Site icon Samastha News

Manchanabele Dam: ಮಂಚನಬೆಲೆ ಡ್ಯಾಮ್’ಗೆ ಸಿಗಲಿದೆ ಹೊಸ ರೂಪ, 145 ಕೋಟಿ ಪ್ರಾಜೆಕ್ಟ್

Manchanbele Dam

Manchanabele Dam

ನೀರಾವರಿಯ ಜೊತೆಗೆ ಸ್ಥಳೀಯ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿರುವ ಮಂಚನಬೆಲೆ ಡ್ಯಾಮ್ ಗೆ ಹೊಸ ರೂಪ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮಂಚನಬೆಲೆ ಡ್ಯಾಮ್ ಈಗಾಗಲೇ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಮನಗರ ಜಿಲ್ಲಾ ವ್ಯಾಪ್ತಿಗೆ ಸೇರುವ ಈ ಡ್ಯಾಮ್ ಅನ್ನು ಇದೀಗ ರಾಜ್ಯ ಸರ್ಕಾರವು ಈ ಮಂಚನಬೆಲೆ ಡ್ಯಾಮ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಇದಕ್ಕಾಗಿ 145 ಕೋಟಿ ರೂಪಾಯಿ ಹಣ ಖರ್ಚು ಮಾಡಲಿದೆ.

ಮಂಚನಬೆಲೆ ಡ್ಯಾಮ್ ವ್ಯಾಪ್ತಿಯ 72.3 ಎಕರೆ ಪ್ರದೇಶವನ್ನು ಸರ್ಕಾರ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಈ ಯೋಜನೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿದೆ. ಇದಕ್ಕಾಗಿ‌ 145 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಯೋಜನೆಯ ನೀಲ ನಕ್ಷೆ ಈಗಾಗಲೇ ತಯಾರಾಗಿದೆ. ಕೆಲವು ಅವಶ್ಯಕ ಅನುಮೋದನೆಗಳ ಬಳಿಕ ಪ್ರಾಜೆಕ್ಟ್ ಪ್ರಾರಂಭ ಆಗಲಿದೆ.

ಆಧುನಿಕ ಪ್ರವಾಸಿಗರನ್ನು ಗಮನದಲ್ಲಿ ಇರಿಸಿಕೊಂಡು ಮಂಚನಬೆಲೆ ಡ್ಯಾಮ್ ಅನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆಗಮಿಸುವವರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ. ಆಟಿಕೆ ರೈಲು ನಿಲ್ದಾಣ, ಮೂರು ಎಕರೆ ವಿಶಾಲವಾದ ಅರೈವಲ್ ಜೋನ್, ಇಕೋ‌ ಟೂರಿಸಂ ಜೋನ್, ಸ್ಪಾ, ವೆಲ್ ನೆಸ್ ಸೆಂಟರ್, ಐಶಾರಾಮಿ ಹೋಟೆಲ್ ಮತ್ತು ರೂಂ ವ್ಯವಸ್ಥೆ, ಸ್ವಿಮ್ಮಿಂಗ್ ಪೂಲ್, ಬಾಂಕ್ವೆಟ್ ಹಾಲ್ ಗಳು‌ ಇರಲಿವೆ. ಇವೆಲ್ಲ ಬಂದ ಪ್ರವಾಸಿಗರಿಗೆ ಸೇವೆ ನೀಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ.

ಇದರ ಜೊತೆಗೆ 15.3 ಎಕರೆ ಪ್ರದೇಶದಲ್ಲಿ ವಿಶಾಲವಾದ ಅಡ್ವೇಂಚರ್ ಜೋನ್ ಅಥವಾ ಸಾಹಸ ಕ್ರೀಡೆಗಳ ವಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಗೋ ಕಾರ್ಟಿಂಗ್, ಡರ್ಟ್ ಬೈಲ್ ಟ್ರ್ಯಾಕ್, ಕುದುರೆ ಸವಾರಿ, ಗುಡ್ಡ ಹತ್ತುವುದು, ಹಗ್ಗದ ಸಾಹಸ ಕ್ರೀಡೆ  ಇನ್ನಿತರೆಗಳಿಗೆ ಜಾಗ ಇರಲಿದೆ. ಇವುಗಳ ಜೊತೆಗೆ ಒಂದು ಸಾಂಸ್ಕೃತಿಕ ಹಳ್ಳಿಯ ನಿರ್ಮಾಣವನ್ನೂ ಸಹ ಮಾಡಲಾಗುತ್ತದೆ. ಇದರಲ್ಲಿ ಓಪನ್ ಥಿಯೇಟರ್, ರಂಗಮಂಚ, ಕರಕುಶಲ ವಸ್ತು ಪ್ರದರ್ಶನಕ್ಕೆ ವೇದಿಕೆಗಳು‌ ಇರಲಿವೆ.

60 ಎಕರೆ ಪ್ರದೇಶವನ್ನು ಇಕೊ ಟೂರಿಸಂಗೆ ಬಳಸಲಾಗುತ್ತಿದೆ. ಇಲ್ಲಿ ವಿವಿಧ ಬಗೆಯ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಜಪಾನಿ ಗಾರ್ಡನ್, ರೋಸ್ ಗಾರ್ಡನ್, ಕಾರಂಜಿಗಳು, ಬೃಂದಾವನಗಳು ಇಲ್ಲಿ ನಿರ್ಮಾಣ ಆಗಲಿವೆ. ಇದರ ಜೊತೆಗೆ ಒಂದು ಹೈ ಪಾಯಿಂಟ್ ವೀವ್ ನಿರ್ಮಾಣ ಮಾಡಲಾಗುತ್ತಿದ್ದು,‌ ಇಲ್ಲಿಂದ ಬೆಂಗಳೂರನ್ನು ನೋಡಬಹುದಾಗಿರುತ್ತದೆ.

Loan: ನಿಮ್ಮ ಹೆಸರಲ್ಲಿ ಮತ್ತೊಬ್ಬರು ಸಾಲ ಪಡೆದಿರಬಹುದು, ಹೀಗೆ ಚೆಕ್ ಮಾಡಿಕೊಳ್ಳಿ

ಇವುಗಳ ಜೊತೆಗೆ ಡ್ಯಾಮ್ ನ ಹಿನ್ನೀರು ಬಳಸಿಕೊಂಡು ವಾಟರ್ ಸ್ಪೋರ್ಟ್ ಪಾರ್ಕ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 3.6 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇಲ್ಲು ಕಯಾಕಿಂಗ್, ಜೆಟ್ ಸ್ಕೀ ಇನ್ನಿತರೆಗಳನ್ನು ಮಾಡಲಾಗುತ್ತದೆ. ಇದರ ಜೊತೆಗೆ ಟ್ರಾಫುಕ್ ಸಮಸ್ಯೆ ಇಲ್ಲದಂತೆ ವಿಶಾಲವಾದ ರಸ್ತೆಗಳ ನಿರ್ಮಾಣವನ್ನು ಸಹ ಮಾಡಲಾಗುತ್ತಿದೆ.

Exit mobile version