Darshan: ದರ್ಶನ್ ಚಿತ್ರಗಳ ಸೋರಿಕೆ ಹಿಂದೆ ಸರ್ಕಾರದ ಕೈವಾಡ?

0
117
Darshan

Darshan

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪ ಪಟ್ಟಿಗೆ ಇನ್ನೂ ನ್ಯಾಯಾಧೀಶರ ಅನುಮೋದನೆ ದೊರೆತು, ಸಿಸಿ ಸಂಖ್ಯೆ ನಿಗದಿಯಾಗಿಲ್ಲ. ಆದರೆ ಈ ನಡುವೆ, ಆರೋಪ ಪಟ್ಟಿಯಲ್ಲಿರುವ ಹಲವು ಅಂಶಗಳು ಮತ್ತು ಆರೋಪಿಗಳ ಚಿತ್ರಗಳು, ಸಾಕ್ಷ್ಯವಾಗಿ ಪರಿಗಣಿಸುವ ಚಿತ್ರಗಳು, ಆರೋಪಿಗಳ ಮೊಬೈಲ್ ಸಂಭಾಷಣೆ ಮಾಹಿತಿಗಳು ಬಹಿರಂಗಗೊಂಡಿವೆ. ಗೌಪ್ಯವಾಗಿರಬೇಕಿದ್ದ ಈ ಚಿತ್ರಗಳು, ಪ್ರಕರಣದ ಮಾಹಿತಿ ಹೀಗೆ ವೈರಲ್ ಆಗುತ್ತಿರುವುದರ ಹಿಂದೆ ಸರ್ಕಾರದ ಕೈವಾಡ ಇದೆಯೆಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಕೇಂದ್ರ ಬಿಜೆಪಿ ಸಚಿವ ಪ್ರಹ್ಲಾದ್ ಜೋಶಿ, ‘ಕೊಲೆ ಪ್ರಕರಣದಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕಿದೆ. ಆದರೆ ಹೀಗೆ ಪ್ರಕರಣದ ಮಾಹಿತಿಗಳು ಮಾಧ್ಯಮಗಳ ಕೈಗೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತೆ ಆಗುವಲ್ಲಿ ಸರ್ಕಾರದ ದುರುದ್ದೇಶ ಇದೆಯೆಂಬ ಅನುಮಾನ ಇದೆ’ ಎಂದಿದ್ದಾರೆ.

ವಾಲ್ಮೀಕಿ ಹಗರಣ, ಸಿದ್ದರಾಮಯ್ಯ ವಿರುದ್ಧ ಮಾಡಲಾಗಿರುವ ಮುಡಾ ಹಗರಣದ ಆರೋಪವನ್ನು ಮರೆಮಾಚಲು ದರ್ಶನ್ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು, ಆರೋಪಿಗಳು ಪೊಲೀಸರ ವಶದಲ್ಲಿದ್ದಾಗ, ಮಹಜರು ಮಾಡುತ್ತಿದ್ದಾಗ ತೆಗೆದ ಚಿತ್ರಗಳನ್ನು ಮಾಧ್ಯಮಗಳಿಗೆ ಸಿಗುವಂತೆ ಮಾಡಿ, ಟೆಲಿವಿಷನ್ ಹಾಗೂ ಪ್ರಿಂಟ್ ಮಾಧ್ಯಮಗಳ ಹಾದಿ ತಪ್ಪಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ.

‘ರಿಟ್ರೀವ್ ಮಾಡಿರುವ ಫೋಟೊಗಳನ್ನು ಹೊರಗೆ ಬಿಡುತ್ತಿರುವುದು ಅಕ್ಷಮ್ಯ ಅಪರಾಧ. ನ್ಯಾಯಾಲಯ ಸಹ ಇದನ್ನು ಪರಿಗಣೆಗೆ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಈ ಚಿತ್ರಗಳು ಬಹಿರಂಗವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳನ್ನು ಬಳಸಿ ಸರ್ಕಾರವೇ ಈ ಷಡ್ಯಂತ್ರ ನಡೆಸಿದೆ’ ಎಂದಿದ್ದಾರೆ ಜೋಶಿ.

Darshan Thoogudeepa: ದರ್ಶನ್ ವಿರುದ್ಧ ಚಾರ್ಜ್ ಶೀಟ್: ಮಾಧ್ಯಮಗಳು ಹೇಳುತ್ತಿರುವುದು ಎಷ್ಟು ಸತ್ಯ?

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಗೌಪ್ಯ ಮಾಹಿತಿಗಳು, ಚಿತ್ರಗಳು, ಕೆಲ ವಿಡೊಯೋಗಳು ಸಹ ಈಗಾಗಲೇ ಬಹಿರಂಗಗೊಂಡಿವೆ. ಮಾಧ್ಯಮಗಳಲ್ಲಿ ಪ್ರಸಾರವೂ ಆಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ‌ ವೈರಲ್ ಆಗಿವೆ.

LEAVE A REPLY

Please enter your comment!
Please enter your name here