Salman Khan
ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ರ (Salman Khan) ಮುಂಬೈನ ಮನೆ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ಬಳಿ ಇಂದು (ಏಪ್ರಿಲ್ 14) ಬೆಳಿಗ್ಗೆ ಗುಂಡಿನ ದಾಳಿ ನಡೆದಿದೆ. ಕೆಲವು ದುಷ್ಕರ್ಮಿಯೊಬ್ಬ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ ಗಡೆಗೆ ಗುರಿಯಿಟ್ಟು ಕೆಲವು ಸುತ್ತು ಗುಂಡು ಹಾರಿಸಿದ್ದಾನೆ. ಘಟನೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ಮನೆ ಮುಂದೆ ನಿಂತು ಗುಂಡು ಹಾರಿಸಿ, ಕೂಡಲೇ ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಈ ಘಟನೆ ಸಲ್ಮಾನ್ ಖಾನ್ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಬೈಕ್ನಲ್ಲಿ ಬಂದ ವ್ಯಕ್ತಿ ಗ್ಯಾಲೆಕ್ಸಿ ಅಪಾರ್ಟ್ಮೆಂಟ್ನ ಕಿಟಕಿಗಳಿಗೆ ಗುರಿ ಇಟ್ಟು ಬಂದೂಕು ಚಲಾಯಿಸಿದ್ದು, ಕೆಲವು ಗುಂಡುಗಳು ಗೋಡೆಗೆ ತಾಗಿ ಗೋಡೆಯಲ್ಲಿ ಛೇದಗಳು ಉಂಟಾಗಿವೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇದೀಗ ಫೋರೆನ್ಸಿಕ್ ತಜ್ಞರು ಸಹ ಸ್ಥಳಕ್ಕೆ ಆಗಮಿಸಿದ್ದು ಗುಂಡುಗಳನ್ನು ಸಂಗ್ರಹಿಸಿದ್ದಾರೆ. ಗುಂಡು ತಗುಲಿ ಗೋಡೆಗಳಲ್ಲಿ ಆಗಿರುವ ರಂಧ್ರಗಳ ಅಳತೆ ಹಾಗೂ ಚಿತ್ರಗಳನ್ನು ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.
ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಕಲ್ಲೇಟು, ಹಣೆಗೆ ಪೆಟ್ಟು
ಸಲ್ಮಾನ್ ಖಾನ್, ಅತಿ ಹೆಚ್ಚಿನ ಜೀವಭಯವಿರುವ ಭಾರತದ 10 ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಹಾಗೂ ಅವನ ಸಹಚರರು ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಪಣ ತೊಟ್ಟಿದ್ದು ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಆಗಾಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈ ಹಿಂದೆಯೂ ಸಹ ಕೆಲವು ಬಾರಿ ಸಲ್ಮಾನ್ ಖಾನ್ ಮೇಲೆ ಕೊಲೆ ಯತ್ನಗಳನ್ನು ಸಹ ನಡೆಸಿದ್ದು, ಅವೆಲ್ಲವೂ ವಿಫಲವಾಗಿವೆ.
ಸಲ್ಮಾನ್ ಖಾನ್ಗೆ ಆಗಾಗ್ಗೆ ಜೀವ ಬೆದರಿಕೆ ಕರೆಗಳು, ಜೀವ ಬೆದರಿಕೆ ಇ-ಮೇಲ್ಗಳು ಆಗಾಗ್ಗೆ ಬರುತ್ತಲೇ ಇರುತ್ತವೆ. ಸಲ್ಮಾನ್ ಖಾನ್ಗೆ ವೈ ಪ್ಲಸ್ ಭದ್ರತೆಯನ್ನು ಸಹ ಈಗಾಗಲೇ ನೀಡಲಾಗಿದೆ. ಸಲ್ಮಾನ್ ಖಾನ್ ಸಹ ತಮ್ಮ ಭದ್ರತೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪರವಾನಗಿ ಹೊಂದಿರುವ ಬಂದೂಕುಗಳು, ಬಂದೂಕುಗಳನ್ನು ಹೊಂದಿರುವ ವ್ಯಕ್ತಿಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಗುಂಡು ನಿರೋಧಕ ಕಾರುಗಳಲ್ಲಿ ಮಾತ್ರವೇ ಓಡಾಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿಲ್ಲ ಸಹ.
[…] ಸಲ್ಮಾನ್ ಖಾನ್ ಮನೆ ಬಳಿ ಗುಂಡಿನ ದಾಳಿ, ಪೊಲೀ… […]
[…] ಸಲ್ಮಾನ್ ಖಾನ್ ಮನೆ ಬಳಿ ಗುಂಡಿನ ದಾಳಿ, ಪೊಲೀ… […]