Site icon Samastha News

Bengaluru Real Estate: ಬೆಂಗಳೂರಿನ ಈ ಕಚೇರಿಗೆ ತಿಂಗಳಿಗೆ 4 ಕೋಟಿ ಬಾಡಿಗೆ! ನೀಡುತ್ತಿರುವ ಕಂಪೆನಿ ಯಾವುದು?

Bengaluru Real Estate

Bengaluru Real Estate

ಬೆಂಗಳೂರಿನಲ್ಲಿ ಬಾಡಿಗೆ ಸಿಗುವುದು ಕಷ್ಟ, ಸಿಕ್ಕರೂ ಬಾಡಿಗೆ ದುಬಾರಿ ಎಂಬ ದೂರು ಸಾಮಾನ್ಯ. ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಸಣ್ಣ ರೂಂಗಳಿಗೆ 10-15 ಸಾವಿರ ಬಾಡಿಗೆ ಇದೆ. ಅಂಗಡಿಗಳ ಬಾಡಿಗೆ ಲಕ್ಷಗಳಲ್ಲಿದೆ. ಆದರೆ ಬೆಂಗಳೂರಿನ ಕಚೇರಿ ಒಂದಕ್ಕೆ ತಿಂಗಳಿಗೆ ಬರೋಬ್ಬರಿ 4 ಕೋಟಿ ಬಾಡಿಗೆ ನೀಡಲಾಗುತ್ತಿದೆ. ನೀಡುತ್ತಿರುವ ಕಂಪೆನಿ ಸಹ ಸಾಮಾನ್ಯದ್ದಲ್ಲ.

ವಿಶ್ವದ ಟಾಪ್ ಕಂಪೆನಿಗಳಲ್ಲಿ ಒಂದಾದ ಗೂಗಲ್ ಬೆಂಗಳೂರಿನಲ್ಲಿ ಹೊಸ ಬೃಹತ್ ಕಚೇರಿಯೊಂದನ್ನು ಬಾಡಿಗೆಗೆ ಪಡೆದಿದ್ದು ಈ ಕಚೇರಿಗೆ ತಿಂಗಳಿಗೆ 4 ಕೋಟಿ ಬಾಡಿಗೆ ಪಾವತಿಸಲಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ಸ್ ವರದಿ ಮಾಡಿದೆ. ಈ ಕಚೇರಿಯ ವಿಸ್ತೀರ್ಣ ಬರೋಬ್ಬರಿ 6.49 ಲಕ್ಷ ಚದರ ಅಡಿಗಳಾಗಿದೆ. ಪ್ರತಿ ಚದರ ಅಡಿಗೆ ತಿಂಗಳಿಗೆ 62 ರೂಪಾಯಿಗಳನ್ನು ಗೂಗಲ್ ಪಾವತಿಸಲಿದೆ.

ಗೂಗಲ್ ನ ಈ ಬೃಹತ್ ಕಚೇರಿಯು ವೈಟ್ ಫೀಲ್ಡ್ ನಲ್ಲಿದೆ. ಅಮೆರಿಕದ ಕೆಲವು ಬ್ರ್ಯಾಂಚ್ ಗಳನ್ನು ಬೆಂಗಳೂರಿಗೆ ಗೂಗಲ್ ಬದಲಾವಣೆ ಮಾಡುತ್ತಿದ್ದು, ಅದಕ್ಕಾಗಿಯೇ ಇಷ್ಟು ದೊಡ್ಡ ವಿಸ್ತೀರ್ಣದ ಕಚೇರಿಯನ್ನು ಬಾಡಿಗೆಗೆ ಪಡೆದಿದೆ. ಬೆಂಗಳೂರು ಮಾತ್ರವೇ ಅಲ್ಲದೆ ಭಾರತದ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ಗೂಗಲ್ ಹೊಸ ಕಚೇರಿಯನ್ನು ತೆರೆದಿದೆ. ವಿದೇಶಿ ತಂತ್ರಜ್ಞರು ಕೆಲವರು ಇಲ್ಲಿ ಬಂದು ಉದ್ಯೋಗ ಮಾಡುತ್ತಿದ್ದಾರೆ.

ಗೂಗಲ್ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕಚೇರಿ ವಿಸ್ತರಣೆ ಮಾಡುತ್ತಿದ್ದು, ಭಾರತದ ಪ್ರತಿಭಾವಂತ ಎಂಜಿನಿಯರ್ ಗಳನ್ನು ದುಡಿಸಿಕೊಳ್ಳುತ್ತಿದೆ. ಮಾತ್ರವಲ್ಲದೆ ಭಾರತೀಯರಿಗೆ ತನ್ನ ಪ್ರಾಡಕ್ಟ್ ಗಳ ಮಾರಾಟ ಮಾಡುತ್ತಿದೆ. ಭಾರತದ ಬೆಳೆಯುತ್ತಿರವ ಮಾರುಕಟ್ಟೆಯ ಮೇಲೆ ಗೂಗಲ್ ವಿಶ್ವಾಸ ಹೊಂದಿದ್ದು ಗೂಗಲ್ ಮುಂದಿನ ದಿನಗಳಲ್ಲಿ ಭಾರತದಲ್ಲಿ ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಲಿದೆ. ಪ್ರಸ್ತುತ ಭಾರತದಲ್ಲಿ 90 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಗೂಗಲ್ ಹೊಂದಿದೆ.

ಕಚೇರಿ ಸ್ಥಳ ಮಾತ್ರವೇ ಅಲ್ಲದೆ ಪ್ರೊಡಕ್ಷನ್ ಯುನಿಟ್ ಅನ್ನು ಸಹ ಗೂಗಲ್ ಭಾರತದಲ್ಲಿ ಸ್ಥಾಪಿಸಲಿದೆ. ಗೂಗಲ್ ತನ್ನ ಪಿಕ್ಸೆಲ್ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಭಾರತದಲ್ಲಿ ಸ್ಥಾಪನೆ ಮಾಡಲಿದ್ದು, ಪಿಲ್ಸೆಲ್ 8 ಅನ್ನು ಭಾರತದಲ್ಲಿ ತಯಾರು ಮಾಡಲಿದೆ.

Exit mobile version