Site icon Samastha News

Google Pixel: ಸ್ಯಾಮ್ಸಂಗ್, ಆಪಲ್ ಗೆ ಠಕ್ಕರ್ ಕೊಟ್ಟ ಗೂಗಲ್, ಹೊಸ ಪಿಕ್ಸೆಲ್ ಫೋನು ನೋಡಿದಿರಾ?

Google Pixel

Google Pixel

ಗೂಗಲ್ ವಿಶ್ವದ ದೈತ್ಯ ಸಂಸ್ಥೆ. ಗೂಗಲ್ ಸೃಷ್ಟಿ ಮಾಡಿರುವ‌ ಆನ್ ಲೈನ್ ಇಕೊ‌ ಸಿಸ್ಟಮ್ ಅತ್ಯದ್ಬುತವಾದುದು. ವಿಶ್ವದ ಅತ್ಯಂತ ಲಾಭದಾಯಕ ಸಂಸ್ಥೆಗಳಲ್ಲಿ ಒಂದಾಗಿರುವ ಗೂಗಲ್, ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸರ್ಚ್ ಇಂಜಿನ್, ಯೂಟ್ಯೂಬ್, ನ್ಯೂಸ್ ಶೋಕೇಸ್, ಡಿಸ್ಕವರಿ ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದೇ ಇಲ್ಲ. ಗೂಗಲ್ ಗೆ ಹಲವು ಕ್ಷೇತ್ರದಲ್ಲಿ ಎದುರಾಳಿಯೇ ಇಲ್ಲ. ಆದರೆ ಭಾರಿ ಪ್ರತಿಸ್ಪರ್ಧೆ ಇರುವ ಮೊಬೈಲ್ ಕ್ಷೇತ್ರಕ್ಕೆ ಗೂಗಲ್ ಕಾಲಿಟ್ಟಾಗ, ಇದೊಂದು ದುಸ್ಸಾಹಸ ಎಂದೇ ಪರಿಗಣಿಸಲಾಗಿತ್ತು. ಆದರೆ ಗೂಗಲ್ ದುಸ್ಸಾಹಸದಲ್ಲಿ ಗೆದ್ದಾಗಿದೆ.

ವಿಶ್ವದ ಎಲ್ಲ ಆಂಡ್ರಾಯ್ಡ್ ಫೋನ್ ಗಳಲ್ಲಿಯೂ ಇರುವುದು ಗೂಗಲ್ ಒಡೆತನದ ಆಪರೇಟಿಂಗ್ ಸಿಸ್ಟಂ. ಸ್ವತಃ ಗೂಗಲ್ ಪಿಕ್ಸೆಲ್ ಫೋನ್ ಬಿಡುಗಡೆ ಮಾಡಿ ಪರಿಶುದ್ಧ ಆಂಡ್ರಾಯ್ಡ್ ಅನ್ನು ಅದರಲ್ಲಿ ಬಳಸಿತ್ತು. ಆರಂಭದ ವರ್ಷಗಳಲ್ಲಿ ಗೂಗಲ್ ಪಿಕ್ಸಲ್ ಸಾಮಾನ್ಯ ಫೋನ್ ಎನಿಸಿದರೂ ಸಹ ಬರ ಬರುತ್ತಾ ತಬಲನ್ನ ಪ್ರತಿಸ್ಪರ್ಧಿ ಫೋನ್ ಗಳಿಗಿಂತಲೂ ಉತ್ತಮ ಗುಣಮಟ್ಟದ ಫೋನ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಹೊಸ ಪಿಕ್ಸೆಲ್ ಫೋನ್ ಅನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಹೊಸ ಫೋನ್ ಸ್ಯಾಮ್ಸಂಗ್ ಮತ್ತು ಆಫ್ ಗೆ ನೇರ ಸ್ಪರ್ಧೆ ಒಡ್ಡುತ್ತಿದೆ‌

ಗೂಗಲ್, ಕೆಲವು ದಿನಗಳ ಹಿಂದಷ್ಟೆ ಪಿಕ್ಸೆಲ್ 9, ಪಿಕ್ಸೆಲ್ 9 ಪ್ರೊ, ಪಿಕ್ಸೆಲ್ ಪ್ರೊ ಎಕ್ಸ್ ಎಲ್,‌ ಪಿಕ್ಸೆಲ್ ಫೋಲ್ಡ್ ಫೋನುಗಳನ್ನು ಮಾರುಕಟ್ಟೆಗೆ ತಂದಿದೆ. ಈ ಫೋನುಗಳು ಅತ್ಯುತ್ತಮ ಗುಣಮಟ್ಟ ಹೊಂದಿರುವ ಜೊತೆಗೆ ಸ್ಯಾಮ್ಸಂಗ್, ಆಪಲ್‌ನಲ್ಲಿ ಸಿಗದ ಹಲವು ಅತ್ಯುತ್ತಮ ಫೀಚರ್ ಈ ಫೋನುಗಳಲ್ಲಿ ಸಿಗಲಿದೆ. ಬೆಲೆ ಸಹ ಸ್ಯಾಮ್ಸಂಗ್, ಆಪಲ್ ಗೆ ಹೋಲಿಸಿದರೆ 40% ಕಡಿಮೆ!

ಸ್ಯಾಮ್ಸಂಗ್ ಗ್ಯಾಲಕ್ಸಿಯ ಟಾಪ್ ಫೋನು‌ ಎಸ್ 24 ಕ್ಕಿಂತಲೂ ಹಲವು‌ ವಿಭಾಗದಲ್ಲಿ ಗೂಗಲ್ ಪಿಕ್ಸಲ್ 9 ಫೋನು ಅತ್ಯುತ್ತಮವಾಗಿದೆ‌. ಸ್ಯಾಮ್ಸಂಗ್ ಇನ್ನೂ ತನ್ನ ಫೋನುಗಳಲ್ಲಿ ಹಳೆಯ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 8 ಬಳಸುತ್ತಿದೆ. ಅದೇ ಗೂಗಲ್, ತನ್ನ ಹೊಸ ಪಿಕ್ಸೆಲ್ ಫೋನುಗಳಲ್ಲಿ ಗೂಗಲ್ ಟೆನ್ಶರ್ ಜಿ4 ಅನ್ನು ಬಳಸುತ್ತಿದೆ. ಇದು ಎಐ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ದುಡಿಸಿಕೊಳ್ಳುತ್ತದೆ.

Biriyani: ಬೆಳ್ಳಂಬೆಳಿಗ್ಗೆ ಬಿರಿಯಾನಿ ಹೋಟೆಲ್ ಗಳಿಗೆ ಕಾದಿದೆ ಸರ್ಕಾರದ ಏಟು

ಗೂಗಲ್ ಪಿಕ್ಸಲ್ ನಲ್ಲಿನ ಎಐ‌ ತಂತ್ರಜ್ಞಾನ ಸ್ಯಾಮ್ಸಂಗ್ ನ ಜೆಮಿನಿ ಹಾಗೂ ಆಪಲ್‌ನ ಸಿರಿಗಿಂತಲೂ ಬಹಳ ಉತ್ತಮವಾಗಿದೆ ಎನ್ನಲಾಗುತ್ತಿದೆ. ಸ್ಯಾಮ್ಸಂಗ್ ಹಾಗೂ ಆಪಲ್‌ಗಿಂತಲೂ ಬೆಲೆ ಸಹ ಕಡಿಮೆ ಇರುವ ಕಾರಣ ಪಿಕ್ಸೆಲ್ ಫೋನು ಬಳಕೆದಾರರಿಗೆ ಸುಲಭ ಆಯ್ಕೆ ಆಗಬಲ್ಲದು.

Exit mobile version