GT Mall
ಒಂದು ಕಾಲದಲ್ಲಿ ರೈತರು ರಾಜರಂತರ ಮೆರೆದಿದ್ದ ಬೆಂಗಳೂರಿನಲ್ಲಿ ಇಂದು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದೆ. ಕೆಂಪೇಗೌಡರ ಕಾಲದಲ್ಲಿ ರೈತರು ತಾವು ಬೆಳೆದ ಪದಾರ್ಥಗಳನ್ನು ಚಿಕ್ಕಪೇಟೆ, ಬಳೆಪೇಟೆ ಇನ್ನಿತರ ಪೇಟೆಗಳಲ್ಲಿ ಬಂದು ಮಾರುತ್ತಿದ್ದರಂತೆ. ಆಗೆಲ್ಲ ರೈತರಿಗೆ ಬೆಂಗಳೂರಿನಲ್ಲಿ ರಾಜ ಮರ್ಯಾದೆ ಕೊಡಲಾಗುತ್ತಿತ್ತಂತೆ ಆದರೆ ಈಗ ರೈತರೆಂದರೆ ಕ್ಷುಲ್ಲಕವಾಗಿ ಕಾಣಲಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೆಂದರೆ ರೈತನೊಬ್ಬನನ್ನು ಬೆಂಗಳೂರಿನ ಜನಪ್ರಿಯ ಮಾಲ್ ಒಂದು ಒಳಗೆ ಬಿಟ್ಟುಕೊಟ್ಟುಕೊಳ್ಳು ನಿರಾಕರಿಸಿ, ಮಾಲ್ ಮುಂದೆಯೇ ನೆಲದಲ್ಲಿ ಕೂರುವಂತೆ ಮಾಡಿದೆ.
ಆಗಿರುವುದಿಷ್ಟು, ಬೆಂಗಳೂರಿನ ಮಾಗಡಿಯ ರಸ್ತೆ ಜಿಟಿ ಮಾಲ್ ಗೆ, ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ ತಾಯಿಯನ್ನು ಇಂದು ಸಂಜೆ ಸಿನೆಮಾ ತೋರಿಸಲು ಕರೆದುಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕದ ಜನವಾದ್ದರಿಂದ ಅಲ್ಲಿನಂತೆ ಪಂಚೆ, ಶರ್ಟು ತೊಟ್ಟು ಮಾಲ್‌ಗೆ ಬಂದಿದ್ದಾರೆ. ಇದನ್ನು ಗಮನಿಸಿದ ಮಾಲ್ ಸಿಬ್ಬಂದಿ ನಾಗರಾಜ್ ರ ತಂದೆಯನ್ನು ಒಳಗೆ ಬಿಟ್ಟುಕೊಂಡಿಲ್ಲ. ಅವರನ್ನು ಪ್ರವೇಶ ದ್ವಾರದಲ್ಲಿಯೇ ತಡೆದಿದ್ದು, ಪಂಚೆ ಹಾಕಿಕೊಂಡಿರುವ ಕಾರಣಕ್ಕೆ ಅವರನ್ನು ಒಳಗೆ ಬಿಟ್ಟುಕೊಳ್ಳಲಾಗದು ಎಂದು ಜೋರು ಮಾಡಿದ್ದಾರೆ.
CM Siddaramaiah: ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
ಯುವಕ ನಾಗರಾಜ್ ಪರಿ-ಪರಿಯಾಗಿ ಮಾಲ್ ನವರನ್ನು ಕೇಳಿಕೊಂಡರೂ ಸಹ ಮಾಲ್ ಸಿಬ್ಬಂದಿ ನಾಗರಾಜ್ ರ ತಂದೆ, ರೈತಾಪಿ ವ್ಯಕ್ತಿಯನ್ನು ಒಳಗೆ ಬಿಟ್ಟುಕೊಂಡಿಲ್ಲ. ಮಾತ್ರವಲ್ಲದೆ, ಪ್ಯಾಂಟ್ ಧರಿಸಿ ಬಂದರಷ್ಟೆ ಒಳಗೆ ಬಿಡುವುದು ಎಂದಿದ್ದಾರೆ. ಅಂದಹಾಗೆ ನಾಗರಾಜ್ ರ ತಂದೆ ಹಾವೇರಿಯ ಅರೇಮಲ್ಲಾಪುರ ಗ್ರಾಮದಲ್ಲಿ ರೈತರಾಗಿದ್ದರು. ಬೆಂಗಳೂರಿನಲ್ಲಿರುವ ಮಗ ನಾಗರಾಜ್ ನನ್ನು ನೋಡಲೆಂದು ಬಂದಿದ್ದರು. ಮಗ ನಾಗರಾಜ್, ಊರಿಂದ ಬಂದ ಅಪ್ಪ-ಅಮನಿಗೆ ಮಾಲ್‌ನಲ್ಲಿ ಸಿನಿಮಾ ತೋರಿಸುವ ಆಸೆಯಿಮಂದ ಜಿಟಿ ಮಾಲ್‌ಗೆ ಕರೆತಂದಿದ್ದರು. ಆದರೆ ಆ ಯುವಕನ ಆಸೆಗೆ ತಣ್ಣೀರು ಎರಚಿದ್ದಲ್ಲದೆ ಬಟ್ಟೆಯ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಅವಮಾನ ಮಾಡಿದ್ದಾರೆ ಜಿಟಿ ಮಾಲ್ ಸಿಬ್ಬಂದಿ.
ಪಂಚೆ ಕರ್ನಾಟಕದ ಸಾಂಸ್ಕೃತಿಕ ಉಡುಪು. ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಅವರುಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಂಚೆ ತೊಟ್ಟು ಭಾಗವಹಿಸಿ ರಾಜ್ಯದ ಘನತೆ ಮೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲೇ ಇರುವ ಜಿಟಿ ಮಾಲ್ ಪಂಚೆ ತೊಟ್ಟಿರುವ ಕಾರಣಕ್ಕೆ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿ, ರೈತರಿಗೆ, ಪಚೆಗೆ ಅವಮಾನ ಮಾಡಿದೆ. ಜಿಟಿ ಮಾಲ್ ನ ಈ ಉದ್ಧಟತನದ ವರ್ತನೆಗೆ ರೈತ ಪರ ಹೋರಾಟಗಾರರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಕಾದು ನೋಡಬೇಕಿದೆ.