Richest village
ಭಾರತದಲ್ಲಿ ಮಧ್ಯಮ ವರ್ಗ ಹಾಗೂ ಬಡವರ ಸಂಖ್ಯೆಯೇ ಹೆಚ್ಚಿರುವುದು. ಅದರಲ್ಲೂ ಭಾರತದ 90% ಶ್ರೀಮಂತರು ಇರುವುದು ನಗರ ಪ್ರದೇಶದಲ್ಲಿ. ಹಳ್ಳಿಗಳು ಬಡವರಿಗೆ ಮೀಸಲು. ಆದರೆ ಇದು ಎಲ್ಲ ಹಳ್ಳಿಗಳೂ ಹೀಗಿಲ್ಲ. ಭಾರತದ ಹಳ್ಳಿಯೊಂದು ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂದು ಹೆಸರಾಗಿದೆ. ಈ ಊರಿನಲ್ಲಿ ಇರುವವರೆಲ್ಲ ಬಹುತೇಕ ಕೋಟ್ಯಧೀಶರೆ. ಈ ಹಳ್ಳಿಗರ ಮನೆಗಳಲ್ಲಿ ಮನೆಗೆಲಸ ಮಾಡಲು ನಗರದಿಂದ ಜನ ಬರುತ್ತಾರೆ. ಈ ಹಳ್ಳಿ ಇರುವುದು ಗಜರಾತ್’ನಲ್ಲಿ ಹಳ್ಳಿಯ ಹೆಸರು ಮಾಧಪಾರ್.
ಮಾಧಪಾರ್, ಗುಜರಾತ್ ನ ಪೋರಬಂದರು ನಗರದಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರವಾದ ಕಚ್ ನಿಂದಲೂ ಸುಮಾರು 100 ಕಿ.ಮೀ ದೂರದಲ್ಲಿದೆ. ಹಳ್ಳಿಯಲ್ಲಿ ಸುಮಾರು 32 ಸಾವಿರ ನಿವಾಸಿಗಳಿದ್ದಾರೆ. 1200 ಕುಟುಂಬಗಳಿದ್ದು, ಬಹುತೇಕ ಕುಟುಂಬಗಳು ಕೋಟ್ಯಧೀಶ ಕುಟುಂಬಗಳೇ. ಈ ಊರಿನ ಬಹುತೇಕ ಮಂದಿ ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಕೋಟ್ಯಧೀಶರ ಈ ಹಳ್ಳಿ ಗುಜರಾತ್ ನ ಅತ್ಯಂತ ಸ್ವಚ್ಛ, ಸೌಲಭ್ಯ ಹೊಂದಿರುವ ಹಳ್ಳಿಯೂ ಸಹ ಆಗಿದೆ.
ಈ ಊರಿನ ಬಹುತೇಕ ಕುಟುಂಬಗಳು ಉದ್ಯಮ ನೆಚ್ಚಿಕೊಂಡವರು. ಅದೂ ಭಾರತದಲ್ಲಿ ಅಲ್ಲ ಬದಲಿಗೆ ವಿದೇಶಗಳಲ್ಲಿ ಉದ್ಯಮ ನಡೆಸುತ್ತಾರೆ. ಈ ಊರಿನ ಬಹುತೇಕ ಕುಟುಂಬಗಳು ಅಥವಾ ಕುಟುಂಬ ಸದಸ್ಯರುಗಳು ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ ಹಳ್ಳಿಯ ಜೊತೆಗ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಂದಹಾಗೆ ಈ ಸಣ್ಣ ಹಳ್ಳಿಯಲ್ಲಿ ದೇಶದ ಪ್ರಮುಖ 17 ಬ್ಯಾಂಕುಗಳ ಶಾಖೆಗಳಿವೆ. ಈ ಊರಿನ ಜನ ಬರೋಬ್ಬರಿ 7 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಈ ಬ್ಯಾಂಕುಗಳಲ್ಲಿ ಎಫ್ ಡಿ ಮಾಡಿದ್ದಾರೆ. ಸೇವಿಂಗ್ಸ್ ಖಾತೆ, ಇತರೆ ಹೂಡಿಕೆಗಳನ್ನು ಸೇರಿಸಿಕೊಂಡರೆ ಲೆಕ್ಕ ದುಪ್ಪಟ್ಟಾಗುತ್ತದೆ.
ಉದ್ಯಮದ ಜೊತೆಗೆ ಕೃಷಿಯನ್ನೂ ಸಹ ಈ ಊರಿನ ಜನ ಮಾಡುತ್ತಾರೆ. ಮಾವು, ಕಬ್ಬು, ಜೋಳಗಳನ್ನು ಈ ಊರಿನಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಕೃಷಿ ಕಾರ್ಯಕ್ಕೆ ಬಹುತೇಕ ಪರ ಊರಿನ ಕಾರ್ಮಿಕರ ಮೇಲೆಯೇ ಅವಲಂಬಿತವಾಗಿದ್ದಾರೆ. ಇನ್ನು 1968 ರಲ್ಲಿ ಲಂಡನ್ ನಲ್ಲಿ ಮಾಧಪಾರ್ ವಿಲೇಜ್ ಅಸೋಸಿಯೇಷನ್ ಅನ್ನು ಪ್ರಾರಂಭ ಮಾಡಲಾಗಿತ್ತು. ಲಂಡನ್ ಹಾಗೂ ಇತರೆ ಕಡೆಗಳಲ್ಲಿ ನೆಲೆಸಿದ್ದ ಮಾಧಪಾರ್ ನ ಜನರು ತಮ್ಮ ಹಳ್ಳಿಯೊಂದಿಗೆ ನಂಟು ಕಳೆದುಕೊಳ್ಳದೆ ಇರಲು ಈ ಅಸೋಸೊಯೇಷನ್ ಪ್ರಾರಂಭಿಸಲಾಗಿತ್ತು. ಈಗಲೂ ಸಹ ಅದು ಚಾಲ್ತಿಯಲ್ಲಿದೆ.
Innovation: ಕನ್ನಡಕ ಧರಿಸುವವರಿಗೊಂದು ಶುಭ ಸುದ್ದಿ: ಬಂದಿದೆ ಐ ಡ್ರಾಪ್ಸ್
ಮಾಧಪಾರ್, ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂದು ಗುರುತಿಸಿಕೊಂಡಿದ್ದು, ಈ ಹಳ್ಳಿಯನ್ನು ನೋಡಲೆಂದು ವರ್ಷಕ್ಕೆ ಹಲವಾರು ಮಂದಿ ಆಗಮಿಸುತ್ತಾರೆ.