಐ ತಂತ್ರಜ್ಞಾನಗಳಿಗೆ ಠಕ್ಕರ್ ನೀಡಲು ಕಂಪೆನಿ ಬಿಟ್ಟು ಹೋಗಿದ್ದ ನೊವಾಮ್ ಅನ್ನು ವಾಪಸ್ ಕರೆತರುತ್ತಿದೆ. ಅದೂ ಬರೋಬ್ಬರಿ 2.1 ಬಿಲಿಯನ್ ಹಣ ನೀಡಿ. ಅಂದರೆ ಸುಮಾರು 22 ಸಾವಿರ ಕೋಟಿಗೂ ಹೆಚ್ಚು.
ಕಂಪೆನಿಯಿಂದ ಹೊರಗೆ ಹೋಗಿದ್ದ ನೊವಾಮ್ ತಮ್ಮ ಸಹೋದ್ಯೋಗಿ ಡ್ಯಾನಿಯನ್ ಫ್ರೇಟಿಯಸ್ ಜೊತೆ ಸೇರಿ ಕ್ಯಾರೆಕ್ಟರ್ .ಎಐ ಹೆಸರಿನ ಹೊಸ ಎಐ ತಂತ್ರಜ್ಞಾನ ತಯಾರಿಸಿದ್ದರು. ಇದಕ್ಕೆ ಕಳೆದ ವರ್ಷವಷ್ಟೆ 1 ಬಿಲಿಯನ್ ಡಾಲರ್ ಹೂಡಿಕೆ ಸಹ ಸಿಕ್ಕಿತ್ತು. ಈಗ ನೊವಾಮ್ ಅನ್ನು ಕಂಪೆನಿಗೆ ವಾಪಸ್ ಕರೆತರಲೆಂದು ಗೂಗಲ್ ಕ್ಯಾರೆಕ್ಟರ್.ಎಐ ಕಂಪೆನಿಯನ್ನು ನೊವಾಮ್ ನಿಂದ 2.7 ಬಿಲಿಯನ್ ಡಾಲರ್ ಹಣ ಕೊಟ್ಟು ಖರೀದಿ ಮಾಡಿದ್ದು, ನೊವಾಮ್ ಹಾಗೈ ಡ್ಯಾನಿಯಲ್ ಇಬ್ಬರೂ ಗೂಗಲ್’ಗಾಗಿ ಕೆಲಸ ಮಾಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.
Hindu Temple: ಅಮೆರಿಕದಲ್ಲಿ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ: ಹಿಂದೂಗಳ ಮೇಲೆ ಏಕೆ ಈ ದ್ವೇಷ
ನೋವಮ್ ನಿರ್ಮಿಸಿರುವ ಕ್ಯಾರೆಕ್ಟರ್.ಎಐ ವಿಶ್ವದ ಅತ್ಯುತ್ತಮ ಎಐ ತಂತ್ರಜ್ಞಾನವಾಗಿದೆ ಎನ್ನಲಾಗುತ್ತಿದೆ. ಮನುಷ್ಯನ ಯೋಚನಾಲಹರಿಗೆ ಹತ್ತಿರದಲ್ಲಿಯೇ ಈ ಕ್ಯಾರೆಕ್ಟರ್.ಎಐ ಕೆಲಸ ಮಾಡುತ್ತದೆ ಎನ್ನಲಾಗುತ್ತಿದೆ. ಇಂಥಹಾ ಅದ್ಭುತ ಎಐ ನಿರ್ಮಿಸಿರುವ ನೋವಮ್ ಅನ್ನು ಹೇಗಾದರೂ ಮಾಡಿ ಕಂಪೆನಿಗೆ ವಾಪಸ್ ಕರೆತರಲೆಂದು, ಹಾಗೂ ಶಕ್ತಿಯುತ ಕ್ಯಾರೆಕ್ಟರ್.ಎಐ ಅನ್ನು ತನ್ನದಾಗಿಸಿಕೊಳ್ಳಲು ಇಷ್ಟು ದೊಡ್ಡ ಮೊತ್ತದ ಹಣ ನೀಡಿದೆ ಎನ್ನಲಾಗುತ್ತಿದೆ.